Spread the love

 ಬಾರ್ಲಿ ಸೇಬು ಸರಿ | Barley Apple Porridge in Kannada

Barley Apple Porridge for babies, kids toddlers hindi kannada jau daliya
ಬಾರ್ಲಿ ಸೇಬು ಸರಿ ಒಳ್ಳೆಯ ಪೌಷ್ಠಿಕಾಂಶ ಮತ್ತು ನಾರಿನಾಂಶದಿಂದ ಸಮೃದ್ಧವಾಗಿರುವ ಒಂದು ಪರಿಪೂರ್ಣ ಸರಿ. ಸುಲಭವಾಗಿ ಒಂದೇ ಸೀಟಿಯಲ್ಲಿ ಮಾಡಬಹುದಾದ ಶಿಶು ಆಹಾರ
. ತ್ವರಿತವಾಗಿ ಮಾಡಬಹುದಾದ ಶಿಶು ಆಹಾರ ಪಾಕವಿಧಾನ ವಿನ್ಯಾಸಗೊಳಿಸುವ ಮುಖ್ಯ ಉದ್ದೇಶವಾಗಿದೆ. ಸಮೃದ್ಧ ಫೈಬರ್ ಇರುವ ಬಾರ್ಲಿ ಮತ್ತು ಸೇಬು ಸರಿ /ಗಂಜಿ/ ಅಂಬಲಿ ಮಾಡಲು ಸೂಕ್ತವಾಗಿದೆ.  ಮಗುವಿಗೆ ರುಚಿಕರ ಹಾಗು ಆರೋಗ್ಯಕರವಾದ  ಹೊಸ ಆಹಾರ ಪರಿಚಯಿಸಲು ಒಳ್ಳೆಯ ಆಯ್ಕೆ . ಮಗುವಿನ ದೇಹದ ಉಷ್ಣತೆಯನ್ನು ನಿಯಂತ್ರಿಸುವುದಕ್ಕೆ ಮತ್ತು ತಂಪಾಗಿರಲು ಹಾಗು ಚಳಿಗಾಲದಲ್ಲಿ ಮತ್ತು ಮಳೆಗಾಲದ ಸಮಯದಲ್ಲಿ ಆರೋಗ್ಯ ಕಾಪಾಡಲು ಬಾರ್ಲಿ ಸೇಬು ಸರಿ ತುಂಬಾ ಉಪಯುಕ್ತವಾದ ಪಾಕವಿಧಾನ.

ನಮ್ಮ ಬಾರ್ಲಿ ಪಾಕವಿಧಾನಗಳ ಸಂಗ್ರಹ ಹಾಗು ವಿವಿಧ ಸರಿ ಪಾಕವಿಧಾನಗಳ ಸಂಗ್ರಹ ನೀಡಲಾಗಿದೆ. ನಿಮಗೆ ಮಾಡಲು ಅನುಕೂಲಕರವಾದ ಪಾಕವಿಧಾನವನ್ನು ಪ್ರಯತ್ನಿಸಿ ಸವಿಯಿರಿ, ಖಂಡಿತ ನಿಮಗೆ ಇಷ್ಟವಾಗುವುದು.

 Video: ಬಾರ್ಲಿ ಸೇಬು ಸರಿ | Barley Apple Porridge in Kannada

Kannada Subscribe Button TOTS AND MOMS ಬಾರ್ಲಿ ಸೇಬು ಸರಿ | Barley Apple Porridge in Kannada

ಬಾರ್ಲಿ ಸೇಬು ಸರಿ

ಬಾರ್ಲಿ ಸರಿ, ಶಿಶುಗಳಿಗೆ ಬಾರ್ಲಿ ಪಾಕವಿಧಾನಗಳು, ಶಿಶು ಆಹಾರ ಸೇಬು ಬಳಸಿ ಮಾಡಬಹುದಾದ ಪಾಕವಿಧಾನಗಳು , ಬಾರ್ಲಿ, ಸೇಬು, ಶಿಶುಗಳಿಗೆ ಸರಿ ವಿವಿಧ ಪಾಕವಿಧಾನಗಳು, 6 ತಿಂಗಳು ಮಕ್ಕಳ ಆಹಾರ.

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಉಪಹಾರ, ರಾತ್ರಿ ಊಟ
ತಿನಿಸು:ಭಾರತೀಯ

ಸಾಮಗ್ರಿಗಳು

  1. ಬಾರ್ಲಿ  - 1/4 ಕಪ್ ನೆನೆಸಿರುವ
  2. ಸೇಬು - 1/2 ಕಪ್
  3. ಚಕ್ಕೆ ಪುಡಿ – ಒಂದು ಚಿಟಕೆ

ವಿಧಾನ

  1. ಚಕ್ಕೆ ಪುಡಿ ಬದಲು ಏಲಕ್ಕಿ ಪುಡಿ ಉಪಯೋಗಿಸಬಹುದು ಅಥವಾ ಜೀರಗೆ, ಕೇಸರಿ ಎಸಳು ಕೂಡ ಹಾಕಬಹುದು. ಒಳ್ಳೆ ಪರಿಮಳ ಮತ್ತು ರುಚಿ ನೀಡುತ್ತದೆ.
  2. ಒಣ ಹಣ್ಣುಗಳ ಪುಡಿ, ಒಣ ಖರ್ಜೂರದ ಪುಡಿ ಕೂಡ ಹಾಕಬಹುದು ಇದರಿಂದ ಪೌಷ್ಟಿಕಾಂಶ ಹೆಚ್ಚುವುದು. ನೈಸರ್ಗಿಕ ಸಿಹಿ ನೀಡುವುದು.
  3. ಸೇಬಿನ ಬದಲು ಮಗುವಿಗೆ ಇಷ್ಟವಾಗುವ ಯಾವುದಾದರು ಹೊಂದುವ ಹಣ್ಣನ್ನು ಉಪಯೋಗಿಸಬಹುದು. ಬೇಯಿಸುವ ಸಮಯದ ಬಗ್ಗೆ ಗಮನವಿರಲಿ.
  4. ಹೊಸ ಆಹಾರವನ್ನು ಪರಿಚಯಿಸುವ ಮೊದಲು ಮಕ್ಕಳ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.
  5. ಮನೆಯಲ್ಲಿ ಯಾರಿಗಾದರು ಗ್ಲುಟೆನ ಅಲರ್ಜಿ ಇದ್ದರೆ ಶಿಶುಗಳಿಗೆ ಬಾರ್ಲಿ ಪರಿಚಯಿಸುವಾಗ ಜಾಗ್ರತೆವಹಿಸಬೇಕು.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಬಾರ್ಲಿ ಸೇಬು ಸರಿ | Barley Apple Porridge in Kannada

Barley Apple Porridge for babies, kids toddlers hindi kannada jau daliya

 

ಬಾರ್ಲಿ ಸೇಬು ಸರಿ ಮಾಡಲು ಬೇಕಾಗುವ ಪದಾರ್ಥಗಳು :

  1. ಬಾರ್ಲಿ  – 1/4 ಕಪ್ ನೆನೆಸಿರುವ
  2. ಸೇಬು – 1/2 ಕಪ್
  3. ಚಕ್ಕೆ ಪುಡಿ ಒಂದು ಚಿಟಕೆ.

ಬಾರ್ಲಿ ಸೇಬು ಸರಿ  ಮಾಡುವ ವಿಧಾನ :

1.ಒಂದು ಕುಕ್ಕರ್ ಪ್ಯಾನ್ ಗೆ 2 tsp ಎಣ್ಣೆ ಹಾಕಿ ಬಿಸಿಯಾದ ನಂತರ ನೆನೆಸಿರುವ 1/4 ಕಪ್ ಬಾರ್ಲಿ ಹಾಕಿ ಹುರಿಯಿರಿ,  ನಂತರ ಹೆಚ್ಚಿರುವ ಸೇಬನ್ನು ಹಾಕಿ.

Barley Apple Porridge for babies, kids toddlers hindi kannada jau daliya2.ತದನಂತರ 2 ಕಪ್ ನೀರನ್ನು ಮತ್ತು ಚಿಟಕೆ ಚಕ್ಕೆ ಪುಡಿ ಹಾಕಿ ಕುಕ್ಕರ್ ನಲ್ಲಿ ಒಂದು ಸೀಟಿ ಬರುವ ತನಕ ಬೇಯಿಸಿ.

Barley Apple Porridge for babies, kids toddlers hindi kannada jau daliya

3.ತಣ್ಣಗಾದ ಮೇಲೆ ಹ್ಯಾಂಡ್ ಬ್ಲೆಂಡರ್ ಅಥವಾ ಮಿಕ್ಸರ್ ಜಾರ್ ನಲ್ಲಿ ಹಾಕಿ ನಯವಾಗಿ ರುಬ್ಬಿ ಕೊಳ್ಳಿ. ಸರಿ ತಯಾರಾಗಿದೆ.

 

ಬಾರ್ಲಿ ಸೇಬು ಸರಿ | Barley Apple Porridge in Kannada

Barley Apple Porridge for babies, kids toddlers hindi kannada jau daliya

ಸೂಚನೆ : Note

  1. ಚಕ್ಕೆ ಪುಡಿ ಬದಲು ಏಲಕ್ಕಿ ಪುಡಿ ಉಪಯೋಗಿಸಬಹುದು ಅಥವಾ ಜೀರಗೆ, ಕೇಸರಿ ಎಸಳು ಕೂಡ ಹಾಕಬಹುದು. ಒಳ್ಳೆ ಪರಿಮಳ ಮತ್ತು ರುಚಿ ನೀಡುತ್ತದೆ.
  2. ಒಣ ಹಣ್ಣುಗಳ ಪುಡಿ, ಒಣ ಖರ್ಜೂರದ ಪುಡಿ ಕೂಡ ಹಾಕಬಹುದು ಇದರಿಂದ ಪೌಷ್ಟಿಕಾಂಶ ಹೆಚ್ಚುವುದು. ನೈಸರ್ಗಿಕ ಸಿಹಿ ನೀಡುವುದು.
  3. ಸೇಬಿನ ಬದಲು ಮಗುವಿಗೆ ಇಷ್ಟವಾಗುವ ಯಾವುದಾದರು ಹೊಂದುವ ಹಣ್ಣನ್ನು ಉಪಯೋಗಿಸಬಹುದು. ಬೇಯಿಸುವ ಸಮಯದ ಬಗ್ಗೆ ಗಮನವಿರಲಿ.
  4. ಹೊಸ ಆಹಾರವನ್ನು ಪರಿಚಯಿಸುವ ಮೊದಲು ಮಕ್ಕಳ ತಜ್ಞರ ಸಲಹೆ ಪಡೆಯುವುದು ಒಳ್ಳೆಯದು.
  5. ಮನೆಯಲ್ಲಿ ಯಾರಿಗಾದರು ಗ್ಲುಟೆನ ಅಲರ್ಜಿ ಇದ್ದರೆ ಶಿಶುಗಳಿಗೆ ಬಾರ್ಲಿ ಪರಿಚಯಿಸುವಾಗ ಜಾಗ್ರತೆವಹಿಸಬೇಕು.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love