Spread the love
  • 3
    Shares

ಕ್ಯಾರಟ್ ರವೆ ಉಪ್ಪಿಟ್ಟು – Carrot Sooji Upma recipe in Kannada

CARROT SOOJI UPMA for Babies - Sooji or Rava Recipes for Babies hindi kannada

ಉಪ್ಪಿಟ್ಟು ತಯಾರಿಸುವುದು ಬಹಳ ಸುಲಭ ಮತ್ತು ಬೇಗ ಮಾಡಬಹುದು. ಸೂಜಿ ಅಥವಾ ರವೆ ಉಪಯೋಗಿಸಿ ತಯಾರಿಸಬಹುದು, ಶಿಶುಗಳಿಗೆ ಸುಲಭವಾಗಿ ಜೀರ್ಣವಾಗುವುದು. ಉಪ್ಪಿಟ್ಟು ಮಿಶ್ರಣದ ರೀತಿ ಇರುವುದು, ಇದಕ್ಕೆ ಒಳ್ಳೆಯ ಪೌಷ್ಠಿಕವಾದ ಪದಾರ್ಥಗಳನ್ನು ಹಾಕಿ  ತಯಾರಿಸಿದರೆ ಒಳ್ಳೆಯ ರುಚಿ ಮಾತ್ರವಲ್ಲದೇ ಆರೋಗ್ಯಕರವಾದ ಶಿಶು ಆಹಾರವಾಗುತ್ತದೆ. ಶಿಶುಗಳಿಗೆ ಇಂತಹ ರುಚಿಕರವಾದ ಮತ್ತು ಆರೋಗ್ಯಕರವಾದ ಪಾಕವಿಧಾನವನ್ನು ನೀಡಲಾಗಿದೆ ಪ್ರಯತ್ನಿಸಿ ಖಂಡಿತ ಮಕ್ಕಳಿಗೆ ಇಷ್ಟವಾಗುತ್ತದೆ  – ಶಿಶುಗಳಿಗೆ ಕ್ಯಾರಟ್ ರವೆ ಉಪ್ಪಿಟ್ಟು

ಶಿಶುಗಳಿಗೆ ಘನ ಆಹಾರ ಪ್ರಾರಂಭಿಸಿದಾಗ ಹಣ್ಣಿನ ರಸ /ಪ್ಯೂರಿ , ತರಕಾರಿಗಳ ರಸ/ಪ್ಯೂರಿ ನೀಡಬೇಕು, ನಂತರ ಅಕ್ಕಿ ಸರಿ, ರಾಗಿ ಸರಿ, ಖಿಚಡಿ ಮುಂತಾದ ಆಹಾರ ನೀಡಬಹುದು. ಕ್ಯಾರಟ್ ರವೆ ಉಪ್ಪಿಟ್ಟು ಪಾಕವಿಧಾನವನ್ನು ಮಸಾಲೆ ಮತ್ತು ಹೊಸ ಆಹಾರ ವಿನ್ಯಾಸವನ್ನು ಪರಿಚಯಿಸಲು ಒಳ್ಳೆಯ ಶಿಶು ಆಹಾರ. 6 ತಿಂಗಳ ನಂತರ ನೀಡಬಹುದಾದ ಶಿಶು ಆಹಾರಗಳು

ನಮ್ಮ ಇತರ ಪಾಕವಿಧಾನಗಳನ್ನು ಪ್ರಯತ್ನಿಸಿ :

ಕ್ಯಾರಟ್ ನ ಪ್ರಯೋಜನಗಳು :

  • ಬೆಳೆಯುತ್ತಿರುವ ಶಿಶುಗಳಿಗೆ ವಿಟಮಿನ್ ಸಿ, ವಿಟಮಿನ್ ಎ ಮತ್ತು ಕಬ್ಬಿನಾಂಶ ಸಮೃದ್ಧವಾಗಿ ದೊರೆಯುತ್ತದೆ.
  • ಕ್ಯಾರೆಟ್ ಪೌಷ್ಟಿಕಾಂಶದ ಪ್ರಮುಖ ಅಂಶಗಳನ್ನು ನೀಡುತ್ತದೆ.
  • ಒಳ್ಳೆಯ ದೃಷ್ಟಿ, ರಕ್ತ ಪರಿಚಲನೆ ಸುಧಾರಿಸುವುದಕ್ಕೆ ಸಹಾಯಕ  ಮತ್ತು ಮಗುವಿಗೆ ಶಕ್ತಿಯನ್ನು ತುಂಬುತ್ತದೆ.
  • ಉತ್ತಮವಾದ ಕ್ಯಾಲ್ಸಿಯಂನ ಮೂಲ,ಆರೋಗ್ಯಕರವಾದ ಚರ್ಮವನ್ನು ನೀಡುತ್ತದೆ ಮತ್ತು ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Video ಕ್ಯಾರಟ್ ರವೆ ಉಪ್ಪಿಟ್ಟು – Carrot Sooji Upma recipe in Kannada

Kannada Subscribe Button TOTS AND MOMS

ಕ್ಯಾರಟ್ ರವೆ ಉಪ್ಪಿಟ್ಟು – Carrot Sooji Upma recipe in Kannada

ಕ್ಯಾರಟ್ ರವೆ ಉಪ್ಪಿಟ್ಟು - Carrot Sooji Upma recipe in Kannada

ರವೆ ಮತ್ತು ಕ್ಯಾರೆಟ್ ಒಳ್ಳೆಯ ಸಂಯೋಜನೆ, ಕ್ಯಾರೆಟ್ ರವೆ ಉಪ್ಪಿಟ್ಟು ಘನ ಆಹಾರವನ್ನು ಪ್ರಾರಂಭಿಸಿದ ಶಿಶುಗಳಿಗೆ ಪರಿಚಯಿಸಲು ಉತ್ತಮವಾದ ಪಾಕವಿಧಾನ. ಶಿಶುಗಳಿಗೆ ಕ್ಯಾರಟ್ ಅಥವಾ ರವೆ ಪಾಕವಿಧಾನ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಬೆಳಗಿನ ತಿಂಡಿ , ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಕ್ಯಾರಟ್ - 1/2 ತುರಿದಿರುವ
  2. ರವೆ - 1/4 ಕಪ್
  3. ಅರಿಶಿಣ – ಒಂದು ಚಿಟಕೆ
  4. ಕಾಳು ಮೆಣಸು – ಒಂದು ಚಿಟಕೆ
  5. ತುಪ್ಪ  - 2 Tbsp
  6. ಉಪ್ಪು – ಬೇಕಾದರೆ
  7. ನೀರು - 1 ಕಪ್

ವಿಧಾನ

  1.  ಒಂದು ದಪ್ಪ ತಳದ ಬಾಣಲೆಯಲ್ಲಿ ರವೆಯನ್ನು 5 ನಿಮಿಷ ಒಳ್ಳೆಯ ಪರಿಮಳ ಬರುವ ತನಕ ಹುರಿದುಕೊಳ್ಳಿ ನಂತರ ತಟ್ಟೆಗೆ ವರ್ಗಾಯಿಸಿ.
  2.  ಅದೇ  ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ. ಕಾದ ನಂತರ ತುರಿದ ಕ್ಯಾರಟ್ ಹಾಕಿ ಬಣ್ಣ ಬದಲಾಗಿ ಬೇಯುವ ತನಕ ಹುರಿದುಕೊಳ್ಳಿ
  3. ನಂತರ ನಿಮ್ಮ ಮಗುವಿಗೆ ಇಷ್ಟವಾಗುವ ಅಥವಾ ಬೇಕಾದ ಮಸಾಲೆ ಹಾಕಿ. ಇಲ್ಲಿ ಅರಿಶಿನ ಪುಡಿ ಮತ್ತು ಕಾಳು ಮೆಣಸನ್ನು ಬಳಸಲಾಗಿದೆ. ಒಂದು       ನಿಮಿಷಗಳ ಕಾಲ ಎಲ್ಲಾ ಪದಾರ್ಥಗಳು ಹೊಂದುಕೊಳ್ಳುವ ತನಕ ಹುರಿದುಕೊಳ್ಳಿ.
  4. ಬಿಸಿ ನೀರು ತಯಾರಿಸಿ ಇಟ್ಟುಕೊಳ್ಳಿ , ಇದನ್ನು ಹುರಿದ ಕ್ಯಾರಟ್ ಗೆ ಹಾಕಿ, ನಂತರ ಹುರಿದ ರವೆ/ಸೂಜಿಯನ್ನು  ಸ್ವಲ್ಪ ಸ್ವಲ್ಪ ನಿಧಾನವಾಗಿ ಗಂಟಿಲ್ಲದಂತೆ  ಮಿಶ್ರಣ ಮಾಡುತ್ತಾ ಚೆನ್ನಾಗಿ ಕೆದಕಿ.
  5. ಚೆನ್ನಾಗಿ ಗಂಟಿಲ್ಲದಂತೆ ಮಿಶ್ರಣ ಮಾಡಿ, ದೊಡ್ಡವರಿಗೆ ಮತ್ತು ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪ ಉಪ್ಪು ಹಾಕಿ. ಸಣ್ಣ ಉರಿಯಲ್ಲಿ ಮುಚ್ಚಳ   ಮುಚ್ಚಿ ಎರಡು ನಿಮಿಷಗಳ ಕಾಲ ಬೇಯಲು ಬಿಡಿ.
  6. ನಂತರ ಗ್ಯಾಸ್ ಆರಿಸಿ. ಕ್ಯಾರಟ್ ರವೆ ಉಪ್ಪಿಟ್ಟು  ತಯಾರಾಗಿದೆ

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಕ್ಯಾರಟ್ ರವೆ ಉಪ್ಪಿಟ್ಟು – Carrot Sooji Upma recipe in Kannada

ಕ್ಯಾರಟ್ ರವೆ ಉಪ್ಪಿಟ್ಟು ಮಾಡಲು ಬೇಕಾದ ಸಾಮಗ್ರಿಗಳು :

  1.  ಕ್ಯಾರಟ್ – 1/2 ತುರಿದಿರುವ
  2.  ರವೆ – 1/4 ಕಪ್
  3.  ಅರಿಶಿಣ ಒಂದು ಚಿಟಕೆ
  4.  ಕಾಳು ಮೆಣಸು ಒಂದು ಚಿಟಕೆ
  5.  ತುಪ್ಪ  – 2 Tbsp
  6.  ಉಪ್ಪು ಬೇಕಾದರೆ
  7.  ನೀರು – 1 ಕಪ್

ಕ್ಯಾರಟ್ ರವೆ ಉಪ್ಪಿಟ್ಟು  ಮಾಡುವ ವಿಧಾನ :

1. ಒಂದು ದಪ್ಪ ತಳದ ಬಾಣಲೆಯಲ್ಲಿ ರವೆಯನ್ನು 5 ನಿಮಿಷ ಒಳ್ಳೆಯ ಪರಿಮಳ ಬರುವ ತನಕ ಹುರಿದುಕೊಳ್ಳಿ ನಂತರ ತಟ್ಟೆಗೆ ವರ್ಗಾಯಿಸಿ.2. ಅದೇ  ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ. ಕಾದ ನಂತರ ತುರಿದ ಕ್ಯಾರಟ್ ಹಾಕಿ ಬಣ್ಣ ಬದಲಾಗಿ ಬೇಯುವ ತನಕ ಹುರಿದುಕೊಳ್ಳಿ3. ನಂತರ ನಿಮ್ಮ ಮಗುವಿಗೆ ಇಷ್ಟವಾಗುವ ಅಥವಾ ಬೇಕಾದ ಮಸಾಲೆ ಹಾಕಿ. ಇಲ್ಲಿ ಅರಿಶಿನ ಪುಡಿ ಮತ್ತು ಕಾಳು ಮೆಣಸನ್ನು ಬಳಸಲಾಗಿದೆ. ಒಂದು               ನಿಮಿಷಗಳ ಕಾಲ ಎಲ್ಲಾ ಪದಾರ್ಥಗಳು ಹೊಂದುಕೊಳ್ಳುವ ತನಕ ಹುರಿದುಕೊಳ್ಳಿ.4. ಬಿಸಿ ನೀರು ತಯಾರಿಸಿ ಇಟ್ಟುಕೊಳ್ಳಿ , ಇದನ್ನು ಹುರಿದ ಕ್ಯಾರಟ್ ಗೆ ಹಾಕಿ, ನಂತರ ಹುರಿದ ರವೆ/ಸೂಜಿಯನ್ನು  ಸ್ವಲ್ಪ ಸ್ವಲ್ಪ ನಿಧಾನವಾಗಿ ಗಂಟಿಲ್ಲದಂತೆ ಮಿಶ್ರಣ ಮಾಡುತ್ತಾ ಚೆನ್ನಾಗಿ ಕೆದಕಿ.5. ಚೆನ್ನಾಗಿ ಗಂಟಿಲ್ಲದಂತೆ ಮಿಶ್ರಣ ಮಾಡಿ, ದೊಡ್ಡವರಿಗೆ ಮತ್ತು ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಲ್ಪ ಉಪ್ಪು ಹಾಕಿ. ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಎರಡು ನಿಮಿಷಗಳ ಕಾಲ ಬೇಯಲು ಬಿಡಿ.6. ನಂತರ ಗ್ಯಾಸ್ ಆರಿಸಿ.7. ಕ್ಯಾರಟ್ ರವೆ ಉಪ್ಪಿಟ್ಟು  ತಯಾರಾಗಿದೆ

ಕ್ಯಾರಟ್ ರವೆ ಉಪ್ಪಿಟ್ಟು – Carrot Sooji Upma recipe in Kannada

CARROT SOOJI UPMA for Babies - Sooji or Rava Recipes for Babies hindi kannada

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ. 


Spread the love
  • 3
    Shares