ಸೇಬು ಮತ್ತು ಅಕ್ಕಿ ಸರಿ
Read this article in
ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ರುಚಿಕರ, ಆರೋಗ್ಯಕರ ಪೌಷ್ಟಿಕ ಸೇಬು ಮತ್ತು ಅಕ್ಕಿ ಸರಿ
ಶಿಶುಗಳಿಗೆ 6 ತಿಂಗಳು ಎದೆಹಾಲು ಮಾತ್ರ ಉಣಿಸಿದ ನಂತರ ಡಾಕ್ಟರ್ ಮೇಲು ಆಹಾರ ಶುರುಮಾಡಲು ಸೂಚಿಸುತ್ತಾರೆ. ಹಣ್ಣು ಮತ್ತು ತರಕಾರಿಗಳ ರಸದಿಂದ ಶುರು ಮಾಡಿ ನಂತರ ಒಂದೊಂದೇ ಘನ ಆಹಾರ ಕೊಡಬಹುದು. ಮೊದಲು ಅಕ್ಕಿ ಸರಿ, ರಾಗಿ ಸರಿ ಕೊಟ್ಟರೆ ಒಳ್ಳೆಯದು.
ಸೇಬು ಮತ್ತು ಅಕ್ಕಿ ಸರಿ ಅಕ್ಕಿ ಅಂಬಲಿ ಮಗುವಿಗೆ ಒಂದು ರುಚಿಕರವಾದ ಸತ್ವಭರಿತವಾದ ಆಹಾರ . ಸೇಬು ಅಕ್ಕಿ ಗಂಜಿಯನ್ನು ಮಾಡುವುದು ಬಹಳ ಸುಲಭ ಮತ್ತು ಪೋಷಣೆ ನೀಡುವುದು. ಸೇಬು ಅಕ್ಕಿ ಸರಿ ಗಂಜಿ ಕೆಮ್ಮು ಮತ್ತು ಶೀತ ಬಂದಾಗ ಸಹ ಜೀರ್ಣಿಸಿಕೊಳ್ಳಲು ಸುಲಭವಾಗಿದ್ದು, ಹೊಟ್ಟೆಯ ಮೇಲೆ ಒತ್ತಡ ವಿರುವುದ್ದಿಲ್ಲ ಮತ್ತು ರೋಗ ನಿರೋಧಕ ಶಕ್ತಿಯನ್ನು ಕೂಡಾ ನೀಡುತ್ತದೆ.
ಸೇಬು ಅಕ್ಕಿ ಅಂಬಲಿ ಮಗುವಿಗೆ ಅತ್ಯುತ್ತಮ ಮೊದಲ ಘನ ಆಹಾರವಾಗಿದೆ ಮತ್ತು ಉಪಹಾರ ಅಥವಾ ಭೋಜನವಾಗಿ ನೀಡಬಹುದು. ಎರಡರ ಸಂಯೋಜನೆಯು ಮಗುವಿನ ಆಹಾರವನ್ನು ಹೆಚ್ಚು ಆರೋಗ್ಯಕರ, ಪೌಷ್ಟಿಕ ಮತ್ತು ರುಚಿಕರವಾಗಿಸುತ್ತದೆ. 6 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು
ಮಕ್ಕಳಿಗೆ ಸೇಬಿನಿಂದ ಆಗುವ ಪ್ರಯೋಜನಗಳು :
- ಹೊಟ್ಟೆ ತೊಂದರೆಗಳನ್ನು ಗುಣಪಡಿಸುವುದು.
- ಜೀರ್ಣಿಸಿಕೊಳ್ಳಲು ಸುಲಭ.
- ಆಹಾರದಲ್ಲಿ ನಾರಿನಂಶ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ
- ಮಲಬದ್ಧತೆಗೆ ಪರಿಹಾರವಾಗುವುದು.
ಶಿಶುಗಳಿಗೆ ಅಕ್ಕಿಯಿಂದ ಸಿಗುವ ಲಾಭಗಳು :
- ತ್ವರಿತ ಶಕ್ತಿಯನ್ನು ನೀಡುತ್ತದೆ.
- ಜೀರ್ಣಿಸಿಕೊಳ್ಳಲು ಬಹಳ ಸುಲಭ.
- ವಿಟಮಿನ್ ಬಿ ಸಂಕೀರ್ಣ ಹೇರಳವಾಗಿರುತ್ತದೆ.
ಸೇಬು ಅಕ್ಕಿ ಸರಿ ಹೇಗೆ ಮಾಡುವುದು ? ಈ ವೀಡಿಯೊ ನೋಡಿ
Video in English – Apple Rice Baby Food
Video in Hindi – सेब & चावल का दलिया
ಸೇಬು ಅಕ್ಕಿ ಸರಿ
ಲೇಖಕಿ :ಕವಿತಾ ಪ್ರಶಾಂತ್
ಪಾಕವಿಧಾನ: ಬೆಳಗಿನ ತಿಂಡಿ, ಊಟ, ಸಂಜೆ ತಿಂಡಿ, ಭೋಜನ
ತಿನಿಸು:ಭಾರತೀಯಸಾಮಗ್ರಿಗಳು
ವಿಧಾನ
ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.
ಸೇಬು ಅಕ್ಕಿ ಸರಿ ಮಾಡುವ ವಿಧಾನ
ಸುಮಾರು 20 ನಿಮಿಷಗಳ ಕಾಲ ಅಕ್ಕಿಯನ್ನು ತೊಳೆದು ನೆನೆಸಿಡಿ.
ಪ್ರೆಷರ್ ಕುಕ್ಕರ್ನಲ್ಲಿ ತುಪ್ಪ ಬಿಸಿ ಮಾಡಿ ನಂತರ ನೆನೆಸಿದ ಅಕ್ಕಿ ಹಾಕಿ
ತುರಿದ ಆಪಲ್ ಅಥವಾ ಸೇಬನ್ನು ಹಾಕಿ ಚೆನ್ನಾಗಿ ಬಾಡಿಸಿ.
ಒಂದು ನಿಮಿಷ ಅದನ್ನು ಹುರಿಯಿರಿ ಇದಕ್ಕೆ ಬೇಕಾಗುವಷ್ಟು ನೀರು ಸೇರಿಸಿ .
ಪ್ರೆಷರ್ ಕುಕ್ಕರ್ನಲ್ಲಿ 3 ಕೂಗು ಬರುವ ತನಕ ಬೇಯಿಸಿ.
ಕುಕ್ಕರ್ ತಣ್ಣಗಾದ ಮೇಲೆ ಮುಚ್ಚುಳ ತೆಗೆದು ನೋಡಿದರೆ ಸೇಬು ಮತ್ತು ಅಕ್ಕಿ ಬೆಂದಿರುತ್ತದೆ.
೧ ವರ್ಷ ಮೇಲ್ಪಟ್ಟ ಮಕ್ಕಳಿಗೆ ಹಾಗೆಯೇ ಬಡಿಸಿ.
ಶಿಶುಗಳಿಗೆ ಬೇಕಾದರೆ ಪ್ಯೂರೀಯಂತೆ ರುಬ್ಬಿ ಕೊಡಿ ಅಥವಾ ಒಂದು ಚಮಚದ ಸಹಾಯದಿಂದ ಮೆತ್ತಗೆ ಮಾಡಿ ಕೊಡಬಹುದು.
ನಮ್ಮ ಸೇಬು ಅಕ್ಕಿ ಸರಿ ಸವಿಯಲು ಸಿದ್ಧ.
ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ನಲ್ಲಿ ಭೇಟಿ ಮಾಡಿ.
ನಮ್ಮ ಪ್ರತಿ video ಮೊದಲಿಗೆ ನೋಡಲು ನಮ್ಮ YouTube Channel Subscribe ಮಾಡಿ.
Hi mam
For apple rice recipe. Instead of using rice soaking and cooking everytime can I use the previously made powdered form of the rice+moong dal (i am using red rice, I soaked for an hr and dry roasted it along with moong dal then I grinded it. I use that as rice cereal) Can I use tat powder and apple to make apple rice?