Spread the love
  • 23
    Shares

ಶಿಶುಗಳಿಗೆ ಕುಂಬಳಕಾಯಿ ಬಹಳ ಲಾಭದಾಯಕ. ಶಿಶುಗಳ ಆರೋಗ್ಯಕರ ಬೆಳವಣಿಗೆಗೆ ಬೇಕಾಗಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಂತಹ ಅಗತ್ಯ ಪೋಷಕಾಂಶಗಳು ಸಮೃಧ್ಧವಾಗಿರುವುದು. ಕುಂಬಳಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು(antioxidants) ಹೇರಳವಾಗಿರುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನಮ್ಮ ಬ್ಲಾಗ್ ನಲ್ಲಿ 3 ಹಣ್ಣುಗಳ ರಸ ಪಾಕವಿಧಾನವನ್ನು ಪ್ರಕಟಿಸಿದ್ದೇನೆ. ಸೇಬು, ಪೇರಳೆ ಮತ್ತು ಕುಂಬಳಕಾಯಿ ಬಳಸಿ ಮಾಡಲಾಗಿದೆ. ಕುಂಬಳಕಾಯಿ ಒಂದು ಹಣ್ಣು. ಇದು ಸರಿಗೆ ಒಳ್ಳೆಯ ಪರಿಮಳವನ್ನು ಮತ್ತು ರುಚಿಯನ್ನು ನೀಡುತ್ತದೆ.

ಗೋಧಿ ಕುಂಬಳ ಸರಿ | Broken Wheat Pumpkin Porridge in Kannada

Broken Wheat Pumpkin Porridge for Babies Dalia Recipe in Hindi Kannada

ಶಿಶುಗಳಿಗೆ ಎದೆ ಹಾಲನ್ನು ಬಿಡಿಸುವಾಗ ಗೋಧಿ ನುಚ್ಚು ಶುದ್ಧ ರೂಪದಲ್ಲಿರುವ ಉತ್ತಮ ಪೌಷ್ಟಿಕ ಆಹಾರ. ಅಧಿಕ ನಾರಿನಾಂಶವಿರುವುದರಿಂದ  ಚಯಾಪಚಯನಕ್ಕೆ ಸಹಾಯಕವಾಗುತ್ತದೆ ಮತ್ತು ಜೀರ್ಣಿಸಿಕೊಳ್ಳುವುದು ಸುಲಭ. ಕಬ್ಬಿಣ ಮತ್ತು ಮೆಗ್ನೀಸಿಯಮ್ ನಲ್ಲಿ  ಸಮೃಧ್ಧವಾಗಿರುತ್ತದೆ ಮತ್ತು ಮಗುವಿಗೆ ದೀರ್ಘಕಾಲದವರೆಗೆ ಹೊಟ್ಟೆ ಹಸಿವಾಗುವುದಿಲ್ಲ. ಗೋಧಿ ನುಚ್ಚನ್ನು 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ನೀಡಬಹುದು. ಹಣ್ಣುಗಳು ಮತ್ತು ತರಕಾರಿಗಳ ರಸವನ್ನು ಘನ ಆಹಾರಗಳಾಗಿ ಪರಿಚಯಿಸಿದ ನಂತರ ಕೇರಳ ಬಾಳೆಕಾಯಿಯ ಸರಿ ಮತ್ತು ಅಕ್ಕಿಸರಿ ನೀಡಬಹುದು.

ನಮ್ಮ ಬ್ಲಾಗ್ ನಲ್ಲಿ ಹಲವು ವಿವಿಧ ಬಗೆಯ ಸರಿ ಪಾಕವಿಧಾನದ ವೀಡಿಯೊ ನೀಡಲಾಗಿದೆ.ಪ್ರಯತ್ನಿಸಿ ನೋಡಿ.

ಹೆಸರುಬೇಳೆ ಮತ್ತು ಗೋಧಿ ನುಚ್ಚಿನ ಖಿಚಡಿ

ಗೋಧಿ ನುಚ್ಚಿನ ಸರಿ

ತ್ವರಿತ ಓಟ್ಸ್ ಮತ್ತು ಗೋಧಿ ನುಚ್ಚಿನ ಸರಿ

ಪನೀರ್ ಮತ್ತು ಗೋಧಿ ನುಚ್ಚಿನ ಖಿಚಡಿ

ಗೋಧಿ ಕುಂಬಳ ಸರಿ | Broken Wheat Pumpkin Porridge in Kannada

Kannada Subscribe Button TOTS AND MOMS

ಗೋಧಿ ಕುಂಬಳ ಸರಿ | Broken Wheat Pumpkin Porridge in Kannada

ಗೋಧಿ ಕುಂಬಳ ಸರಿ

ಶಿಶುಗಳಿಗೆ ಗೋಧಿ ನುಚ್ಚು ಮತ್ತು ಕುಂಬಳದ ಸಂಯೋಜನೆಯಿಂದ ಮಾಡಿರುವ ಸರಿ ಒಳ್ಳೆಯ ಪರಿಮಳ ಹಾಗು ರುಚಿ ನೀಡುತ್ತದೆ. ಹಾಲನ್ನು ಬಿಡಿಸುವ ಸಮಯದಲ್ಲಿ ಮತ್ತು ಆರೋಗ್ಯಕರವಾದ ಬೆಳವಣಿಗೆಗೆ ಉಪಯುಕ್ತವಾದ ಪಾಕವಿಧಾನ ಗೋಧಿ ಕುಂಬಳ ಸರಿ .

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಕುಂಬಳ ಕಾಯಿ - 1/4 ಕಪ್ ತುರಿದಿರುವ
  2. ಗೊಧಿನುಚ್ಚು - 1/4 ಕಪ್ 
  3. ಜೀರಿಗೆ /ಕಾಳುಮೆಣಸು ಪುಡಿ ಚಿಟಕೆ
  4. ಉಪ್ಪು ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ

ವಿಧಾನ

  1. ಕುಕ್ಕರ್ /ಪ್ಯಾನ್ ಗೆ ತುಪ್ಪ ಹಾಕಿ ಬಿಸಿಯಾದ ನಂತರ ತುರಿದಿರುವ ಕುಂಬಳಕಾಯಿ ಹಾಕಿ ಒಂದು ನಿಮಿಷ ಹುರಿಯಬೇಕು. ನಂತರ ಗೋಧಿ ನುಚ್ಚು ಹಾಕಿ ಮಿಶ್ರಣ ಮಾಡಿ.
  2. ಒಂದು ಚಿಟಕೆ ಜೀರಿಗೆ ಪುಡಿ ಹಾಕಿ ನಂತರ ನೀರನ್ನು ಹಾಕಬೇಕು.
  3. ಕುಕ್ಕರ್ ಮುಚ್ಚಳ ಹಾಕಿ 3 ಸೀಟಿ ಬರುವ ತನಕ ಬೇಯಿಸಿ. ಪ್ಯಾನ್ ಉಪಯೋಗಿಸಿ ಮಾಡುತಿದ್ದರೆ 15 ನಿಮಿಷಗಳ ಕಾಲ ಬೇಯಿಸಿ. ಗೋಧಿ ನುಚ್ಚನ್ನು 10 ನಿಮಿಷ ನೀರಿನಲ್ಲಿ ನೆನೆಸಿದರೆ ಬೇಗ ಬೇಯುವುದು. ಬೆಂದ ನಂತರ ಕೆಳಗೆ ತೋರಿಸಿರುವ ತರಹ ಕಾಣುತ್ತದೆ.
  4. ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಆಹಾರದ ವಿನ್ಯಾಸವನ್ನು ಪರಿಚಯಿಸಲು ಚಮಚದಲ್ಲಿ ಹಾಗೆ ಮಸಿದು (ಮ್ಯಾಶ್ ಮಾಡಿ) ತಿನ್ನಿಸಬಹುದು.ಪ್ಯೂರಿ ಅಥವಾ ನಯವಾದ ವಿನ್ಯಾಸಕ್ಕೆ ಬ್ಲೆಂಡರ್ / ಮಿಕ್ಸರ್ ನಿಂದ ಮಿಶ್ರಣವನ್ನು ಕೆಳಗೆ ತೋರಿಸಲಾಗಿರುವ ತರಹ ತರಿತರಿ ಅಥವಾ ಮೃದುವಾಗಿ ರುಬ್ಬಿಕೊಳ್ಳಿ.
  5. ಗೋಧಿ ಕುಂಬಳ ಸರಿ ಸಿಧ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಭೇಟಿ ಮಾಡಿ

ಗೋಧಿ ಕುಂಬಳ ಸರಿ

Broken Wheat Pumpkin Porridge for Babies Dalia Recipe in Hindi Kannada

ಶಿಶುಗಳಿಗೆ ಗೋಧಿ ಕುಂಬಳ ಸರಿ ಮಾಡುವ ವಿಧಾನ

1.ಕುಕ್ಕರ್ /ಪ್ಯಾನ್ ಗೆ ತುಪ್ಪ ಹಾಕಿ ಬಿಸಿಯಾದ ನಂತರ ತುರಿದಿರುವ ಕುಂಬಳಕಾಯಿ ಹಾಕಿ ಒಂದು ನಿಮಿಷ ಹುರಿಯಬೇಕು. ನಂತರ ಗೋಧಿ ನುಚ್ಚು ಹಾಕಿ ಮಿಶ್ರಣ ಮಾಡಿ.

Broken Wheat Pumpkin Porridge for Babies Dalia Recipe in Hindi Kannada

2.ಒಂದು ಚಿಟಕೆ ಜೀರಿಗೆ ಪುಡಿ ಹಾಕಿ ನಂತರ ನೀರನ್ನು ಹಾಕಬೇಕು.

Broken Wheat Pumpkin Porridge for Babies Dalia Recipe in Hindi Kannada

3.ಕುಕ್ಕರ್ ಮುಚ್ಚಳ ಹಾಕಿ 3 ಸೀಟಿ ಬರುವ ತನಕ ಬೇಯಿಸಿ. ಪ್ಯಾನ್ ಉಪಯೋಗಿಸಿ ಮಾಡುತಿದ್ದರೆ 15 ನಿಮಿಷಗಳ ಕಾಲ ಬೇಯಿಸಿ. ಗೋಧಿ ನುಚ್ಚನ್ನು 10 ನಿಮಿಷ ನೀರಿನಲ್ಲಿ ನೆನೆಸಿದರೆ ಬೇಗ ಬೇಯುವುದು. ಬೆಂದ ನಂತರ ಕೆಳಗೆ ತೋರಿಸಿರುವ ತರಹ ಕಾಣುತ್ತದೆ.

Broken Wheat Pumpkin Porridge for Babies Dalia Recipe in Hindi Kannada

4.ಒಂದು ವರ್ಷ ಮೇಲ್ಪಟ್ಟ ಮಕ್ಕಳಿಗೆ ಆಹಾರದ ವಿನ್ಯಾಸವನ್ನು ಪರಿಚಯಿಸಲು ಚಮಚದಲ್ಲಿ ಹಾಗೆ ಮಸಿದು (ಮ್ಯಾಶ್ ಮಾಡಿ) ತಿನ್ನಿಸಬಹುದು.ಪ್ಯೂರಿ ಅಥವಾ ನಯವಾದ ವಿನ್ಯಾಸಕ್ಕೆ ಬ್ಲೆಂಡರ್ / ಮಿಕ್ಸರ್ ನಿಂದ ಮಿಶ್ರಣವನ್ನು ಕೆಳಗೆ ತೋರಿಸಲಾಗಿರುವ ತರಹ ತರಿತರಿ ಅಥವಾ ಮೃದುವಾಗಿ ರುಬ್ಬಿಕೊಳ್ಳಿ.

Broken Wheat Pumpkin Porridge for Babies Dalia Recipe in Hindi Kannada

5.ಗೋಧಿ ಕುಂಬಳ ಸರಿ ಸಿಧ್ಧವಾಗಿದೆ.

ಶಿಶುಗಳಿಗೆ ಗೋಧಿ ಕುಂಬಳ ಸರಿ | Broken Wheat Pumpkin Porridge in Kannada

Broken Wheat Pumpkin Porridge for Babies Dalia Recipe in Hindi Kannada

ಸೂಚನೆಗಳು :

1. ವಿವಿಧ ಆಹಾರದ ವಿನ್ಯಾಸವನ್ನು ಪರಿಚಯಿಸಲು ಮಿಶ್ರಣವನ್ನು ನಯವಾಗಿ ರುಬ್ಬದೆ ಹಾಗೆ ಚಮಚದಿಂದ ಮಸೆದು ತಿನ್ನಿಸಬಹುದು.

2. ಶಿಶುಗಳಿಗೆ ಮೊದಲ ಬಾರಿ ಗೋಧಿ ಪರಿಚಯಿಸುವಾಗ ಗ್ಲುಟೆನ್ ಅಲರ್ಜಿ ಬಗ್ಗೆ ಪರಿಶೀಲಿಸಿ.

3. ಸರಿ ಸ್ಥಿರತೆ ಗಟ್ಟಿಯಾಗಿರಬೇಕು ತುಂಬಾ ನೀರಾಗಿರಬಾರದು.

4. ಈ ಪಾಕವಿಧನವನ್ನು ಬಾರ್ಲಿ ಅಥವಾ ಅಕ್ಕಿಯನ್ನು ಬಳಸಿ ಮಾಡಬಹುದು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 23
    Shares