Spread the love
  • 18
    Shares

ಚೀಸ್ & ಆಲೂಗಡ್ಡೆ ಬೈಟ್ಸ್ | Cheesy Potato Bites for Snackbox in Kannada

Cheesy Potato Bites kannada hindi snacks for babies toddlers kids

ಇತ್ತೀಚಿನ ಮಕ್ಕಳು ಚೀಸ್ ತುಂಬಾ ಇಷ್ಟಪಡುತ್ತಾರೆ. ಇಡೀ ಕುಟುಂಬ ಇಷ್ಟಪಡುವ ಒಳ್ಳೆಯ ಸ್ನಾಕ್ಸ್ ಪಾಕವಿಧಾನವಿದು. ಬಹುಪಾಲು ಎಲ್ಲಾ ಪದಾರ್ಥಗಳು ಮನೆಯಲ್ಲೇ ಸುಲಭವಾಗಿ ಲಭ್ಯವಿರುತ್ತದೆ. ಬೆಳಗ್ಗೆ ಉಪಹಾರಕ್ಕಾಗಿ ಆಲೂ ಪರಾಟ ಮಾಡುವಾಗ ನನಗೆ ಸ್ನಾಕ್ಸ್ ಮಾಡುವ ಕಲ್ಪನೆ ಹೊರಹೊಮ್ಮಿತು. ಈ ಕಲ್ಪನೆಯು ಬಂದ ತಕ್ಷಣ ತ್ವರಿತವಾಗಿ ಆಲೂಗಡ್ಡೆಯನ್ನು ಬಟ್ಟಲಿನಾಕಾರವಾಗಿ ಮಾಡಿಕೊಂಡು ಒಳಗೆ  ಚೀಸ್ ತುಂಬಿಸಿ ಉಂಡೆಗಳನ್ನು ತಯಾರಿಸಿ 20 ನಿಮಿಷಗಳ ಫ್ರೀಜ್ ಮಾಡಿದ ನಂತರ ಎಣ್ಣೆಯಲ್ಲಿ ಕರಿದೆ. ಗರಿಗರಿಯಾದ ಚೀಸ್ & ಆಲೂಗಡ್ಡೆ ಬೈಟ್ಸ್ ಸಿದ್ಧವಾಯಿತು. ಮೊಸರಿನ ಡಿಪ್ ಜೊತೆ ತುಂಬಾ ಚೆನ್ನಾಗಿರುತ್ತದೆ. ನನ್ನ ಮಗಳು ಡಿಶಾಗೆ ತುಂಬಾ ಇಷ್ಟವಾಯಿತು. ನೀವು ಪ್ರಯತ್ನಿಸಿ ಖಂಡಿತ ಮಕ್ಕಳಿಗೆ ಇಷ್ಟವಾಗುತ್ತದೆ. ಮಕ್ಕಳಿಗೆ ಚೀಸೀ ಆಲೂಗೆಡ್ಡೆ ಬೈಟ್ಸ್ ರುಚಿಕರವಾದ ಹಾಗು ಆರೋಗ್ಯಕರವಾದ ಸ್ನಾಕ್ ಪಾಕವಿಧಾನಗಳಲ್ಲಿ ಒಂದು.

ಆಲೂಗಡ್ಡೆ ಮಿಶ್ರಣದೊಂದಿಗೆ ರವೆ ಉಪಯೋಗಿಸುವುದರಿಂದ ಗರಿಗರಿ ಕ್ರಿಸ್ಪಿ ಸ್ನಾಕ್ಸ್ ಮಾಡಬಹುದು. ಬ್ರೆಡ್ ಕ್ರಮ್ಸ್ ಉಪಯೋಗಿಸುವ ಬದಲು ರವೆ ಮೇಲೆ ಹಾಕಲಾಗಿದೆ. ಇದಕ್ಕೆ ನಮಗೆ ಇಷ್ಟವಾಗುವ ಹಸಿರು ಸೊಪ್ಪು, ಬೇಕಾದರೆ ಚೀಸ್ ಬಳಸಬಹುದು. ಇಟಾಲಿಯನ್ ಮಸಾಲೆ ಉಪಯೋಗಿಸ ಮಾಡಬಹುದು. ನಮ್ಮ ಆಯ್ಕೆಯ ಮಸಾಲೆ ಸೇರಿಸಿಕೊಳ್ಳಬಹುದು. 8 ತಿಂಗಳು ಮಕ್ಕಳಿಗೆ ಉಪ್ಪನ್ನು ಹಾಕದೆ ಸ್ವಲ್ಪ ಮಸಾಲೆ ಹಾಕಿ ಮಾಡಿ ಕೊಡಬಹುದು.ಮೊದಲೇ ತಯಾರಿಸಿಕೊಂಡ ನಂತರ ಬೇಕಾದಾಗ ಬಿಸಿ ಬಿಸಿ ಗರಿ ಗರಿಯಾಗಿ ತಯಾರಿಸಿಕೊಳ್ಳಬಹುದು.

ಮಕ್ಕಳಿಗೆ ಸ್ನಾಕ್ಸ್ ಪಾಕವಿಧಾನಗಳು :

Video: ಚೀಸ್ & ಆಲೂಗಡ್ಡೆ ಬೈಟ್ಸ್ | Cheesy Potato Bites for Snackbox in Kannada

Kannada Subscribe Button TOTS AND MOMS

ಚೀಸ್ & ಆಲೂಗಡ್ಡೆ ಬೈಟ್ಸ್ | Cheesy Potato Bites for Snackbox in Kannada

ಚೀಸ್ & ಆಲೂಗಡ್ಡೆ ಬೈಟ್ಸ್

ಚೀಸ್ & ಆಲೂಗಡ್ಡೆ ಬೈಟ್ಸ್ ಒಳ್ಳೆಯ ಲಘು ಉಪಹಾರ. ಸಂಜೆಗೆ ಸೂಕ್ತವಾದ ಟೀ ಟೈಮ್ ಸ್ನಾಕ್ಸ್. ರವೆ ಉಪಯೋಗಿಸಿ ಮಾಡುವುದರಿಂದ ಗರಿಗರಿಯಾಗಿರುತ್ತದೆ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ/ ಸ್ನಾಕ್ಕ್ಸ್/ ಲಂಚ್ ಬಾಕ್ಸ್
ತಿನಿಸು:ಭಾರತೀಯ

ಸಾಮಗ್ರಿಗಳು

  1. ಆಲೂಗಡ್ಡೆ- 4
  2. ರವೆ - 2 tbsp + ಸ್ವಲ್ಪ ಮೇಲೆ ಹೊರಳಿಸುವುದಕ್ಕೆ
  3. ಚೀಸ್ – ಬೇಕಾಗುವಷ್ಟು
  4. ಅಚ್ಚ ಖಾರದ ಪುಡಿ - 1 tsp
  5. ಕಾಳು ಮೆಣಸು ಪುಡಿ - 1/2 tsp
  6. ಗರಂ ಮಸಾಲಾ - 1 tsp
  7. ಉಪ್ಪು – ರುಚಿಗೆ ತಕ್ಕಷ್ಟು
  8. ಎಣ್ಣೆ  - ಕರಿಯಲು

ವಿಧಾನ

  1. ದೊಡ್ಡ ಬಟ್ಟಲಿಗೆ ಬೇಯಿಸಿರುವ 4 ಆಲೂಗಡ್ಡೆ  ತೆಗೆದು ಕೊಂಡು ಚೆನ್ನಾಗಿ ಮಸೆದುಕೊಳ್ಳಿ.
  2. ಇದಕ್ಕೆ ರವೆ ಹಾಕಿ ನಂತರ ಉಪ್ಪು ಮತ್ತು ಮಸಾಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ  
  3. ಕೆಳಗಿ ತೋರಿಸಿರುವ ತರಹ ಚೀಸ್ ಅನ್ನು ಕಟ್  ಮಾಡಿ ಕೊಳ್ಳಿ. ಆಲೂಗಡ್ಡೆ ಮಿಶ್ರಣವನ್ನು ಬಟ್ಟಲ ಆಕಾರವನ್ನು ಮಾಡಿಕೊಂಡು ಒಳಗೆ ಚೀಸ್ ಇಟ್ಟು ಮುಚ್ಚಿ ಉಂಡೆ ಮಾಡಿ ಕೊಳ್ಳಿ.  
  4. ಕೆಳಗೆ ತೋರಿಸಿರುವ ತರಹ ಮಾಡಿಕೊಂಡು ಮೇಲೆ ರವೆ ಅಥವಾ ಬ್ರೆಡ್ ಕ್ರಮ್ಸ್ ಹೊರಳಿಸಿ.
  5. ಇದೇ ರೀತಿ ಮಿಶ್ರಣ ಉಪಯೋಗಿಸಿ ತಯಾರಿಸಿಕೊಂಡ ಚೀಸ್ & ಆಲೂಗಡ್ಡೆ ಬೈಟ್ಸ್ ಫ್ರೀಜ್ ಮಾಡಲು ಫ್ರೇಜರ್ ನಲ್ಲಿ  15-20 ನಿಮಿಷ ಇಡಿ.
  6. ಬಾಣಲೆ ಇಟ್ಟು ಕರಿಯಲು ಎಣ್ಣೆ ಬಿಸಿ ಯಾದ ನಂತರ ಮಧ್ಯಮ ಉರಿಯಲ್ಲಿ ಫ್ರೀಜ್ ಆಗಿರುವ ಚೀಸ್ & ಆಲೂಗಡ್ಡೆ ಬೈಟ್ಸ್ ಅನ್ನು ಎಣ್ಣೆಯಲ್ಲಿ ಕರಿಯಿರಿ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಚೀಸ್ & ಆಲೂಗಡ್ಡೆ ಬೈಟ್ಸ್ | Cheesy Potato Bites for Snackbox in Kannada

Cheesy Potato Bites kannada hindi snacks for babies toddlers kids

ಚೀಸ್ & ಆಲೂಗಡ್ಡೆ ಬೈಟ್ಸ್  ಮಾಡಲು ಬೇಕಾಗುವ ಪದಾರ್ಥಗಳು :

  1. ಆಲೂಗಡ್ಡೆ– 4
  2. ರವೆ – 2 tbsp + ಸ್ವಲ್ಪ ಮೇಲೆ ಹೊರಳಿಸುವುದಕ್ಕೆ
  3. ಚೀಸ್ ಬೇಕಾಗುವಷ್ಟು
  4. ಅಚ್ಚ ಖಾರದ ಪುಡಿ – 1 tsp
  5. ಕಾಳು ಮೆಣಸು ಪುಡಿ – 1/2 tsp
  6. ಗರಂ ಮಸಾಲಾ – 1 tsp
  7. ಉಪ್ಪು ರುಚಿಗೆ ತಕ್ಕಷ್ಟು
  8. ಎಣ್ಣೆ  – ಕರಿಯಲು

ಚೀಸ್ & ಆಲೂಗಡ್ಡೆ ಬೈಟ್ಸ್  ಮಾಡುವ ವಿಧಾನ  

1. ದೊಡ್ಡ ಬಟ್ಟಲಿಗೆ ಬೇಯಿಸಿರುವ 4 ಆಲೂಗಡ್ಡೆ  ತೆಗೆದು ಕೊಂಡು ಚೆನ್ನಾಗಿ ಮಸೆದುಕೊಳ್ಳಿ.
Cheesy Potato Bites for Babies, Toddlers and Kids

2. ಇದಕ್ಕೆ ರವೆ ಹಾಕಿ ನಂತರ ಉಪ್ಪು ಮತ್ತು ಮಸಾಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ  

Cheesy Potato Bites for Babies, Toddlers and Kids

3. ಕೆಳಗಿ ತೋರಿಸಿರುವ ತರಹ ಚೀಸ್ ಅನ್ನು ಕಟ್  ಮಾಡಿ ಕೊಳ್ಳಿ. ಆಲೂಗಡ್ಡೆ ಮಿಶ್ರಣವನ್ನು ಬಟ್ಟಲ ಆಕಾರವನ್ನು ಮಾಡಿಕೊಂಡು ಒಳಗೆ ಚೀಸ್ ಇಟ್ಟು ಮುಚ್ಚಿ ಉಂಡೆ ಮಾಡಿ ಕೊಳ್ಳಿ.  

Cheesy Potato Bites for Babies, Toddlers and Kids

4. ಕೆಳಗೆ ತೋರಿಸಿರುವ ತರಹ ಮಾಡಿಕೊಂಡು ಮೇಲೆ ರವೆ ಅಥವಾ ಬ್ರೆಡ್ ಕ್ರಮ್ಸ್ ಹೊರಳಿಸಿ.

Cheesy Potato Bites for Babies, Toddlers and Kids

5. ಇದೇ ರೀತಿ ಮಿಶ್ರಣ ಉಪಯೋಗಿಸಿ ತಯಾರಿಸಿಕೊಂಡ ಚೀಸ್ & ಆಲೂಗಡ್ಡೆ ಬೈಟ್ಸ್ ಫ್ರೀಜ್ ಮಾಡಲು ಫ್ರೇಜರ್ ನಲ್ಲಿ  15-20 ನಿಮಿಷ ಇಡಿ.

Cheesy Potato Bites for Babies, Toddlers and Kids

6. ಬಾಣಲೆ ಇಟ್ಟು ಕರಿಯಲು ಎಣ್ಣೆ ಬಿಸಿ ಯಾದ ನಂತರ ಮಧ್ಯಮ ಉರಿಯಲ್ಲಿ ಫ್ರೀಜ್ ಆಗಿರುವ ಚೀಸ್ & ಆಲೂಗಡ್ಡೆ ಬೈಟ್ಸ್ ಅನ್ನು ಎಣ್ಣೆಯಲ್ಲಿ ಕರಿಯಿರಿ.

Cheesy Potato Bites for Babies, Toddlers and Kids

ಚೀಸ್ & ಆಲೂಗಡ್ಡೆ ಬೈಟ್ಸ್ | Cheesy Potato Bites for Snackbox in Kannada

Cheesy Potato Bites kannada hindi snacks for babies toddlers kids

ಸೂಚನೆಗಳು :

  1. ತಾಜಾ ಬಿಸಿ ಬಿಸಿ ಯಾಗಿ ತಿನ್ನುವುದು ಸೂಕ್ತ ಗರಿಗರಿಯಾಗಿರುತ್ತೆದೆ. ಸ್ನಾಕ್ ಬಾಕ್ಸ್ ಗೆ ಒಳ್ಳೆಯ ಆಯ್ಕೆ.
  2. 8 ತಿಂಗಳು ಮಕ್ಕಳಿಗೆ ಕೈಗೆ ನೀಡಲು ಒಳ್ಳೆಯ ಆಹಾರ. ಉಪ್ಪು ಹಾಕದೆ ಸ್ವಲ್ಪ ಮಸಾಲೆ ಬಳಸಿ ನೀಡಬಹುದು

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 18
    Shares