Spread the love
  • 7
    Shares

ಚ್ಯವನ್ ಪ್ರಾಶ್ | Chyawanprash recipe in KannadaHomemade Chyawanprash recipe in english kannada hindi immunity booster kids milk supplement

ಚ್ಯವನ್ ಪ್ರಾಶ್ ಬೆಟ್ಟದ ನೆಲ್ಲಿಕಾಯಿಂದ ತಯಾರಿಸಲಾಗುವುದು. 80 ಮತ್ತು 90 ರ ದಶಕಗಳಲ್ಲಿ ನಮ್ಮ ದೂರದರ್ಶನ ಚಾನೆಲ್ ಗಳಲ್ಲಿ ಅದರ ವಾಣಿಜ್ಯ ಜಾಹೀರಾತುಗಳನ್ನು ನಿಯತವಾಗಿ ನೋಡಬಹುದಾಗಿತ್ತು.ಚ್ಯವನ್ ಋಷಿಗಳು ಮೊದಲ ಬಾರಿಗೆ ಚ್ಯವನ್ ಪ್ರಾಶ್ ಅನ್ನು ಸಿದ್ಧಪಡಿಸಿದ ವ್ಯಕ್ತಿ. ಈ ಸೂತ್ರದಿಂದ ತಯಾರಿದ ಚ್ಯವನ್ ಪ್ರಾಶ್ ಉಪಯೋಗದಿಂದ ಪುನಃ ತಾರುಣ್ಯದ ಸ್ಥಿತಿ ಪಡೆದಿದ್ದರು. ಚ್ಯವನ್ ಪ್ರಾಶ್, ಚ್ಯವನ್ ಪ್ರಾಸಮ್ ಅಥವಾ ಚ್ಯವನ್ ಪ್ರಾಶ್ ರಾಸಾಯನ ಎಂದು ವಿವಿಧ ಹೆಸರಿನಿಂದ. ಕರೆಯಲ್ಪಡುತ್ತದೆ.  ಚ್ಯವನ್ ಪ್ರಾಶ್ ಅದ್ಭುತ ರೋಗ ನಿರೋಧಕ ಶಕ್ತಿ ಪಡೆಯಲು ಉಪಯುಕ್ತವಾಗುತ್ತದೆ, ಆದ್ದರಿಂದ ಚ್ಯವನ್ ಹೆಸರಿನಿಂದ ಪ್ರಸಿದ್ಧವಾಗಿದೆ.

ಮಾರುಕಟ್ಟೆಯಲ್ಲಿ ದೊರೆಯುವ ಚ್ಯವನ್ ಪ್ರಾಶ್ ನಲ್ಲಿರುವ  ಅನೇಕ ಆಯುರ್ವೇದ ಗಿಡ ಮೂಲಿಕೆಗಳು ಸುಲಭವಾಗಿ ಸಿಗದೆ ಇರಬಹುದು. ಚ್ಯವನ್ ಪ್ರಾಶ್ ಅನ್ನು ತುಂಬಾ ದಿನ ಸಂರಕ್ಷಿಸಲು ಅನೇಕ ಸಮರಕ್ಷಕಗಳನ್ನು ಉಪಯೋಗಿಸಿರುತ್ತಾರೆ.ಮಕ್ಕಳು ಮತ್ತು ವಯಸ್ಕರಿಗೆ ಉತ್ತಮ ಹಾಗು ಆರೋಗ್ಯಕರ ಪದಾರ್ಥಗಳನ್ನು ಬಳಸಿ ಮಾಡಬಹುದಾದ ಪಾಕವಿಧಾನ. ವಿಸ್ತಾರದ ವಿಧಾನದಲ್ಲಿ ಚ್ಯವನ್ ಪ್ರಾಶ್ ಮಾಡುವ ವಿಧಾನವನ್ನು ನಿಮಗೆ ಬೇಕಾದರೆ ತೋರಿಸಲು ಪ್ರಯತ್ನಿಸುವೆ. ದಯವಿಟ್ಟು ತಿಳಿಸಿ.

ಚ್ಯವನ್ ಪ್ರಾಶ್ 1 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೆ  1 ಟೀಸ್ಪೂನ್ ನೀಡಬಹುದು.ಮಕ್ಕಳು ಅಥವಾ ವಯಸ್ಕರಲ್ಲಿ  ಗರಿಷ್ಠ ದಿನಕ್ಕೆ 1 ಟೀಸ್ಪೂನ್ ನಿಂದ 2 ಟೀಸ್ಪೂನ್ ನೀಡಬಹುದು.ಚ್ಯವನ್ ಪ್ರಾಶ್  ಹಾಗೆ ತಿನ್ನಬಹುದು ಅಥವಾ ಹಾಲಿನೊಂದಿಗೆ ಬೆರೆಸಿ ನಿಯಮಿತವಾಗಿ ಸೇವಿಸಬಹುದು.

ಆರೋಗ್ಯಕರವಾದ ಚ್ಯವನ್ ಪ್ರಾಶ್ ಪ್ರಯೋಜನಗಳು:

  • ಶೀತ, ಕೆಮ್ಮು ಮತ್ತು ಅಲರ್ಜಿಯಿಂದ ರಕ್ಷಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.
  • ಹೊಟ್ಟೆಯನ್ನು ಸ್ವಚ್ಛವಾಗಿರಿಸುತ್ತದೆ, ಚಿಕ್ಕ ಮಕ್ಕಳ ಜೀರ್ಣಕ್ರಿಯೆ ಮತ್ತು ಚಯಾಪಚಯನವನ್ನು ವೃದ್ದಿಸುತ್ತದೆ .
  • ಮಕ್ಕಳನ್ನು ಶಕ್ತಿಯುತವಾಗಿಸುತ್ತದೆ, ಸಕ್ರಿಯ ಪದಾರ್ಥಗಳನ್ನು ಉಪಯೋಗಿಸಿರುವುದರಿಂದ ಮಕ್ಕಳು ಸಕ್ರಿಯವಾಗಿರುತ್ತಾರೆ.
  • ಸಕ್ರಿಯವಾಗಿರುವ ಮಕ್ಕಳು ಆರೋಗ್ಯಕರ ಮಕ್ಕಳಾಗುತ್ತಾರೆ. ಬೆಳೆಯುವ ಮಕ್ಕಳಿಗೆ ಉತ್ತಮ ಆರೋಗ್ಯ ಬಹಳ ಮುಖ್ಯ

ಹೆಚ್ಚಿನ ಮಾಹಿತಿಗಾಗಿ ನಮ್ಮ ಇತರ ಲೇಖನವನ್ನು ಕೂಡ ಓದಿ  :

Video:ಚ್ಯವನ್ ಪ್ರಾಶ್ | Chyawanprash recipe in Kannada

Kannada Subscribe Button TOTS AND MOMS

ಚ್ಯವನ್ ಪ್ರಾಶ್ | Chyawanprash recipe in Kannada

ಚ್ಯವನ್ ಪ್ರಾಶ್ | Chyawanprash recipe in Kannada

ಚ್ಯವನ್ ಪ್ರಾಶ್ ನಲ್ಲಿ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ರೋಗ ನಿರೋಧಕ ಶಕ್ತಿ ಸುಧಾರಿಸುವ ಒಂದು ಪುರಾತನ ಆಯುರ್ವೇದದ ಪಾಕವಿಧಾನವಿದು. ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದರು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ರುಚಿಕರವಾದ ಚ್ಯವನ್ ಪ್ರಾಶ್ ಮಕ್ಕಳಿಗೆ ಹಾಗು ಕುಟುಂಬಕ್ಕೆ ಪ್ರೀತಿಯಿಂದ ಮಾಡಿಕೊಟ್ಟರೆ ಉತ್ತಮ ಆರೋಗ್ಯ ದೊರಕುತ್ತದೆ,

ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. .ಬೆಟ್ಟದ ನೆಲ್ಲಿಕಾಯಿ - 250 ಗ್ರಾಂ
  2. ಖರ್ಜೂರ - 20  (15 ನಿಮಿಷಗಳ ಕಾಲ ನೆನೆಸಿರುವ) 
  3. ಬೆಲ್ಲ - ½ ಕಪ್
  4. ತುಪ್ಪ - 2 ಟೀಸ್ಪೂನ್ 

ಮಸಾಲ ಪುಡಿ ಮಾಡಲು:

  1. ಕಾಳು ಮೆಣಸು - 10
  2. ಒಣ ಶುಂಠಿ - ½ ಇಂಚು
  3. ಸೋಂಪು- ½ ಟೀಸ್ಪೂನ್
  4. ಲವಂಗದ ಎಲೆ  - 1
  5. ಏಲಕ್ಕಿ - 3
  6. ಕೇಸರಿ - 5 ದಳಗಳು

ಒಣ ಹಣ್ಣುಗಳು ಪುಡಿ  ಮಾಡಲು ( ಬೇಕಾದರೆ )

  1. ಗೋಡಂಬಿ - 10
  2. ಬಾದಾಮಿ - 10
  3. ಪಿಸ್ತಾ - 5

ವಿಧಾನ

  1. ಕುಕ್ಕರ್ ನಲ್ಲಿ ಬೆಟ್ಟದ ನೆಲ್ಲಿಕಾಯಿ , ಸ್ವಲ್ಪ ನೀರು ಸೇರಿಸಿ ಬೇಯಿಸಲು ಮುಚ್ಚಳವನ್ನು ಮುಚ್ಚಿಯಿಡಿ. ನೆಲ್ಲಿಕಾಯಿಗಳನ್ನು ಮದ್ಯದಲ್ಲಿ ಸ್ವಲ್ಪ ಸೀಳಿ ( ಕತ್ತರಿಸಿ) ಬೇಗ ಬೇಯಲು ಸಾಹಾಯವಾಗುತ್ತದೆ.  2 ಸೀಟಿ ಬರುವ ತನಕ ಬೇಯಿಸಿ. ಕುಕ್ಕರ್ ತಣ್ಣಗಾದ ನಂತರ ತೆಗೆಯಿರಿ.
  2. ನೆಲ್ಲಿಕಾಯಿ ಬೇಯುವಷ್ಟರಲ್ಲಿ ನಾವು ಮಸಾಲೆ ಪುಡಿಯನ್ನು ಮಾಡಿಕೊಳ್ಳೋಣ,ನಂತರ ಮುಖ್ಯವಾದ ಡ್ರೈ ಫ್ರೂಟ್ ಪುಡಿ/ ಒಣ ಹಣ್ಣುಗಳ ಪುಡಿ ಬೇಕಾದರೆ ಎಲ್ಲ ಒಣಹಣ್ಣುಗಳನ್ನು ಹುರಿದು ನಯವಾಗಿ ಅಥವಾ ತರಿತರಿಯಾಗಿ ಪುಡಿ ಮಾಡಿ ತಯಾರಿಸಿಕೊಳ್ಳಿ.
  3. ಬೆಂದಿರುವ ನೆಲ್ಲಿಕಾಯಿ ಇಂದ ಹೆಚ್ಚಿನ ನೀರನ್ನು ಬಸೆದು ತೆಗೆಯಿರಿ. ನೆಲ್ಲಿಕಾಯಿಯಿಂದ ಬೀಜಗಳನ್ನು ಕೆಳಗೆ ತೋರಿಸಿರುವ ತರಹ ತೆಗೆಯಬೇಕು. ಬೆಂದ ನೆಲ್ಲಿಕಾಯಿಯನ್ನು ಬ್ಲೆಂಡರ್ ಜಾರ್ಗೆ ಹಾಕಿ, ಸ್ವಲ್ಪ ನೀರು ಹಾಕಿ ನಯವಾಗಿ ಕನಕ ( ಪೇಸ್ಟ್) ಮಾಡಿಕೊಳ್ಳಿ. ಇಲ್ಲಿ ನಾನು  Wonderchef Blender jar ಬಳಸಿದ್ದೇನೆ.
  4. ಸಿಹಿ ನೀಡುವುದಕ್ಕೆ ನೆನೆಸಿರುವ ಖರ್ಜುರವನ್ನು ಬ್ಲೆಂಡರ್ ಜಾರ್ಗೆ ಹಾಕಿ ರುಬ್ಬಿಕೊಳ್ಳಿ.
  5. ಬಾಣಲೆಯಲ್ಲಿ ತುಪ್ಪ ಹಾಕಿ, ಬಿಸಿ ಯಾದ ನಂತರ ರುಬ್ಬಿರುವ ನೆಲ್ಲಿಕಾಯಿಯ ಪೇಸ್ಟ್, ಖರ್ಜೂರದ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 3 ರಿಂದ 5 ನಿಮಿಷಗಳ ಕಾಲ ಹೊಳಪು ಬರುವ ತನಕ ಮಿಶ್ರಣ ಮಾಡಿ.
  6. ಈಗ ಜೈವಿಕ ಬೆಲ್ಲ, ಮಸಾಲೆ ಪುಡಿ, ಡ್ರೈ ಫ್ರೂಟ್ ಪುಡಿ ಸೇರಿಸುವುದರಿಂದ (ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸ ಬಹುದು )ಮಿಶ್ರಣ ಮಾಡಿ.
  7. ಮಿಶ್ರಣವನ್ನು 10-15 ನಿಮಿಷ ಗಟ್ಟಿಯಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣದ  ದಟ್ಟತೆ/ ಗಾಢತೆ  ಅವಲಂಬಿಸಿ 10-15 ನಿಮಿಷಗಳ ಕಾಲ ಮಿಶ್ರಣವನ್ನು ದಪ್ಪ ಹಿಟ್ಟಿನ ರಚನೆಯಾಗುವವರೆಗೆ ಕೆದಕುತ್ತ ಬೇಯಿಸಿ.
  8. ಮಿಶ್ರಣ ವನ್ನು ತಣ್ಣಗಾದ ನಂತರ ಏರ್ ಟೈಟ್  ಗಾಜಿನ ಡಬ್ಬದಲ್ಲಿ ಶೇಖರಿಸಿ. ಮನೆಯಲ್ಲಿ ಮಾಡಿರುವ ಚ್ಯವನ್ ಪ್ರಾಶ್ ಅನ್ನು ೩-4  ತಿಂಗಳು ಶೇಕರಿಸಬಹುದು. 3-4 ತಿಂಗಳುಗಳ ಕಾಲ ಚ್ಯವನ್ ಪ್ರಾಶ್ ನ್ನು ಫ್ರಿಡ್ಜ ನಲ್ಲಿ  ಸಂಗ್ರಹಿಸಬಹುದು.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಚ್ಯವನ್ ಪ್ರಾಶ್ | Chyawanprash recipe in Kannada

ಚ್ಯವನ್ ಪ್ರಾಶ್ ಮಾಡಲು ಬೇಕಾಗುವ ಪದಾರ್ಥಗಳು :

  1. ಬೆಟ್ಟದ ನೆಲ್ಲಿಕಾಯಿ – 250 ಗ್ರಾಂ
  2. ಖರ್ಜೂರ – 20  (15 ನಿಮಿಷಗಳ ಕಾಲ ನೆನೆಸಿರುವ) .
  3. ಬೆಲ್ಲ – ½ ಕಪ್
  4. ತುಪ್ಪ – 2 ಟೀಸ್ಪೂನ್

ಮಸಾಲ ಪುಡಿ ಮಾಡಲು:

  1. ಕಾಳು ಮೆಣಸು – 10
  2. ಒಣ ಶುಂಠಿ – ½ ಇಂಚು
  3. ಸೋಂಪು- ½ ಟೀಸ್ಪೂನ್
  4. ಲವಂಗದ ಎಲೆ  – 1
  5. ಏಲಕ್ಕಿ – 3
  6. ಕೇಸರಿ – 5 ದಳಗಳು

ಒಣ ಹಣ್ಣುಗಳು ಪುಡಿ  ಮಾಡಲು ( ಬೇಕಾದರೆ )

  1. ಗೋಡಂಬಿ – 10
  2. ಬಾದಾಮಿ – 10
  3. ಪಿಸ್ತಾ – 5

ಚ್ಯವನ್ ಪ್ರಾಶ್ ಮಾಡುವ ವಿಧಾನ :

1. ಕುಕ್ಕರ್ ನಲ್ಲಿ ಬೆಟ್ಟದ ನೆಲ್ಲಿಕಾಯಿ , ಸ್ವಲ್ಪ ನೀರು ಸೇರಿಸಿ ಬೇಯಿಸಲು ಮುಚ್ಚಳವನ್ನು ಮುಚ್ಚಿಯಿಡಿ. ನೆಲ್ಲಿಕಾಯಿಗಳನ್ನು ಮದ್ಯದಲ್ಲಿ ಸ್ವಲ್ಪ ಸೀಳಿ ( ಕತ್ತರಿಸಿ) ಬೇಗ ಬೇಯಲು ಸಾಹಾಯವಾಗುತ್ತದೆ.  2 ಸೀಟಿ ಬರುವ ತನಕ ಬೇಯಿಸಿ. ಕುಕ್ಕರ್ ತಣ್ಣಗಾದ ನಂತರ ತೆಗೆಯಿರಿ.Recipe-Steps_1

2 .ನೆಲ್ಲಿಕಾಯಿ ಬೇಯುವಷ್ಟರಲ್ಲಿ ನಾವು ಮಸಾಲೆ ಪುಡಿಯನ್ನು ಮಾಡಿಕೊಳ್ಳೋಣ,ನಂತರ ಮುಖ್ಯವಾದ ಡ್ರೈ ಫ್ರೂಟ್ ಪುಡಿ/ ಒಣ ಹಣ್ಣುಗಳ ಪುಡಿ ಬೇಕಾದರೆ ಎಲ್ಲ ಒಣಹಣ್ಣುಗಳನ್ನು ಹುರಿದು ನಯವಾಗಿ ಅಥವಾ ತರಿತರಿಯಾಗಿ ಪುಡಿ ಮಾಡಿ ತಯಾರಿಸಿಕೊಳ್ಳಿ.Recipe-Steps_2

3. ಬೆಂದಿರುವ ನೆಲ್ಲಿಕಾಯಿ ಇಂದ ಹೆಚ್ಚಿನ ನೀರನ್ನು ಬಸೆದು ತೆಗೆಯಿರಿ. ನೆಲ್ಲಿಕಾಯಿಯಿಂದ ಬೀಜಗಳನ್ನು ಕೆಳಗೆ ತೋರಿಸಿರುವ ತರಹ ತೆಗೆಯಬೇಕು. ಬೆಂದ ನೆಲ್ಲಿಕಾಯಿಯನ್ನು ಬ್ಲೆಂಡರ್ ಜಾರ್ಗೆ ಹಾಕಿ, ಸ್ವಲ್ಪ ನೀರು ಹಾಕಿ ನಯವಾಗಿ ಕನಕ ( ಪೇಸ್ಟ್) ಮಾಡಿಕೊಳ್ಳಿ. ಇಲ್ಲಿ ನಾನು  Wonderchef Blender jar ಬಳಸಿದ್ದೇನೆ.Recipe-Steps_3

4. ಸಿಹಿ ನೀಡುವುದಕ್ಕೆ ನೆನೆಸಿರುವ ಖರ್ಜುರವನ್ನು ಬ್ಲೆಂಡರ್ ಜಾರ್ಗೆ ಹಾಕಿ ರುಬ್ಬಿಕೊಳ್ಳಿ.Recipe-Steps_4

5 .ಬಾಣಲೆಯಲ್ಲಿ ತುಪ್ಪ ಹಾಕಿ, ಬಿಸಿ ಯಾದ ನಂತರ ರುಬ್ಬಿರುವ ನೆಲ್ಲಿಕಾಯಿಯ ಪೇಸ್ಟ್, ಖರ್ಜೂರದ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 3 ರಿಂದ 5 ನಿಮಿಷಗಳ ಕಾಲ ಹೊಳಪು ಬರುವ ತನಕ ಮಿಶ್ರಣ ಮಾಡಿ.Recipe-Steps_5

6. ಈಗ ಜೈವಿಕ ಬೆಲ್ಲ, ಮಸಾಲೆ ಪುಡಿ, ಡ್ರೈ ಫ್ರೂಟ್ ಪುಡಿ ಸೇರಿಸುವುದರಿಂದ (ಪೌಷ್ಟಿಕ ಮೌಲ್ಯವನ್ನು ಹೆಚ್ಚಿಸ ಬಹುದು )ಮಿಶ್ರಣ ಮಾಡಿ.Recipe-Steps_6

7. ಮಿಶ್ರಣವನ್ನು 10-15 ನಿಮಿಷ ಗಟ್ಟಿಯಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣದ  ದಟ್ಟತೆ/ ಗಾಢತೆ  ಅವಲಂಬಿಸಿ 10-15 ನಿಮಿಷಗಳ ಕಾಲ ಮಿಶ್ರಣವನ್ನು ದಪ್ಪ ಹಿಟ್ಟಿನ ರಚನೆಯಾಗುವವರೆಗೆ ಕೆದಕುತ್ತ ಬೇಯಿಸಿ.Recipe-Steps_7

8. ಮಿಶ್ರಣ ವನ್ನು ತಣ್ಣಗಾದ ನಂತರ ಏರ್ ಟೈಟ್  ಗಾಜಿನ ಡಬ್ಬದಲ್ಲಿ ಶೇಖರಿಸಿ. ಮನೆಯಲ್ಲಿ ಮಾಡಿರುವ ಚ್ಯವನ್ ಪ್ರಾಶ್ ಅನ್ನು ೩-4  ತಿಂಗಳು ಶೇಕರಿಸಬಹುದು. 3-4 ತಿಂಗಳುಗಳ ಕಾಲ ಚ್ಯವನ್ ಪ್ರಾಶ್ ನ್ನು ಫ್ರಿಡ್ಜ ನಲ್ಲಿ  ಸಂಗ್ರಹಿಸಬಹುದು.

ಚ್ಯವನ್ ಪ್ರಾಶ್ | Chyawanprash recipe in Kannada

Homemade Chyawanprash recipe in english kannada hindi immunity booster kids milk supplement

ಸೂಚನೆ :

  1. ಮನೆಯಲ್ಲಿ ತಯಾರಿಸಿರುವ ಚ್ಯವನ್ ಪ್ರಾಶ್ ೩-4 ತಿಂಗಳುಗಳ ಕಾಲ ಹೊರಗೆ ಇಡಬಹುದು . ಫ್ರಿಡ್ಜ ನಲ್ಲಿ  ಇನ್ನು ಹೆಚ್ಚಿನ ಕಾಲ ಸಂಗ್ರಹಿಸಬಹುದು.
  2. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊಡುವುದು ಸೂಕ್ತ ,ಬೆಚ್ಚಗಿರುವ/ಬಿಸಿ  ಹಾಲಿಗೆ ಮಿಶ್ರಣ ಮಾಡಿ ನೀಡಬಹುದು.
  3. ಚಳಿಗಾಲಕ್ಕೆ ಒಳ್ಳೆಯ ರೋಗನಿರೋಧಕ ಶಕ್ತಿ ನೀಡುವುದು. ಬೇಸಿಗೆಯಲ್ಲಿ ಕಡಿಮೆ ಪ್ರಮಾಣ ನೀಡಬಹುದು.
  4. ನಾನು ಮೊದಲೇ ತಿಳಿಸಿರುವ ಹಾಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಪದಾರ್ಥವನ್ನು ಬಳಸಿ ಮಾಡಿರುವ ಪಾಕವಿಧಾನ, ಇದೆ ಸರಿಯಾದ ಅಧಿಕೃತ ಪಾಕವಿಧಾನ ವೆಂದು ಹೇಳುವುದಿಲ್ಲ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.


Spread the love
  • 7
    Shares