Spread the love
  • 21
    Shares

ಶಿಶುಗಳಿಗೆ ತೆಂಗಿನಕಾಯಿ ಸಕ್ಕರೆ ಕೊಡಬಹುದೇ? | Can I give my baby Coconut Sugar in KannadaCan I give my baby Coconut Sugar? kannada hindi tenginakayi sakkare naariyal shakkar benefits uses

ತೆಂಗಿನಕಾಯಿ ಸಕ್ಕರೆ / ತೆಂಗಿನಸಕ್ಕರೆಯನ್ನು ಕೊಕೊ ಸಕ್ಕರೆ, ತೆಂಗಿನಕಾಯಿ ಹೂವಿನಿಂದ ಮಾಡುವ ಸಕ್ಕರೆ, ತೆಂಗಿನಕಾಯಿ ಸಕ್ಕರೆ ಎಂದು ಕರೆಯಲಾಗುತ್ತದೆ. ಬಿಳಿ ಸಕ್ಕರೆಯ ಬದಲು ಆರೋಗ್ಯಕವಾದ ಸಕ್ಕರೆ. ಆಹಾರ ಜಗತ್ತಿನಲ್ಲಿ ಅಚ್ಚುಮೆಚ್ಚಿನ ಉಪಯುಕ್ತ ವಸ್ತು. ಈ ಲೇಖನದಲ್ಲಿ ಮಕ್ಕಳಿಗೆ ತೆಂಗಿನಸಕ್ಕರೆ ನೀಡುವುದರಿಂದಾಗುವ ಲಾಭಗಳು, ತೆಂಗಿನಕಾಯಿ ಸಕ್ಕರೆ ಉಪಯೋಗಿಸುವುದರ ಪ್ರಯೋಜನಗಳು, ಬಳಕೆ ಬಗ್ಗೆ ಉಪಯುಕ್ತ ಮಾಹಿತಿ ಚರ್ಚಿಸಲಾಗಿದೆ. ಶಿಶುಗಳಿಗೆ ತೆಂಗಿನಕಾಯಿ ಸಕ್ಕರೆ ಕೊಡಬಹುದೇ? ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ

ತಿಳಿದುಕೊಳ್ಳಲು ಲೇಖನ ಓದಿ.

ಶಿಶುಗಳಿಗೆ ತೆಂಗಿನಕಾಯಿ ಸಕ್ಕರೆ ಕೊಡಬಹುದೇ? | Can I give my baby Coconut Sugar in KannadaCan I give my baby Coconut Sugar? kannada hindi tenginakayi sakkare naariyal shakkar benefits uses

ಶಿಶುಗಳಿಗೆ ತೆಂಗಿನಕಾಯಿ ಸಕ್ಕರೆ ಕೊಡಬಹುದೇ? | Can I give my baby Coconut Sugar in Kannada

1. ತೆಂಗಿನಕಾಯಿ ಸಕ್ಕರೆ / ಕೊಕೊನಟ್ ಪಾಮ್ ಶುಗರ್ ಎಂದರೇನು ? What is Coconut Palm Sugar?

ಕೊಕೊನಟ್ ಪಾಮ್ ಸಕ್ಕರೆ ನೈಸರ್ಗಿಕವಾದ  ಸಕ್ಕರೆ, ತೆಂಗಿನಕಾಯಿ ಹೂವಿನ ಮೊಗ್ಗುಗಳಿಂದ ತೈಯಾರಿಸಲಾಗುತ್ತದೆ. ರೈತರು ತೆಂಗಿನ ಹೂವುಗಳನ್ನು ಕತ್ತರಿಸಿ ನಂತರ ಸಸ್ಯದ ಜೀವರಸವನ್ನು (ಸ್ಯಾಪ್) ಸಂಗ್ರಹಿಸಿ, ಸಕ್ಕರೆಯ ಹರಳುಗಳನ್ನು ಮಾಡಲು ಬಿಸಿಮಾಡಲಾಗುತ್ತದೆ. ನೈಸರ್ಗಿಕವಾಗಿ ಕೊಕೊನಟ್ ಪಾಮ್ ಸಕ್ಕರೆಯನ್ನು ತಯಾರಿಸುವುದಕ್ಕೆ  2 ಹಂತದ ಪ್ರಕ್ರಿಯೆಗಳಿವೆ. ಸಕ್ಕರೆ ಮಾಡುವ ಪ್ರಕ್ರಿಯೆಯಲ್ಲಿ ಬಿಸಿ ಮಾಡುವುದರಿಂದ (ಕ್ಯಾರಮೆಲೈಸೇಶನ್ )ಸಕ್ಕರೆಯ ಬಣ್ಣವು ಕಂದು ಬಣ್ಣಕ್ಕೆ ಬದಲಾಗುತ್ತದೆ.

ನಮ್ಮ ಇತರ ನೈಸರ್ಗಿಕ ಸಿಹಿ ನೀಡುವ ಪದಾರ್ಥಗಳನ್ನು ಪ್ರಯತ್ನಿಸಿ :-

2. ತೆಂಗಿನಕಾಯಿ ಸಕ್ಕರೆ ಪ್ರಯೋಜನಗಳು? Benefits of Coconut Sugar

  1. ಮಕ್ಕಳ ಬೆಳವಣಿಗೆ ಬೇಕಾಗಿರುವ ಕಬ್ಬಿಣ, ಸತು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳು ಸಮೃದ್ಧವಾಗಿ ದೊರೆಯುತ್ತದೆ.
  2. ರೋಗ ನಿರೋಧಕ ಶಕ್ತಿ ನೀಡುತ್ತದೆ.
  3. ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಕರುಳಿಗೆ ಒಳ್ಳೆಯದು.
  4. ಶಕ್ತಿಯನ್ನು ನೀಡುತ್ತದೆ.
  5. ಮಧುಮೇಹಕ್ಕೆ ಒಳ್ಳೆಯ ನೈಸರ್ಗಿಕ ಸಿಹಿಕಾರಕ

3. ಬಿಳಿ ಸಕ್ಕರೆಗಿಂತ ತೆಂಗಿನಕಾಯಿ ಸಕ್ಕರೆ ಏಕೆ ಉತ್ತಮ ಆಯ್ಕೆ? How is it better than regular white sugar?

  1. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವಿದೆ.
  2. ಫ್ರಕ್ಟೋಸ್ ನ ಪ್ರಮಾಣ ಕಡಿಮೆಯಿರುತ್ತದೆ
  3. ಕ್ಯಾಲೋರಿಗಳು ಕಡಮೆ.
  4. ಸಾಮಾನ್ಯ ಬಿಳಿ ಸಕ್ಕರೆಗಿಂತ ಹೆಚ್ಚಿನ ಪೋಷಕಾಂಶಗಳು ಲಭಿಸುತ್ತದೆ.

4. ಶಿಶುಗಳಿಗೆ ಯಾವಾಗ ತೆಂಗಿನಕಾಯಿ ಸಕ್ಕರೆ ಕೊಡಬಹುದು ?

ಪೋಷಕರಾಗಿ 6 ತಿಂಗಳು ಪೂರ್ಣವಾದ ಬಳಿಕ, ಶಿಶುಗಳಿಗೆ ಘನಆಹಾರಗಳನ್ನು ಪರಿಚಯಿಸಲು ಆಹಾರಕ್ಕೆ ವಿಶೇಷ ಪರಿಮಳ ನೀಡಲು ಯೋಚಿಸುತ್ತೇವೆ. ಮಕ್ಕಳಿಗೆ ಪ್ರಮುಖವಾಗಿ ರುಚಿಗೆ ಉಪ್ಪು ಮತ್ತು ಸಕ್ಕರೆಯ ಬಳಕೆಯು ಪ್ರಾರಂಭವಾಗುತ್ತದೆ, ಆದರೆ ಒಂದು ವರ್ಷದವರೆಗೆ ಸಂಪೂರ್ಣವಾಗಿ ಇದನ್ನು ತಪ್ಪಿಸಬೇಕು. ಒಂದು ವರ್ಷದವಾದ ನಂತರ ನಿಧಾನವಾಗಿ ಆಹಾರದಲ್ಲಿ ಸಕ್ಕರೆಯನ್ನು ಪರಿಚಯಿಸುವುದು ಸೂಕ್ತ.  ಬಿಳಿ ಸಕ್ಕರೆಯ ಬದಲು ಆರೋಗ್ಯಕರವಾದ ಪರ್ಯಾಯವಾಗಿ ತೆಂಗಿನಕಾಯಿ ಸಕ್ಕರೆ ಉತ್ತಮ.

ಹೆಚ್ಚಿನ ಮಾಹಿತಿಗೆ ಶಿಶುಗಳಿಗೆ 6 ಆಹಾರಗಳು ಒಂದು ವರ್ಷ ತನಕ ನೀಡುವುದನ್ನು ತಪ್ಪಿಸಿ ಲೇಖನವನ್ನು ತಪ್ಪದೆ ಓದಿ.

5. ಮಕ್ಕಳಿಗೆ ಮತ್ತು ಶಿಶುಗಳಿಗೆ ಯಾವ ಪಾಕವಿಧಾನಗಳಿಗೆ ಮತ್ತು ಹೇಗೆ ತೆಂಗಿನಕಾಯಿ ಸಕ್ಕರೆ ಅನ್ನು ಉಪಯೋಗಿಸಬಹುದು? How and what recipes can I use it?

ನೈಸರ್ಗಿಕವಾದ ಸಿಹಿಕಾರಕವಾಗಿ ಬಳಸಬಹುದು.ನೀವು ಶಿಶುವಿಗೆ ಆರೋಗ್ಯಕರವಾಗಿ ಮಾಡುವ ಆಹಾರಕ್ಕೆ ಬಯಸುವ ಎಲ್ಲಾ ಪಾಕವಿಧಾನಕ್ಕೆ ಬಿಳಿ ಸಕ್ಕರೆ ಬದಲು ಉಪಯೋಗಿಸಬಹುದು. ಇದು ಒಳ್ಳೆಯ ರುಚಿ ಮತ್ತು ಕ್ಯಾರಮೆಲೀಸ್ ಸುವಾಸನೆಯನ್ನು ನೀಡುತ್ತದೆ. ಕೊಕೊ ಶುಗರ್ ನ ತಯಾರಿಕೆಯಲ್ಲಿ ಯಾವುದೇ ಸಂಸ್ಕರಣೆ ಅಥವಾ ಯಾವುದೇ ಸೇರ್ಪಡೆಗಳನ್ನು ಹಾಕದೆ ಇರುವ ಕಾರಣ ತೆಂಗಿನ ಸಕ್ಕರೆಯ ರುಚಿ ಸಂಪೂರ್ಣವಾಗಿ ತೆಂಗಿನಕಾಯಿಯ ಜಾತಿಯ ಮತ್ತು ಎಲ್ಲಿ ಕೊಯ್ಲು ಮಾಡಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ತೆಂಗಿನಕಾಯಿ ಸಕ್ಕರೆ ಅನ್ನು ಮಕ್ಕಳ –

6. ಕೊಕೊ ಶುಗರ್ /ತೆಂಗಿನಕಾಯಿ ಸಕ್ಕರೆ ಖರೀದಿಸುವುದು ಎಲ್ಲಿ?

ತೆಂಗಿನಕಾಯಿ ಸಕ್ಕರೆಯ ಮೂಲವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಯಾವುದೇ ಕೀಟನಾಶಕಗಳನ್ನೂ ಬಳಸದೆ ಇರುವ ಸಾವಯಾವ ತೆಂಗಿನಮರಗಳ ಸಸ್ಯ ರಸದಿಂದ ತಯಾರಿಸಲ್ಲಾಗುವ ಸಕ್ಕರೆಯನ್ನು ಕೊಳ್ಳುವುದು ಉತ್ತಮ. ಯಾವುದೇ ಸಾವಯವ ಆಹಾರ ಸಿಗುವ ಅಂಗಡಿಯಲ್ಲಿ ವಿಚಾರಿಸಬಹುದು, ಅಥವಾ ನಮ್ಮ TOTS AND MOMS FOODS ಅಂಗಡಿಯಲ್ಲಿ ಸಾವಯವ ಕೊಕೊ ಶುಗರ್ ಖರೀದಿಸಬಹುದು.

Buy Coconut Sugar online tots and moms foods for babies, kids, adults, kannada hindi

Video: ಶಿಶುಗಳಿಗೆ ತೆಂಗಿನಕಾಯಿ ಸಕ್ಕರೆ ಕೊಡಬಹುದೇ? | Can I give my baby Coconut Sugar in Kannada

Kannada Subscribe Button TOTS AND MOMS

ಸೂಚನೆ : ಬಿಳಿ ಸಕ್ಕರೆಗಿಂತ ಕೊಕೊ ಶುಗರ್ ಒಳ್ಳೆಯ ಆಯ್ಕೆ, ಆದರೆ ಶಿಶುಗಳಿಗೆ ಮಿತವಾಗಿ ಬಳಸುವುದು ಸೂಕ್ತ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 21
    Shares