ಬೀಟ್ರೂಟ್ ಆಲೂಗಡ್ಡೆ ಪ್ಯೂರಿ| Beetroot Potato Puree in Kannada
Read this article in
ಬೀಟ್ರೂಟ್ ಆಲೂಗಡ್ಡೆ ಪ್ಯೂರಿ| Beetroot Potato Puree in Kannada
ಬೀಟ್ರೂಟ್ ಮತ್ತು ಆಲೂಗಡ್ಡೆ ಆರೋಗ್ಯಕರವಾದ ತರಕಾರಿಗಳು. ಶಿಶುಗಳಿಗೆ ಘನ ಆಹಾರವಾಗಿ ನೀಡಲು ಉತ್ತಮವಾದ ತರಕಾರಿಗಳು. ಆಲೂಗಡ್ಡೆಯು ಮೃದುವಾಗಿರುತ್ತದೆ ಮತ್ತು ಕೆನೆಯುಕ್ತ ರಚನೆ ನೀಡುತ್ತದೆ. ಬೀಟ್ರೂಟ್ ಮತ್ತು ಆಲುಗಡ್ಡೆಯಲ್ಲಿರುವ ಪಿಷ್ಟ ಹಾಗು ನೈಸರ್ಗಿಕ ಸಿಹಿ ಬೀಟ್ರೂಟ್ ಆಲೂಗಡ್ಡೆ ಪ್ಯೂರಿಯು ಶಿಶುಗಳಿಗೆ ರುಚಿಕರವಾದ ಪ್ಯೂರಿ.
ಕೆಲವು ಮಕ್ಕಳು ಪ್ರತ್ಯೇಕ ಹಣ್ಣು ಅಥವಾ ತರಕಾರಿ ಪ್ಯೂರಿ ತಿನ್ನಲು ಇಷ್ಟಪಡುವುದಿಲ್ಲ. ಇಂತಹ ಸಮಯದಲ್ಲಿ ವಿಭಿನ್ನ ಸಂಯೋಜನೆಗಳ ಮೂಲಕ ತರಕಾರಿಗಳ ಪ್ಯೂರಿ ನೀಡುವುದು ಒಳ್ಳೆಯದು. ಜೀರಿಗೆ ಅಥವಾ ಚಕ್ಕೆ ಪುಡಿ ಮಸಾಲೆಗಳನ್ನು ಸೇರಿಸಿ ರುಚಿ ಕೂಡ ಹೆಚ್ಚಿಸಬಹುದು.
ಬೀಟ್ರೂಟ್ ನಲ್ಲಿ ಫೋಲೇಟ್ ಮತ್ತು ಮ್ಯಾಂಗನೀಸ್ ಸಮೃದ್ಧವಾಗಿರುವುದರಿಂದ ಶಿಶುಗಳಲ್ಲಿ ರಕ್ತಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಮೆದುಳನ್ನು ಚುರುಕುಗೊಳಿಸಲು ಮತ್ತು ಜೀರ್ಣಕ್ರಿಯೆಗೆ ಸಹಾಯಕ. ಆಲೂಗೆಡ್ಡೆಯಲ್ಲಿರುವ ಕಾರ್ಬೋಹೈಡ್ರೇಟ್ ವಿಶೇಷವಾಗಿ ಬೆಳೆಯುತ್ತಿರುವ ಶಿಶುಗಳಿಗೆ ಅಗತ್ಯವಾಗಿರುತ್ತದೆ. ನನ್ನ ಬ್ಲಾಗ್ನಲ್ಲಿ ನಾನು ಶಿಶುಗಳಿಗಾಗಿ ಹಲವಾರು ಪ್ಯೂರಿ ಪಾಕವಿಧಾನಗಳನ್ನು ಪೋಸ್ಟ್ ಮಾಡಿದ್ದೇನೆ. ದಯವಿಟ್ಟು ಪ್ರಯತ್ನಿಸಿ ನೋಡಿ.
ಕೆಲವು ಉಪಯುಕ್ತ ಪಾಕವಿಧಾನಗಳ ಸಂಗ್ರಹ ಮತ್ತು ಮಾಹಿತಿ ಕೆಳಗೆ ನೀಡಲಾಗಿದೆ :
- ಶಿಶುಗಳಿಗೆ ಹೇಗೆ ಘನ ಆಹಾರ ಕೊಡಬೇಕು How to introduce solids to babies
- 6 ತಿಂಗಳು ಶಿಶುಗಳ ಆಹಾರದ ಚಾರ್ಟ್ 6 months Baby Food Chart
- ಮಕ್ಕಳಿಗೆ ಪ್ಯೂರಿ ಪಾಕವಿಧನಗಳು Puree Recipes for Babies
- ಶಿಶು ಆಹಾರ – ಸರಿಗಳು Porridges for Babies
- ತ್ವರಿತ ಶಿಶು ಆಹಾರ ಮಿಶ್ರಣಗಳು Instant Food Mixes for Babies
- ತೂಕ ಹೆಚ್ಚಿಸುವ ಆಹಾರಗಳು Weight Gaining Foods
- Wonderchef Blender Jar
Video: ಬೀಟ್ರೂಟ್ ಆಲೂಗಡ್ಡೆ ಪ್ಯೂರಿ| Beetroot Potato Puree in Kannada
ಬೀಟ್ರೂಟ್ ಆಲೂಗಡ್ಡೆ ಪ್ಯೂರಿ| Beetroot Potato Puree in Kannada
ಬೀಟ್ರೂಟ್ ಆಲೂಗಡ್ಡೆ ಪ್ಯೂರಿ
ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು
- ಬೀಟ್ರೂಟ್ - 1
- ಆಲುಗಡ್ಡೆ- 1
- ಚಕ್ಕೆ - 1 ಇಂಚು
ವಿಧಾನ
- ಪ್ಯೂರಿ ತಯಾರಿಸಲು ತರಕಾರಿಗಳು ಅಥವಾ ಹಣ್ಣುಗಳನ್ನು ಬೇಯಿಸುವುದಕ್ಕೆ ವಿವಿಧ ಮಾರ್ಗಗಳಿವೆ. ಪ್ಯೂರಿ ತಯಾರಿಸಲು ವೆಜಿಟಬಲ್ ಸ್ಟೀಮರ್ ಬಾಸ್ಕೆಟ್ ಅನ್ನು ಬಳಸಲಾಗಿದೆ. ಒಂದು ಪ್ಯಾನ್ ತೆಗೆದುಕೊಂಡು ಎರಡು ಲೋಟ ನೀರನ್ನು ಹಾಕಿ ತರಕಾರಿಗಳನ್ನು ಬೇಯಿಸಲು ಸ್ಟೀಮ್ ಬುಟ್ಟಿ ಇಡಬೇಕು.
- ಇದಕ್ಕೆ ತೆಳ್ಳಗೆ ಕತ್ತರಿಸಿರುವ ಆಲೂಗಡ್ಡೆ ಮತ್ತು ಬೀಟ್ರೂಟ್ ಹಾಕಿದರೆ ಬೇಗ ಬೇಯುವುದು
- ಮಧ್ಯಮ ಉರಿಯಲ್ಲಿ 10-15 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಬೇಕು.
- ಹಬೆಯಲ್ಲಿ ಬೇಯಿಸಿರುವ ಆಲೂಗಡ್ಡೆ ಮತ್ತು ಬೀಟ್ರೂಟನ್ನು ವಂಡರ್ ಶೆಫ್ ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಬೇಕು. ಪ್ಯೂರಿ ಬಿಸಿ ಬಿಸಿಯಾಗಿ ನೀಡುವುದು ಒಳ್ಳೆಯದು.
- ಸ್ವಲ್ಪ ತುಪ್ಪ ಹಾಕಿದರೆ ಒಳ್ಳೆಯ ರುಚಿ ನೀಡುವುದು. ಬೀಟ್ರೂಟ್ ಆಲೂಗಡ್ಡೆ ಪ್ಯೂರಿ ತಯಾರಾಗಿದೆ.
ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ
ಬೀಟ್ರೂಟ್ ಆಲೂಗಡ್ಡೆ ಪ್ಯೂರಿ| Beetroot Potato Puree in Kannada
ಬೀಟ್ರೂಟ್ ಆಲುಗಡ್ಡೆ ಪ್ಯೂರಿ ಮಾಡುವ ವಿಧಾನ :
- ಬೀಟ್ರೂಟ್ – 1
- ಆಲುಗಡ್ಡೆ– 1
- ಚಕ್ಕೆ – 1 ಇಂಚು
ಬೀಟ್ರೂಟ್ ಆಲುಗಡ್ಡೆ ಪ್ಯೂರಿ ಮಾಡುವ ವಿಧಾನ :
1. ಪ್ಯೂರಿ ತಯಾರಿಸಲು ತರಕಾರಿಗಳು ಅಥವಾ ಹಣ್ಣುಗಳನ್ನು ಬೇಯಿಸುವುದಕ್ಕೆ ವಿವಿಧ ಮಾರ್ಗಗಳಿವೆ. ಪ್ಯೂರಿ ತಯಾರಿಸಲು ವೆಜಿಟಬಲ್ ಸ್ಟೀಮರ್ ಬಾಸ್ಕೆಟ್ ಅನ್ನು ಬಳಸಲಾಗಿದೆ. ಒಂದು ಪ್ಯಾನ್ ತೆಗೆದುಕೊಂಡು ಎರಡು ಲೋಟ ನೀರನ್ನು ಹಾಕಿ ತರಕಾರಿಗಳನ್ನು ಬೇಯಿಸಲು ಸ್ಟೀಮ್ ಬುಟ್ಟಿ ಇಡಬೇಕು.
2. ಇದಕ್ಕೆ ತೆಳ್ಳಗೆ ಕತ್ತರಿಸಿರುವ ಆಲೂಗಡ್ಡೆ ಮತ್ತು ಬೀಟ್ರೂಟ್ ಹಾಕಿದರೆ ಬೇಗ ಬೇಯುವುದು
3. ಮಧ್ಯಮ ಉರಿಯಲ್ಲಿ 10-15 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಬೇಕು.
4. ಹಬೆಯಲ್ಲಿ ಬೇಯಿಸಿರುವ ಆಲೂಗಡ್ಡೆ ಮತ್ತು ಬೀಟ್ರೂಟನ್ನು ವಂಡರ್ ಶೆಫ್ ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ರುಬ್ಬಿಕೊಳ್ಳಬೇಕು. ಪ್ಯೂರಿ ಬಿಸಿ ಬಿಸಿಯಾಗಿ ನೀಡುವುದು ಒಳ್ಳೆಯದು.
5. ಸ್ವಲ್ಪ ತುಪ್ಪ ಹಾಕಿದರೆ ಒಳ್ಳೆಯ ರುಚಿ ನೀಡುವುದು. ಬೀಟ್ರೂಟ್ ಆಲೂಗಡ್ಡೆ ಪ್ಯೂರಿ ತಯಾರಾಗಿದೆ.
ಬೀಟ್ರೂಟ್ ಆಲೂಗಡ್ಡೆ ಪ್ಯೂರಿ| Beetroot Potato Puree in Kannada
ಸೂಚನೆಗಳು :
- ಘನ ಆಹಾರವನ್ನು ಪರಿಚಯಿಸುವಾಗ ಮಕ್ಕಳ ತಜ್ಞರ ಸಲಹೆ ತೆಗೆದುಕೊಳ್ಳುವುದು ಸೂಕ್ತ.
- ಪ್ಯೂರಿಗೆ ಚಕ್ಕೆ, ಏಲಕ್ಕಿ ಅಥವಾ ಜೀರಿಗೆ ಹಾಕಿ ವಿಭಿನ್ನ ಪರಿಮಳ ಮತ್ತು ರುಚಿ ನೀಡಬಹುದು.
- ಪ್ಯೂರಿ ಗಟ್ಟಿಯಾಗಿರಬೇಕು, ನೀರಾಗಿರಬಾರದು.
ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.