Spread the love
  • 4
    Shares

ಆಲೂಗಡ್ಡೆ ಮ್ಯಾಶ್ | Potato Mash for Babies Recipe in Kannada

ಆಲೂಗಡ್ಡೆ ಮೃದುವಾದ ಸ್ಥಿರತೆ ಒಳ್ಳೆಯ ಶಿಶು ಆಹಾರವಾಗುವುದು,ಯಾವ ಅಲರ್ಜಿಯು ಆಗುವುದಿಲ್ಲ ಮತ್ತು ಪ್ರತಿಯೊಬ್ಬರ ನೆಚ್ಚಿನ ತರಕಾರಿ. ಶಿಶುಗಳಲ್ಲಿ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸುತ್ತದೆ. ಹಾಲನ್ನು ಬಿಡಿಸುವಾಗ ಉತ್ತಮ ಆಹಾರ.ಶಿಶುಗಳಿಗೆ ಜೀರ್ಣಿಸಿಕೊಳ್ಳುವುದಕ್ಕೆ  ಕಷ್ಟವಾಗುವುದಿಲ್ಲ, ಆದರೆ ಕಡಿಮೆ ಪ್ರಮಾಣದಲ್ಲಿ ನೀಡುವುದು ಒಳ್ಳೆಯದು. ಒಂದು ಸೂಚನೆ, ಯಾವುದೇ ಹೊಸ ಆಹಾರವನ್ನು ಪರಿಚಯಿಸುವಾಗ ಬೆಳಿಗ್ಗೆ ನೀಡಿದರೆ ಆಹಾರದ ಅಲರ್ಜಿ ಇದ್ದರೆ  ಸುಲಭವಾಗಿ ಕಂಡುಹಿಡಿಯಬಹುದು. ಆಲೂಗಡ್ಡೆ ಮ್ಯಾಶ್ 8 ತಿಂಗಳು ಮೇಲ್ಪಟ್ಟ ಮಗುವಿಗೆ ನೀಡಬಹುದು ಮತ್ತು ಅಂಬೆಗಾಲಿಡುವ ಮಕ್ಕಳಿಗೂ ನೀಡಬಹುದು.ಮಕ್ಕಳಿಗೆ ರುಚಿಯಾಗಿರುತ್ತದೆ, ತಿನ್ನಲು ಇಷ್ಟಪಡುತ್ತಾರೆ.

Creamy Potato Mash for babies or kids kannada hindi recipe baby food recipe weaning food

ಆಲೂಗಡ್ಡೆಗಳಲ್ಲಿ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಸಮೃದ್ಧವಾಗಿರುತ್ತದೆ, ಇದರಿಂದಾಗಿ ಆರೋಗ್ಯಕರವಾಗಿ ತೂಕ ಹೆಚ್ಚಾಗುವುದು. ಬೆಳೆಯುವ ಮಕ್ಕಳಿಗೆ ಮೂಳೆಯ ಬೆಳವಣಿಗೆಯಲ್ಲಿ ಸಹಾಯವಾಗುವುದು ಮತ್ತು ಚರ್ಮಕ್ಕೆ ಉತ್ತಮವಾದ ವಿಟಮಿನ್ ಸಿ ಸಿಗುತ್ತದೆ. ಆಲೂಗಡ್ಡೆಗಳಲ್ಲಿರುವ ಕೋಲೀನ್ ಅಂಶ ಪುಟ್ಟ ಮಕ್ಕಳಿಗೆ ಒಳ್ಳೆಯ ನಿದ್ರೆ, ನೆನಪಿನ ಶಕ್ತಿ ಮತ್ತು ಕಲಿಕೆಯ ಸುಧಾರಣೆಗೆ ಸಹಾಯ ಮಾಡುತ್ತದೆ. ಈ ಪಾಕವಿಧಾನದಲ್ಲಿ ಒಂದು ವರ್ಷದೊಳಗಿನ ಶಿಶುಗಳಿಗೆ ಉಪ್ಪುರಹಿತವಾದ ಬೆಣ್ಣೆಯನ್ನು ಉಪಯೋಗಿಸುವುದು ಸೂಕ್ತ. ಉಪ್ಪು ಬೇಕಿದ್ದರೆ ಒಂದು ವರ್ಷ ಮೇಲ್ಪಟ್ಟ ಶಿಶುಗಳಿಗೆ ಬಳಸಬಹುದು. ಎದೆ ಹಾಲು / ಫಾರ್ಮುಲಾ ಹಾಲು /ಬೆಣ್ಣೆ ಪಾಕವಿಧಾನಕ್ಕೆ ಕೆನೆಯಾದ ವಿನ್ಯಾಸ ನೀಡುತ್ತದೆ ಮತ್ತು ಉತ್ತಮವಾದ ಪರಿಮಳವನ್ನು ನೀಡುವುದು.

ನಮ್ಮ ಇತರ ತೂಕವನ್ನು ಹೆಚ್ಚಿಸುವ ಆಹಾರದ ಪಾಕವಿಧಾನಗಳನ್ನು ನೀಡಲಾಗಿದೆ ಪ್ರಯತ್ನಿಸಿ ನೋಡಿ. ಪನೀರ್ ಪಾಕವಿಧಾನಗಳು ತೂಕ ಹೆಚ್ಚಾಗುವ ಉತ್ತಮ ಶಿಶು ಆಹಾರದ ಆಯ್ಕೆಗಳಾಗಿವೆ. ನೀವು ಹಾಲು ಬಿಡಿಸುವ ಪ್ರಕ್ರಿಯೆ ಶುರು ಮಾಡುವುದರಲ್ಲಿದ್ದರೆ 3 ತರಕಾರಿ / ಹಣ್ಣುಗಳ ರಸದಿಂದ ಮೊದಲ ಆಹಾರವಾಗಿ ಪ್ರಾರಂಭಿಸುವುದು ಉತ್ತಮ. ಮನೆಯಲ್ಲಿ ತಯಾರಿಸಿರುವ  ಒಣ ಹಣ್ಣುಗಳ ಪುಡಿ ಆರೋಗ್ಯಕರವಾಗಿ ತೂಕ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಯಾವುದೇ ಶಿಶು ಆಹಾರಕ್ಕೆ ಸೇರಿಸಬಹುದು.

ಆಲೂಗಡ್ಡೆ ಮ್ಯಾಶ್ ವಿಡಿಯೋ ರೆಸಿಪಿ | Potato Mash for Babies Recipe in Kannada :

Kannada Subscribe Button TOTS AND MOMS

ಆಲೂಗಡ್ಡೆ ಮ್ಯಾಶ್ ವಿಡಿಯೋ ರೆಸಿಪಿ 

ಆಲೂಗಡ್ಡೆ ಮ್ಯಾಶ್

ಆಲೂಗಡ್ಡೆಯ ಮೃದುವಾದ ಸ್ಥಿರತೆ ಒಳ್ಳೆಯ ಶಿಶು ಆಹಾರವಾಗುವುದು,ಯಾವ ಅಲರ್ಜಿಯು ಆಗುವುದಿಲ್ಲ ಮತ್ತು ಪ್ರತಿಯೊಬ್ಬರ ನೆಚ್ಚಿನ ತರಕಾರಿ. ಶಿಶುಗಳಲ್ಲಿ ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸುತ್ತದೆ. ಹಾಲನ್ನು ಕ್ರಮೇಣ ಬಿಡಿಸುವಾಗ ಪರ್ಯಾಯವಾದ ನೀಡಬಹುದಾದ ಉತ್ತಮ ಆಹಾರ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಆಲೂಗಡ್ಡೆ - 1
  2. ಫಾರ್ಮುಲಾ ಹಾಲು / ಎದೆ ಹಾಲು- 1 tbsp
  3. ಬೆಣ್ಣೆ ಅಥವಾ ಚೀಸ್ - 1 tbsp (ಉಪ್ಪುರಹಿತ)
  4. ಕಾಳು ಮೆಣಸಿನ ಪುಡಿ – ಚಿಟಕೆ
  5. ಉಪ್ಪು – ಬೇಕಾದರೆ
  6. ಕೊತ್ತಂಬರಿ ಎಲೆಗಳು - ಅಲಂಕರಿಸಲು

ವಿಧಾನ

  1. ಒಂದು ತಾಜಾ ಆಲೂಗೆಡ್ಡೆ ತೆಗೆದುಕೊಂಡು ಸಿಪ್ಪೆ ತೆಗೆದು, ಕೆಳಗೆ ತೋರಿಸಿರುವಂತೆ ಸಣ್ಣಗೆ ಕತ್ತರಿಸಿ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರಲ್ಲಿ ಕಡಿಮೆ ಉರಿಯಲ್ಲಿ ಕತ್ತರಿಸಿದ ಆಲೂಗಡ್ಡೆ ಹಾಕಿ ಮುಚ್ಚಳವನ್ನು ಮುಚ್ಚಿ 5-10 ನಿಮಿಷಗಳ ಕಾಲ ಮೃದುವಾಗುವ ತನಕ ಬೇಯಿಸಿ.
  2. ಚಾಕು ಅಥವಾ ಫೋರ್ಕ್ ಅನ್ನು ಉಪಯೋಗಿಸಿ ಆಲೂಗೆಡ್ಡೆ ಬೆಂದಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ. ಮೃದುವಾಗಿ  ಚೆನ್ನಾಗಿ ಬೇಯಿಸಿಕೊಳ್ಳಬೇಕು. ಒಂದು ಬಟ್ಟಲಿನಲ್ಲಿ ಫೋರ್ಕ್ ನ ಸಹಾಯದಿಂದ ಆಲುಗಡ್ಡೆ ( ಮ್ಯಾಶ್ )ಹಿಸುಕಿ.
  3. ಎದೆಹಾಲು ಅಥವಾ ಸೂತ್ರದ ಹಾಲು ಸೇರಿಸಿದರೆ ಕೆನೆಯುಕ್ತವಾಗುವುದು. ಸ್ವಲ್ಪ ಉಪ್ಪು (1 ವರ್ಷ ಮೇಲ್ಪಟ್ಟ ಮಕ್ಕಳಿಗೆ ) ಮತ್ತು ಮೆಣಸಿನ ಪುಡಿ ಹಾಕಬಹುದು.
  4. ಮೃದುವಾದ ಕೆನೆಯುಕ್ತ ವಿನ್ಯಾಸ ಬರುವ ತನಕ ಮಿಶ್ರಣ ಮಾಡಬೇಕು. ಶುದ್ಧವಾದ ಬಟ್ಟಲಿಗೆ ಹಾಕಿ ಮಗುವಿಗೆ ನೀಡಬಹುದು.
  5. ಆಲೂಗಡ್ಡೆ ಮ್ಯಾಶ್ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ

ಆಲೂಗಡ್ಡೆ ಮ್ಯಾಶ್

Creamy Potato Mash for babies or kids kannada hindi recipe baby food recipe weaning food

ಆಲೂಗಡ್ಡೆ ಮ್ಯಾಶ್ ಮಾಡುವ ವಿಧಾನ:

1. ಒಂದು ತಾಜಾ ಆಲೂಗೆಡ್ಡೆ ತೆಗೆದುಕೊಂಡು ಸಿಪ್ಪೆ ತೆಗೆದು, ಕೆಳಗೆ ತೋರಿಸಿರುವಂತೆ ಸಣ್ಣಗೆ ಕತ್ತರಿಸಿ, ಒಂದು ಪಾತ್ರೆಯಲ್ಲಿ ಸ್ವಲ್ಪ ನೀರಲ್ಲಿ ಕಡಿಮೆ ಉರಿಯಲ್ಲಿ ಕತ್ತರಿಸಿದ ಆಲೂಗಡ್ಡೆ ಹಾಕಿ ಮುಚ್ಚಳವನ್ನು ಮುಚ್ಚಿ 5-10 ನಿಮಿಷಗಳ ಕಾಲ ಮೃದುವಾಗುವ ತನಕ ಬೇಯಿಸಿ.

Creamy Potato Mash for babies or kids kannada hindi recipe baby food recipe weaning food

2. ಚಾಕು ಅಥವಾ ಫೋರ್ಕ್ ಅನ್ನು ಉಪಯೋಗಿಸಿ ಆಲೂಗೆಡ್ಡೆ ಬೆಂದಿರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ. ಮೃದುವಾಗಿ  ಚೆನ್ನಾಗಿ ಬೇಯಿಸಿಕೊಳ್ಳಬೇಕು. ಒಂದು ಬಟ್ಟಲಿನಲ್ಲಿ ಫೋರ್ಕ್ ನ ಸಹಾಯದಿಂದ ಆಲುಗಡ್ಡೆ (ಮ್ಯಾಶ್) ಹಿಸುಕಿ.

Creamy Potato Mash for babies or kids kannada hindi recipe baby food recipe weaning food

3. ಎದೆಹಾಲು ಅಥವಾ ಸೂತ್ರದ ಹಾಲು ಸೇರಿಸಿದರೆ ಕೆನೆಯುಕ್ತವಾಗುವುದು. ಸ್ವಲ್ಪ ಉಪ್ಪು (1 ವರ್ಷ ಮೇಲ್ಪಟ್ಟ ಮಕ್ಕಳಿಗೆ ) ಮತ್ತು ಮೆಣಸಿನ ಪುಡಿ ಹಾಕಬಹುದು.
Creamy Potato Mash for babies or kids kannada hindi recipe baby food recipe weaning food

4.ಮೃದುವಾದ ಕೆನೆಯುಕ್ತ ವಿನ್ಯಾಸ ಬರುವ ತನಕ ಮಿಶ್ರಣ ಮಾಡಬೇಕು. ಶುದ್ಧವಾದ ಬಟ್ಟಲಿಗೆ ಹಾಕಿ ಮಗುವಿಗೆ ನೀಡಬಹುದು.

Creamy Potato Mash for babies or kids kannada hindi recipe baby food recipe weaning food

5. ಆಲೂಗಡ್ಡೆ ಮ್ಯಾಶ್ ಸಿದ್ಧವಾಗಿದೆ.

ಆಲೂಗಡ್ಡೆ ಮ್ಯಾಶ್

Creamy Potato Mash for babies or kids kannada hindi recipe baby food recipe weaning food

ಸೂಚನೆ :

1. ಯಾವಾಗಲು ತಾಜಾ ಆಲೂಗಡ್ಡೆ ಆಯ್ಕೆ ಮಾಡಬೇಕು.

2. ಮಗುವಿಗೆ ಅಗತ್ಯವಿರುವ ಸ್ಥಿರತೆಯನ್ನು  ಪಡೆಯಲು ಬೇಕಾಗುವಷ್ಟು ಎದೆ ಹಾಲು ಸೇರಿಸಬೇಕು ಅಥವಾ ಸೂತ್ರದ ಹಾಲನ್ನು ಸೇರಿಸಬಹುದು.

3. ಒಂದು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಉಪ್ಪು ಹಾಕಿ ಮಾಡಬಹುದು.

4. ಗಮನಿಸಿ -ತ್ವರಿತವಾಗಿ  ತಯಾರಿಸಲು ಬ್ಲೆಂಡರ್ / ಮಿಕ್ಸರ್ ಅನ್ನು ಬಳಸಬಹುದು ಆದರೆ ಕೆನೆಯುಕ್ತವಾಗಿರುವುದಿಲ್ಲ ಅಂಟಂಟಾದ ಮಿಶ್ರಣವಾಗುವುದು.

5. ಶಿಶುಗಳಲ್ಲಿ ಕಾಳು ಮೆಣಸು ಬಳಸುವುದರಿಂದ ಅನಿಲ ಸಮಸ್ಯೆಯನ್ನು ತಪ್ಪಿಸಲು ಸಹಾಯವಾಗುವುದು.

ಶಿಶುಗಳಿಗೆ ಯಾವುದೇ ಹೊಸ ಆಹಾರವನ್ನು ನೀಡುವ ಮೊದಲು ಶಿಶುವೈದ್ಯರ ಜೊತೆ ಯಾವಾಗಲೂ ಸಮಾಲೋಚನೆ ಮಾಡಿದ ನಂತರ ನೀಡುವುದು ಸೂಕ್ತ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 4
    Shares