ಅಮರಾಂತ್ ಸರಿ | Amaranth Porridge for Babies in Kannada

Read this article in

ಜುಲಾಯಿ 9th, 2018 / Leave a Comment
Spread the love
 • 6
  Shares

ಅಮರಾಂತ್ ಅಥವಾ ರಾಜಗಿರ  ಚಿರಪರಿಚಿತವಾದ ಧಾನ್ಯವಲ್ಲ ಆದರೆ ಆರೋಗ್ಯಕರವಾದ ಧಾನ್ಯ. ಅಮರಾಂತ್ ಲಭ್ಯವಿರುವ ಪ್ರೋಟೀನ್ ಪ್ರಾಣಿ ಆಧಾರಿತ ಪ್ರೋಟೀನ್ ಗೆ ಸಮಾನವಾಗಿರುತ್ತದೆ. ಸುಲಭವಾಗಿ ಜೀರ್ಣವಾಗುವುದು ಎಂದು ಸಂಶೋಧನೆ ಹೇಳುತ್ತದೆ. ಮೂಳೆಗಳನ್ನು ಬಲಪಡಿಸಲು ಮತ್ತು ದೃಷ್ಟಿ ಸುಧಾರಿಸಲು ಉತ್ತಮವಾದ ಅಂಟುರಹಿತವಾದ (gluten free) ಗುಣಮಟ್ಟದ ಧಾನ್ಯ. ಅಮರಾಂತ್  ಸರಿ ಶಿಶುಗಳಿಗೆ ಪರಿಚಯಿಸಲು ಅತ್ಯುತ್ತಮ ಆಹಾರ.

ಅಮರಾಂತ್ ಸರಿ | Amaranth Porridge for Babies in Kannada

Amaranth Porridge for Babies & Toddlers rajgira recipe in kannada hindi

ಅಮರಾಂತ್ ಸರಿಯನ್ನು 8 ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು. ಹಾಲು ಅಥವಾ ನೀರನ್ನು ಉಪಯೋಗಿಸಿ ತಯಾರಿಸಬಹುದು. ಈ ಪಾಕವಿಧಾನದಲ್ಲಿ ಅಮರಂತ್ ಹಿಟ್ಟನ್ನು ಬಳಸಲಾಗಿದೆ. ಅಮರಾಂತ್ ಧಾನ್ಯಗಳ ರೂಪದಲ್ಲಿ ಸಿಗುವುದು. ಗಂಜಿ/ಸರಿ  ತಯಾರಿಸಲು ಹಿಟ್ಟು ಅಥವಾ ಧಾನ್ಯವನ್ನು ಬಳಸಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ರೂಪಗಳ ಅಮರಾಂತ್ ಅಥವಾ ರಾಜಗಿರ ಉಪಯೋಗಿಸಿ ತಯಾರಿಸಬಹುದಾದ ಪಾಕವಿಧಾನಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ.

ಶಿಶುಗಳಿಗೆ ಕೆಳಗಿನ ಪಾಕವಿಧಾನ ಸಂಗ್ರಹಣೆಗಳನ್ನು ಪ್ರಯತ್ನಿಸಲು ಶಿಫಾರಸು ಮಾಡುತ್ತೇವೆ:

Video: ಅಮರಾಂತ್ ಸರಿ | Amaranth Porridge for Babies in Kannada

Kannada Subscribe Button TOTS AND MOMS

ಅಮರಾಂತ್ ಸರಿ | Amaranth Porridge for Babies in Kannada

ಅಮರಾಂತ್ ಸರಿ

ಪ್ರೋಟೀನ್ ಯುಕ್ತ ರಾಜಗಿರ ಅಥವಾ ಅಮರಂತ್ ಧನ್ಯದಿಂದ ತಯಾರಿಸಲ್ಪಟ್ಟ ಅಮರಾಂತ್ ಸರಿ ಶಿಶುಗಳ ಬೆಳವಣಿಗೆಗೆ ಅತ್ಯಂತ ಲಾಭದಾಯಕ

ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:ಭಾರತೀಯ

ಸಾಮಗ್ರಿಗಳು

 1. ಅಮರಾಂತ್ - 3 tbsp
 2. ತುಪ್ಪ - 1 tsp    
 3. ಬೆಲ್ಲದ ಸಿರಪ್ ಅಥವಾ ಖರ್ಜೂರದ ಸಿರಪ್ - 2 tsp
 4. ಡ್ರೈ ಫ್ರುಟ್ಸ್ ಪೌಡರ್ - 1 tsp    
 5. ಬಿಸಿ ನೀರು ಬೇಕಾಗುವಷ್ಟು

ವಿಧಾನ

 1. ಒಂದು ಪ್ಯಾನ್ ಅಥವಾ ಬಾಣಲೆಯಲ್ಲಿ  ಅಮರಾಂತ್ ಹಿಟ್ಟನ್ನು ಹಾಕಿ, ತುಪ್ಪ ಹಾಕಿ 2-3 ನಿಮಿಷಗಳ ಕಾಲ ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ.
 2. ಹುರಿದ ನಂತರ ಬಿಸಿ ನೀರನ್ನು ಹಾಕಿ ಚೆನ್ನಾಗಿ ಗಂಟಿಲ್ಲದೆ ಮಿಶ್ರಣ ಮಾಡಿ, ಚೆನ್ನಾಗಿ ಕೆದಕಬೇಕು.
 3. ಸಿಹಿ ಇಷ್ಟಪಡುವ ಶಿಶುಗಳಿಗೆ ಇದಕ್ಕೆ ಖರ್ಜೂರ ಅಥವಾ ಬೆಲ್ಲದ ಸಿರಪ್ ಮತ್ತು ಒಣ ಹಣ್ಣುಗಳ ಪುಡಿ ಹಾಕಿ ಸರಿಯ ಪೌಷ್ಠಿಕಾಂಶವನ್ನು ಹೆಚ್ಚಿಸಬಹುದು. ಖಾರ ಇಷ್ಟಪಡುವ ಮಕ್ಕಳಿಗೆ ಒಂದು ಚಿಟಕೆ ಜೀರಿಗೆ ಮತ್ತು ಮೆಣಸಿನ ಪುಡಿ ಹಾಕಿ ಮಾಡಬಹುದು.
 4. ಚೆನ್ನಾಗಿ ಮಿಶ್ರಣ ಮಾಡಿದ ನಂತರ 2 ನಿಮಿಷಗಳ ಕಾಲ ಬೇಯಿಸಿ. ಅಮರಾಂತ್ ಸರಿ ತಯಾರಾಗಿದೆ.
 5. ಅಮರಾಂತ್ ಸರಿ ಸಿದ್ಧವಾಗಿದೆ.

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ

ಅಮರಾಂತ್ ಸರಿ | Amaranth Porridge for Babies in Kannada
Amaranth Porridge for Babies & Toddlers rajgira recipe in kannada hindi

ಅಮರಾಂತ್ ಸರಿ ಮಾಡಲು ಬೇಕಾಗುವ ಪದಾರ್ಥಗಳು :

 1. ಅಮರಾಂತ್ – 3 tbsp
 2. ತುಪ್ಪ – 1 tsp    
 3. ಬೆಲ್ಲದ ಸಿರಪ್ or ಖರ್ಜೂರದ ಸಿರಪ್ – 2 tsp
 4. ಡ್ರೈ ಫ್ರುಟ್ಸ್ ಪೌಡರ್ – 1 tsp    
 5. ಬಿಸಿ ನೀರು ಬೇಕಾಗುವಷ್ಟು

ಅಮರಾಂತ್ ಸರಿ ಮಾಡುವ ವಿಧಾನ  

1. ಒಂದು ಪ್ಯಾನ್ ಅಥವಾ ಬಾಣಲೆಯಲ್ಲಿ  ಅಮರಾಂತ್ ಹಿಟ್ಟನ್ನು ಹಾಕಿ, ತುಪ್ಪ ಹಾಕಿ 2-3 ನಿಮಿಷಗಳ ಕಾಲ ಒಳ್ಳೆಯ ಪರಿಮಳ ಬರುವ ತನಕ ಹುರಿಯಿರಿ.
Amaranth Porridge for Babies & Toddlers

2. ಹುರಿದ ನಂತರ ಬಿಸಿ ನೀರನ್ನು ಹಾಕಿ ಚೆನ್ನಾಗಿ ಗಂಟಿಲ್ಲದೆ ಮಿಶ್ರಣ ಮಾಡಿ, ಚೆನ್ನಾಗಿ ಕೆದಕಬೇಕು.

Amaranth Porridge for Babies & Toddlers

3. ಸಿಹಿ ಇಷ್ಟಪಡುವ ಶಿಶುಗಳಿಗೆ ಇದಕ್ಕೆ ಖರ್ಜೂರ ಅಥವಾ ಬೆಲ್ಲದ ಸಿರಪ್ ಮತ್ತು ಒಣ ಹಣ್ಣುಗಳ ಪುಡಿ ಹಾಕಿ ಸರಿಯ ಪೌಷ್ಠಿಕಾಂಶವನ್ನು ಹೆಚ್ಚಿಸಬಹುದು. ಖಾರ ಇಷ್ಟಪಡುವ ಮಕ್ಕಳಿಗೆ ಒಂದು ಚಿಟಕೆ ಜೀರಿಗೆ ಮತ್ತು ಮೆಣಸಿನ ಪುಡಿ ಹಾಕಿ ಮಾಡಬಹುದು.

Amaranth Porridge for Babies & Toddlers

4. ಚೆನ್ನಾಗಿ ಮಿಶ್ರಣ ಮಾಡಿದ ನಂತರ 2 ನಿಮಿಷಗಳ ಕಾಲ ಬೇಯಿಸಿ. ಅಮರಾಂತ್ ಸರಿ ತಯಾರಾಗಿದೆ.

Amaranth Porridge for Babies & Toddlers

5. ಅಮರಾಂತ್ ಸರಿ ಸಿದ್ಧವಾಗಿದೆ.

ಅಮರಾಂತ್ ಸರಿ | Amaranth Porridge for Babies in Kannada

Amaranth Porridge for Babies & Toddlers rajgira recipe in kannada hindi

ಸೂಚನೆಗಳು  

 1. ಹಾಲು ಅಥವಾ ನೀರನ್ನು ಬಳಸಿ ಸರಿ ಬೇಯಿಸಬಹುದು.
 2. ಸಿಹಿ ಇಷ್ಟ ಪಡದ ಮಕ್ಕಳಿಗೆ ಒಂದು ಚಿಟಕೆ ಜೀರಿಗೆ ಮತ್ತು ಕಾಳು ಮೆಣಸು ಪುಡಿ ಹಾಕಿ ತಯಾರಿಸಬಹುದು.
 3. ಸರಿ ಘಾಡವಾಗಿರಬೇಕು, ತುಂಬಾ ನೀರಾಗಿರಬಾರದು.
 4. ಶಿಶುಗಳಿಗೆ ಹೊಸ ಆಹಾರ ಪರಿಚಯಿಸುವಾಗ ಶಿಶು ವೈದ್ಯರ ಸಲಹೆ ಪಡೆಯಲು ಮರೆಯಬೇಡಿ.

ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.

Spread the love
 • 6
  Shares

ಈ ಲೇಖನವನ್ನು ಕೆಳಗಿನ ವರ್ಗಗಳಲ್ಲಿ ಪೋಸ್ಟ್ ಮಾಡಲಾಗಿದೆ. ಇದೇ ಪೋಸ್ಟ್ಗಳನ್ನು ಓದಲು ವಿಭಾಗಗಳನ್ನು ಅನುಸರಿಸಿ

Leave a Reply

Rate this recipe: *

Your email address will not be published. Required fields are marked *

Share This