Spread the love
 • 12
  Shares

Spread the love
 • 12
  Shares

ಶಿಶುಗಳಿಗೆ ಬಾರ್ಲಿ ಆಹಾರಗಳು | Barley Recipes for babies, toddlers & kids in Kannada

Barley recipes for babies, toddlers, kids can i give barley baby

ಶಿಶುಗಳಿಗೆ ಅಕ್ಕಿ ಅಥವಾ ಗೋಧಿಯನ್ನು ಮಾತ್ರ ಪರಿಚರಿಯಿಸುವುದಕ್ಕಿಂತ ವಿವಿಧ ಆರೋಗ್ಯಕರ ಧಾನ್ಯಗಳನ್ನು ಪರಿಚಯಿಸುವುದು ಒಳ್ಳೆಯದು. ಶಿಶುಗಳಿಗೆ ಬಾರ್ಲಿ ಆರೋಗ್ಯಕರ ಮತ್ತು ಪೌಷ್ಟಿಕ ಧಾನ್ಯಗಳಲ್ಲಿ ಒಂದು. ಬಾರ್ಲಿ ಬಹುಮುಖ ಧಾನ್ಯವಾಗಿರುವುದರಿಂದ  ಸರಿ ಅಥವಾ ಗಂಜಿ, ಖಿಚಡಿ, ಸೂಪ್ ಮತ್ತು ಸಲಾಡ್ ಗಳನ್ನು ತಯಾರಿಸಲು ಬಳಸಬಹುದು. ಶಿಶುಗಳಿಗೆ ಬಾರ್ಲಿಯ ಮೃದು ಹಾಗು ಘಾಢವಾದ ಸ್ಥಿರತೆಯುಳ್ಳ ಉತ್ತಮ ಆಹಾರವಾಗುತ್ತದೆ. ಬಾರ್ಲಿಯನ್ನು ಹಿಂದಿ ಭಾಷೆಯಲ್ಲಿ ಜೌ ಎಂದು ಕರೆಯಲಾಗುತ್ತದೆ. ಇದರಲ್ಲಿ ಅನೇಕೆ ಆರೋಗ್ಯಕರವಾದ  ಪ್ರಯೋಜನಗಳಿವೆ. ಬಾರ್ಲಿಯಿಂದ ಬ್ರೆಡ್ ಕೂಡ ತಯಾರಿಸುತ್ತಾರೆ.

ಬಾರ್ಲಿಯನ್ನು ಮಕ್ಕಳಿಗೆ ಯಾವಾಗ ಪರಿಚಯಿಸಬಹುದು?

ಬಾರ್ಲಿ ಧಾನ್ಯ ಯಾವುದೇ ಅಲರ್ಜಿಯನ್ನು ಉಂಟುಮಾಡುವುದಿಲ್ಲ.  6 ತಿಂಗಳು ನಂತರ ಹಣ್ಣುಗಳು ಮತ್ತು ತರಕಾರಿಗಳಂತಹ ಇತರ ಘನ ಆಹಾರ ಪದಾರ್ಥಗಳನ್ನು ಪರಿಚಯಿಸಿದ ನಂತರ ಬಾರ್ಲಿ ಪರಿಚಯಿಸಬಹುದು. ಬಾರ್ಲಿಯ ಮೃದು ಮತ್ತು ಘಾಢವಾದ ವಿನ್ಯಾಸವಿರುವುದರಿಂದ ಶಿಶು ಆಹಾರಕ್ಕೆ ಸೂಕ್ತವಾದ ಧಾನ್ಯ. ಮೊದಲು ಬಾರ್ಲಿಯನ್ನು ಏಕದಳವಾಗಿ ಪ್ರಾರಂಭಿಸಬಹುದು ಮತ್ತು ಕೆಳಗೆ ತಿಳಿಸಿರುವ ಹಾಗೆ ಬಾರ್ಲಿ ಮತ್ತು ಇತರ ಪಾಕವಿಧಾನಗಳನ್ನು ಮಾಡಿ ನೀಡಬಹುದು. ಗೋಧಿಗೆ ಹೋಲಿಸಿದರೆ ಬಾರ್ಲಿಯಲ್ಲಿ ತುಂಬಾ ಕಡಿಮೆ ಗ್ಲುಟೆನ್ (ಅಂಟು) ಇರುತ್ತದೆ.  

ಬಾರ್ಲಿಯನ್ನು ಹೇಗೆ ಆಯ್ಕೆ ಮಾಡಬೇಕು ?

ಸಿಪ್ಪೆ ಇರುವ ಬಾರ್ಲಿಗಿಂತ ಪರ್ಲ್ ಬಾರ್ಲಿ ಅಥವಾ ಸಿಪ್ಪೆ ತೆಗೆದ ಬಾರ್ಲಿಯನ್ನು ಶಿಶುಗಳಿಗೆ ಬಳಸುವುದು ಸೂಕ್ತ. ಪರ್ಲ್ ಬಾರ್ಲಿ ಗುಂಡನೆ ಆಕಾರವಿರುತ್ತದೆ  ಬೇಯಿಸುವುದು ಸುಲಭ ಮತ್ತು ತ್ವರಿತವಾಗಿ ತಯಾರಿಸಬಹುದು. ಶಿಶುಗಳಿಗೆ ಸಾವಯವ ಬಾರ್ಲಿಯನ್ನು ಖರೀದಿಸುವುದು ಉತ್ತಮ. ಹಿಂದಿ ಭಾಷೆಯಲ್ಲಿ ಬಾರ್ಲಿಯನ್ನು ಜೌ ಎಂದು ಕರೆಯುತ್ತಾರೆ.

ಆರೋಗ್ಯಕರವಾದ ಬಾರ್ಲಿಯ ಪ್ರಯೋಜನಗಳು ಮತ್ತು ಬಾರ್ಲಿಯಲ್ಲಿರುವ  ಪೌಷ್ಟಿಕಾಂಶ:

 1. ಬಾರ್ಲಿಯಲ್ಲಿ  ಫೈಬರ್ ಸಮೃದ್ಧವಾಗಿರುತ್ತದೆ. ಶಿಶುಗಳಿಗೆ ಜೀರ್ಣಿಸಿಕೊಳ್ಳುವುದು ಸುಲಭ. ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.
 2. ಬಾರ್ಲಿಯಲ್ಲಿ ಗಮನಾರ್ಹವಾದ ತಾಮ್ರದ ಅಂಶವಿರುವುದರಿಂದ ರಕ್ತದಲ್ಲಿ ಕಬ್ಬಿಣಾಂಶವನ್ನು ಹೀರಿಕೊಳ್ಳುವುದಕ್ಕೆ  ಸಹಾಯಕ.
 3. ಬಾರ್ಲಿಯಲ್ಲಿ (anti fungal) ವಿರೋಧಿ ಶಿಲೀಂಧ್ರಗಳ ಗುಣಲಕ್ಷಣಗಳು ಇವೆ. ಶಿಲೀಂಧ್ರದ ವಿರುದ್ಧ ಹೋರಾಡಲು ಜೈವಿಕ ರಾಸಾಯನಿಕಗಳಿರುತ್ತವೆ.
 4. ಬಾರ್ಲಿ ಮೂಳೆಗಳನ್ನು ಬಲಪಡಿಸುತ್ತದೆ. ಆಸ್ಟೋರೋಪೊರೋಸಿಸ್ ಅನ್ನು ತಡೆಗಟ್ಟುತ್ತದೆ. ಆರೋಗ್ಯಕರ ಮೂಳೆ ಗಳಿಗೆ ಕ್ಯಾಲ್ಸಿಯಂ ಹಾಗು ಇತರ ಪ್ರಮುಖವಾದ ರಂಜಕ ದೊರೆಯುತ್ತದೆ.
 5. ಬಾರ್ಲಿ ಅಧಿಕ ಪಿತ್ತರಸ ಆಮ್ಲದ ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ.
 6. ಬಾರ್ಲಿ ಉತ್ತಮ ಪ್ರೋಟೀನ್ ಅಂಶವನ್ನು ಹೊಂದಿರುತ್ತದೆ.

ಶಿಶುಗಳಿಗೆ ಬಾರ್ಲಿ ಆಹಾರಗಳು | Barley Recipes for babies, toddlers & kids in Kannada

Barley recipes for babies, toddlers, kids can i give barley baby

Video: ಶಿಶುಗಳಿಗೆ 4 ಬಾರ್ಲಿ ಆಹಾರಗಳು | Barley Recipes for babies, toddlers & kids in Kannada

ಶಿಶುಗಳಿಗೆ ಬಾರ್ಲಿ ಆಹಾರಗಳು

ಶಿಶುಗಳಿಗೆ ಬಾರ್ಲಿ ಆರೋಗ್ಯಕರ ಮತ್ತು ಪೌಷ್ಟಿಕ ಧಾನ್ಯಗಳಲ್ಲಿ ಒಂದು. ಬಾರ್ಲಿ ಬಹುಮುಖ ಧಾನ್ಯವಾಗಿರುವುದರಿಂದ ಸರಿ ಅಥವಾ ಗಂಜಿ, ಖಿಚಡಿ, ಸೂಪ್ ಮತ್ತು ಸಲಾಡ್ ಗಳನ್ನು ತಯಾರಿಸಲು ಬಳಸಬಹುದು.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

ವಿಧಾನ

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.