ತೆಂಗಿನ ಬೆಲ್ಲದ ಸೋರೆಕಾಯಿ ಹಲ್ವಾ। Bottle Gourd Halwa recipe in Kannada
Read this article in
ತೆಂಗಿನ ಬೆಲ್ಲದ ಸೋರೆಕಾಯಿ ಹಲ್ವಾ । Bottle Gourd Halwa recipe in Kannada
ಸೋರೆಕಾಯಿ ಹಲ್ವಾ | ನೈಸರ್ಗಿಕ ಸಿಹಿಕಾರಕಗಳನ್ನು ಬಳಸಿ ಮಾಡಿರುವ ಸೋರೆಕಾಯಿ ಹಲ್ವಾ | ತೆಂಗಿನ ಸಕ್ಕರೆ ಜೊತೆ ಸೋರೆಕಾಯಿಯ ಹಲ್ವಾ | ಶಿಶು ಆಹಾರಕ್ಕೆ ನೈಸರ್ಗಿಕ ಸಿಹಿಕಾರಕಗಳು | ಕುಟುಂಬಕ್ಕೆ ಸಿಹಿ ಪಾಕವಿಧಾನಗಳು | ಮಕ್ಕಳಿಗೆ ಮತ್ತು ಶಿಶುಗಳಿಗೆ ಸುಲಭವಾದ ಮತ್ತು ಆರೋಗ್ಯಕಾರವಾದ ಸಿಹಿ | ತೆಂಗಿನ ಬೆಲ್ಲದ ಸೋರೆಕಾಯಿ ಹಲ್ವಾ
ತೆಂಗಿನಕಾಯಿ ಸಕ್ಕರೆಯೊಂದಿಗೆ ಸೋರೆಕಾಯಿ ಹಲ್ವಾ ಸಣ್ಣ ಮಕ್ಕಳಿಗೆ ಆರೋಗ್ಯಕಾರವಾದ ಸಿಹಿ. ಸೋರೆಕಾಯಿ ಒಳ್ಳೆಯ ಪೌಷ್ಟಿಕ ಮತ್ತು ಆರೋಗ್ಯಕರವಾದ ತರಕಾರಿ. ತೆಂಗಿನಕಾಯಿ ಸಕ್ಕರೆ – ರಾಸಾಯನಿಕ ಮುಕ್ತವಾಗಿರುವ ಬ್ಲೀಚ್ ಮಾಡದ ಸಕ್ಕರೆ, ಸಾಮಾನ್ಯ ಸಕ್ಕರೆ ಬ್ಲೀಚ್ ಮಾಡಿರುವುದರಿಂದ ಬೆಳ್ಳಗೆ ಇರುವುದು. ಬ್ಲೀಚ್ ಮಾಡಲು ಅನೇಕ ರಾಸಾಯನಿಕ ಬಳ ಸಲಾಗಿರುತ್ತದೆ. ತೆಂಗಿನ ಬೆಲ್ಲ ಎಲ್ಲಾ ವಯಸ್ಸಿನ ಜನರಿಗೆ ನೀಡುವ ಅತ್ಯುತ್ತಮ ಸಿಹಿತಿಂಡಿಗಳಲ್ಲಿ ಒಂದು.
ಸೋರೆಕಾಯಿಯಲ್ಲಿ ಪ್ರಮುಖ ಖನಿಜಗಳು, ಕಬ್ಬಿಣ, ಪ್ರೋಟೀನ್ಗಳು ಮತ್ತು ಜೀವಸತ್ವಗಳು ದೊರಕುವುದು ; ಹೆಚ್ಚುವರಿಯಾದ ನಾರಿನ ಅಂಶ ಲಭಿಸುವುದು. ತೆಂಗಿನಕಾಯಿ ಸಕ್ಕರೆಯಲ್ಲಿ ಕಬ್ಬಿಣ, ಸತು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುತ್ತದೆ. ಬಿಳಿ ಸಕ್ಕರೆಯಲ್ಲಿ ಯಾವುದೇ ಪೋಷಣೆ ಸಿಗುವುದಿಲ್ಲ ಅಧಿಕ ಕ್ಯಾಲೊರಿಗಳನ್ನು ಹೊಂದಿರುತ್ತದೆ. ತೆಂಗಿನಕಾಯಿ ಸಕ್ಕರೆ ಶಿಶುಗಳು ಮತ್ತು ಪುಟ್ಟ ಮಕ್ಕಳಿಗೆ ಉತ್ತಮ ಪರ್ಯಾಯವಾಗಿದೆ.
ನಮ್ಮ ಬ್ಲಾಗ್ ನಲ್ಲಿ ಅನೇಕ ನೈಸರ್ಗಿಕ ಸಿಹಿಕಾರಕಗಳು ಬಳಸಿ ಮಾಡುವ ಪಾಕವಿಧಾನಗಳನ್ನು ಪ್ರಯತ್ನಿಸಿ .
ವಿಡಿಯೋ: ತೆಂಗಿನ ಬೆಲ್ಲದ ಸೋರೆಕಾಯಿ ಹಲ್ವಾ । Bottle Gourd Halwa recipe in Kannada

ತೆಂಗಿನ ಬೆಲ್ಲದ ಸೋರೆಕಾಯಿ ಹಲ್ವಾ । Bottle Gourd Halwa recipe in Kannada
ತೆಂಗಿನ ಬೆಲ್ಲದ ಸೋರೆಕಾಯಿ ಹಲ್ವಾ । Bottle Gourd Halwa recipe in Kannada
ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಸಿಹಿ
ತಿನಿಸು:ಭಾರತೀಯಸಾಮಗ್ರಿಗಳು
ವಿಧಾನ
ನಿಯಮಿತ ನವೀಕರಣಗಳಿಗೆ ದಯವಿಟ್ಟು ನಮ್ಮ Instagram and Facebook ಪುಟ ಅನುಸರಿಸಿ.
ತೆಂಗಿನ ಬೆಲ್ಲದ ಸೋರೆಕಾಯಿ ಹಲ್ವಾ । Bottle Gourd Halwa recipe in Kannada
ಸೋರೆಕಾಯಿ ಹಲ್ವಾ ಮಾಡುವ ವಿಧಾನ :
- ಒಂದು ಅಗಲವಾದ ಪ್ಯಾನ್/ಬಾಣಲೆಯಲ್ಲಿ ತುಪ್ಪ ಹಾಕಿ. ತುಪ್ಪ ಕರಗಿದ ನಂತರ ಸಣ್ಣಗೆ ಹೆಚ್ಚಿರುವ ಪಿಸ್ತಾ ಮತ್ತು ಬಾದಾಮಿ ಹಾಕಿ.
- ಹೊಂಬಣ್ಣ ಬರುವ ತನಕ 2 ನಿಮಿಷ ಹುರಿಯಿರು. ಹಲ್ವಾ ತಯಾರಿಸಿದ ನಂತರ ಅಲಂಕರಿಸಲು ಬಳಸಬಹುದು.
- ಅದೇ ಬಾಣಲೆಗೆ ಸಿಪ್ಪೆ ತೆಗೆದು ತುರಿದಿರುವ ಸೋರೆಕಾಯಿಯನ್ನು ತುಪ್ಪದ ಜೊತೆ ಹಾಕಿ, 5 ರಿಂದ 10 ನಿಮಿಷದವರೆಗೆ ಸಣ್ಣ ಉರಿಯಲ್ಲಿ ಹಸಿ ವಾಸನೆ ಹೋಗುವ ತನಕ ಹುರಿಯಿರಿ.
- ಚೆನ್ನಾಗಿ ಹುರಿದ ನಂತರ ಹಾಲು ಮತ್ತು ಕೇಸರಿ ಹಾಕಿ. ಕೇಸರಿ ಹಾಕುವ ಮುಂಚೆ ಹಾಲಲ್ಲಿ ನೆನಸಿರಬೇಕು.
- ಇದಕ್ಕೆ ಒಣ ಹಣ್ಣುಗಳ ಪುಡಿ ಸೇರಿಸಿದರೆ ಒಳ್ಳೆಯ ಪರಿಮಳ ಮತ್ತು ರುಚಿ ನೀಡುವುದು. 15 ನಿಮಿಷಗಳ ಕಾಲ ಚೆನ್ನಾಗಿ ಗಾಢ ಸ್ಥಿರತೆ ಪಡೆಯುವತನಕ ಮಿಶ್ರಣವನ್ನು ಹುರಿಯಿರಿ.
- ನಂತರ ತೆಂಗಿನ ಸಕ್ಕರೆ ಹಾಕಿ. ಇದು ನೈಸರ್ಗಿಕ ಸಿಹಿ ಮತ್ತು ಒಳ್ಳೆಯ ರುಚಿ ನೀಡುವುದು. ತೆಂಗಿನ ಸಕ್ಕರೆ TOTS and MOMS ಆನ್ಲೈನ್ ಅಂಗಡಿ ಯಲ್ಲಿ ಲಭ್ಯವಿದೆ. ಸಕ್ಕರೆ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಪರ್ಯಾಯವಾಗಿ ಬಳಸಲು ತೆಂಗಿನ ಸಕ್ಕರೆ ಸೂಕ್ತವಾಗಿರುವುದು ಏಕೆಂದರೆ ಇದು ಆರೋಗ್ಯಕಾರವಾದ ನೈಸರ್ಗಿಕ ಸಿಹಿ.
- ಸರಿಯಾದ ಸ್ಥಿರತೆ ಬರುವ ತನಕ ಮಿಶ್ರಣವನ್ನು ಬೇಯಿಸಿ. ಇದಕ್ಕೆ ಹುರಿದುಕೊಂಡಿರುವ ಒಣ ಹಣ್ಣುಗಳನ್ನು ಹಾಕಿ ಅಲಂಕರಿಸಿ. ಮೇಲೆ ಸ್ವಲ್ಪ ತುಪ್ಪ ಹಾಕಬಹುದು. ಒಳ್ಳೆಯ ರುಚಿ ಮತ್ತು ಪರಿಮಳ ನೀಡುವುದು.
- ತೆಂಗಿನ ಸಕ್ಕರೆಯೊಂದಿಗೆ ಸೋರೆಕಾಯಿ ಹಲ್ವಾ ತಯಾರಾಗಿದೆ.
ತೆಂಗಿನ ಬೆಲ್ಲದ ಸೋರೆಕಾಯಿ ಹಲ್ವಾ । Bottle Gourd Halwa recipe in Kannada


ಲೇಖನವನ್ನು ಓದಿದಕ್ಕೆ ಧನ್ಯವಾದಗಳು . ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati Instagram, Urban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.