Spread the love
 • 2
  Shares

ನಿಮ್ಮ ಪುಟ್ಟ ಮಗು ದಿನದಿಂದ ದಿನ ದೊಡ್ಡವರಾಗುವುದನ್ನು ಮತ್ತು ಬೆಳೆಯುವದನ್ನು ನೋಡಲು ಪುಳಕಿತಗೊಳ್ಳುವಿರಿ. ಅವರು ಹೊಸ ಹೊಸ ವಿಷಯಗಳನ್ನು ಪ್ರಯತ್ನಿಸುತ್ತಿರುವಾಗ ಮತ್ತು ಪರಿಶೋಧಿಸುವುದನ್ನು ನೋಡಲು ಖುಷಿಯಾಗುವುದಲ್ಲವೇ ? ಪ್ರತಿಯೊಂದು ಭಾಗವನ್ನು ನೀವು ಪ್ರತ್ಯಕ್ಷ ಅನುಭವಿಸುವುದು ಸಂತೋಷವನ್ನು  ನೀಡುವುದು. ಮಗು ಮೊದಲ ವರ್ಷದ  ಹುಟ್ಟುಹಬ್ಬದ ಮುಂಚೆ ಅನೇಕ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತದೆ. ನಿಮ್ಮ ಮಗುವು ಮೊದಲ ಹೆಜ್ಜೆ ತೆಗೆದುಕೊಳ್ಳುವಾಗ ಅಥವಾ ಮೊದಲ ಪದವನ್ನು ಹೇಳಿದಾಗ ನಿಮಗೆ ಆಶ್ಚರ್ಯವಾಗುವುದು. ನಿಮ್ಮ ಮಗು ನಡೆಯಲು ಶುರು ಮಾಡಿದರೆ ಅವರನ್ನು ಹಿಡಿಯುವುದೇ ಕಷ್ಟ ! ಇಲ್ಲಿ ನಾವು ಶಿಶುಗಳಿಗೆ ಕೆಲವು ಚಟುವಟಿಕೆಗಳನ್ನು ನೀಡಿದ್ದೇವೆ ಇವು ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ತುಂಬಾ ಒಳ್ಳೆಯದು.

6 ರಿಂದ 12 ತಿಂಗಳುಗಳ ಶಿಶುಗಳಿಗೆ 10 ಚಟುವಟಿಕೆಗಳು |10 Activities for Babies in Kannada

10 Activities for Babies healthy development kannada hindi

ಮಕ್ಕಳ ಬೆಳವಣಿಗೆಗೆ ಹಾಗು ಅಭಿವೃದ್ಧಿಗೆ  ಪೋಷಕರ ಪಾತ್ರವು ಬಹಳ ಮುಖ್ಯ. ನಿಮ್ಮ ಪ್ರೀತಿ, ಗಮನ, ಸಮಯ ಮತ್ತು ಸ್ಪರ್ಶ ನಿಮ್ಮ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಶ್ಯಕವಾಗಿದೆ. ಈ ಲೇಖನದಲ್ಲಿ 6 ರಿಂದ 12 ತಿಂಗಳುಗಳ ಶಿಶುಗಳಿಗೆ ಕೆಲವು ಮೋಜಿನ ಮತ್ತು ಸರಳ ಚಟುವಟಿಕೆಗಳನ್ನು ನಿಮಗೆ ತಿಳಿಸುತ್ತೇವೆ .

6 ರಿಂದ 12 ತಿಂಗಳುಗಳ ಶಿಶುಗಳಿಗೆ 10 ಚಟುವಟಿಕೆಗಳು |10 Activities for Babies in Kannada

10 Activities for Babies healthy development kannada hindi

1. ಕಣ್ಣಾ ಮುಚ್ಚಾಲೆ: Peek a boo

10 Activities for Babies healthy development kannada hindi

ನಿಮ್ಮ ಪುಟ್ಟ ಮಗುವಿನ ಜೊತೆ ಆಡಬಹುದಾದ ಎಲ್ಲಾ ಆಟಗಳಲ್ಲಿ ಇದು ಸರಳವಾಗಿದೆ. ಮಗುವಿನ ಬೆಳವಣಿಗೆಯಾದಾಗ ಕ್ರಮೇಣ ಇದನ್ನು ನಿರ್ಮಿಸಬಹುದು. ವಸ್ತು ಶಾಶ್ವತತೆಯನ್ನು ಅರ್ಥಮಾಡಿಕೊಳ್ಳಲು ಶಿಶುವಿನ ಅಸಾಮರ್ಥ್ಯವನ್ನು ಈ ಆಟ ಪ್ರದರ್ಶಿಸುವುದು. ಹಾಗಾಗಿ ಈ ಚಟುವಟಿಕೆಯಿಂದ ಅದನ್ನು ಅಭಿವೃದ್ಧಿ ಪಡಿಸಬಹುದೆಂದು ಮನೋವಿಜ್ಞಾನಿಗಳ ಅಭಿಪ್ರಾಯ. ಶಿಶುಗಳಿಗೆ ಅರಿವಿನ ಬೆಳವಣಿಗೆಗೆ ಇದು ಪ್ರಮುಖ ಹಂತವಾಗಿದೆ.

ಆಟವಾಡಲು ಬೇಕಾಗುವ ವಸ್ತುಗಳು – ದೊಡ್ಡ ಕರವಸ್ತ್ರ (ಅಥವಾ ಕೈಗಳು)

ಆಟವನ್ನು ಹೇಗೆ ಆಡುವುದು – ನಿಮ್ಮ ಮುಖವನ್ನು ಬಟ್ಟೆಯಿಂದ ಅಥವ ಮುಖದ ಮೇಲೆ ಅಥವಾ ಕೈಯಿಂದ ನಿಮ್ಮ ಮುಖವನ್ನು ಮುಚ್ಚಿಕೊಂಡು. ಮಗುವಿಗೆ, ನೀವು ಬಚ್ಚಿಟ್ಟುಕೊಳ್ಳುತ್ತಿರುವುದು ಅದಕ್ಕೆ ನೀವು ಕಣ್ಮರೆಯಾದಂತೆ. ಅವರ ಮನಸಿನ ಆತಂಕವನ್ನು ಕಡಿಮೆ ಮಾಡಲು ಬಚ್ಚಿಟ್ಟು ಕೊಳ್ಳುವಾಗ ನಿಮ್ಮ ಮಗುವನ್ನು ಮಾತನಾದಿಸುವುದರ ಮೂಲಕ ನೀವು ಸರಾಗಗೊಳಿಸಬಹುದು. ನೀವು “ಅಮ್ಮಾ ಎಲ್ಲಿಗೆ ಹೋದಳು ? ಆಕೆ ಎಲ್ಲಿರುವಳು?” ಎಂದು ಮಾತಾಡುತ್ತ ಅವರ ಜೊತೆ ಆಟವಾಡಿ.

2. ಮನೆಯಲ್ಲಿ ಬಬಲ್ಸ್ ನೀರು ಗುಳ್ಳೆಗಳು ಮಾಡುವುದು: Homemade Bubbles

10 Activities for Babies healthy development kannada hindi

ಶಿಶುಗಳು ಈ ಚಟುವಟಿಕೆಯನ್ನು ತುಂಬಾ ಇಷ್ಟ ಪಡುತ್ತಾರೆ ಹಾಗು ಸಂತೋಷದಿಂದ ಕೂಗಿ ಆಡುವರು. ನಿಮ್ಮ ಮಗುವಿನ ದೃಶ್ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಅತ್ಯುತ್ತಮ ಮಾರ್ಗವಾಗಿದೆ. ಶಿಶುಗಳು ಈ ಸರಳ ಚಟುವಟಿಕೆಗಳನ್ನು ಹೆಚ್ಚು ಹಂಬಲಿಸುತ್ತಾರೆ .

ಬೇಕಾಗುವ ವಸ್ತುಗಳು 

1. 1 ಕಪ್ – ನೀರು,

2. 1 tsp – ಗ್ಲಿಸರಿನ್,

3. 2 tsp – ಸೋಪಿನ ಪುಡಿ. (biodegradable dish detergent).

ಇದನ್ನು ಹೇಗೆ ಮಾಡುವುದು?ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಮಿಶ್ರಣಕ್ಕೆ ಕೊಳವೆಯನ್ನು ಅದ್ದಿ ಗುಳ್ಳೆಗಳನ್ನು ಊದುವಂತೆ ಮಾಡಿ.

ಸೂಚನೆ 

 • ಕೊಳವೆ ಉದ್ದವಾಗಿರಬೇಕು, ಚಿಕ್ಕದಿದ್ದರೆ ಮಕ್ಕಳ ಗಂಟಲಿಗೆ ಸಿಕ್ಕಿಕೊಳ್ಳುವ ಸಂಭವವಿದೆ ಹಾಗಾಗಿ ಬಹಳ ಜಾಗ್ರತೆ ವಹಿಸಬೇಕು.
 • ಮಗುವಿಗೆ ಯಾವುದೇ ಹಾನಿಯಾಗದ, ವಿಷಕಾರಿಯಲ್ಲದ ಗುಳ್ಳೆ ಮಿಶ್ರಣವನ್ನು ಬಳಸಿ.
 • ಚಟುವಟಿಕೆಯನ್ನು ಆನಂದಿಸಲು ಮರೆಯದಿರಿ! ನಿಮ್ಮ ಮಗುವಿಗೆ ಆಡಲು ಮನಸ್ಸಿಲ್ಲದಿದ್ದರೆ ಬೇರೆ ಚಟುವಟಿಕೆ ನೀಡಬಹುದು.
 • ಆಟಿಕೆ ಅಥವಾ ಚಟುವಟಿಕೆಯಲ್ಲಿ ಮಗುವನ್ನು ಗಮನಿಸದೇ ಒಂಟಿಯಾಗಿರಲು ಬಿಡಬೇಡಿ.

3. ಪುಸ್ತಕಗಳನ್ನು ಓದುವುದು: Read Books Together

10 Activities for Babies healthy development kannada hindi

ನಿಮ್ಮ ಶಿಶುಗಳು ಮತ್ತು ಮಕ್ಕಳೊಂದಿಗೆ ನೀವು ಪುಸ್ತಕ ಓದುವುದು ಉತ್ತಮ ಚಟುವಟಿಕೆಗಳಲ್ಲಿ ಒಂದಾಗಿದೆ. ಈ ಚಟುವಟಿಕೆಯಿಂದ ಮಗು ಗಮನವಿಟ್ಟು ಆಲಿಸುವುದನ್ನು ಕಲಿಯುತ್ತದೆ. ನೆನಪು ಮತ್ತು ಶಬ್ದಕೋಶದ ಕೌಶಲ್ಯಗಳನ್ನು ನಿರ್ಮಿಸಲು ತುಂಬಾ ಸಹಾಯಕ. ನೀವು ವಿನ್ಯಾಸ ಪುಸ್ತಕ Textured Books ಗಳನ್ನು ಓದಬಹುದು. ವಿಭಿನ್ನ ವಿಧದ
ವಿನ್ಯಾಸಗಳನ್ನು ಅನ್ವೇಷಿಸಲು ಅವರನ್ನು ಪ್ರೋತ್ಸಾಹಿಸುವುದು ಮುಖ್ಯವಾಗಿದೆ ಮತ್ತು ವಿನ್ಯಾಸ ಪುಸ್ತಕವು ನಿಖರವಾಗಿ ಅದನ್ನು ಮಾಡಲು ನಿಮಗೆ ಸಹಾಯ ಮಾಡುತ್ತದೆ. ವಿಭಿನ್ನ ಬಣ್ಣವಿರುವ ಚಿತ್ರಗಳು ಅವರನ್ನು ಆಕರ್ಷಿಸುತ್ತದೆ.

4. ರೈಮಸ್ / ಮಕ್ಕಳ ಹಾಡು ಹಾಡಿ: Sing Rhymes

10 Activities for Babies healthy development kannada hindi

ಮಗು ಮಾತನಾಡಲು ಕಲಿಯುವ ಮೊದಲು ಶಿಶುಗಳಿಗೆ ಸಾಂಪ್ರದಾಯಿಕ ಹಾಡುವಿಕೆ ಮತ್ತು ನರ್ಸರಿ ಹಾಡು ಹಾಡುವುದು ಅವಶ್ಯಕ. ರೈಮಸ್ ಮತ್ತು ಮಕ್ಕಳ ಹಾಡುಗಳು ಮಕ್ಕಳಲ್ಲಿ ಪದಗಳನ್ನು ಬಳಸಿ ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೈಮಸ್ ಕೇಳುವ, ಮತ್ತು ಹಾಡುಗಳ ಜೊತೆಗೆ ಹಾಡುವುದಕ್ಕೆ ಮೆದುಳಿನ ಎರಡೂ ಬದಿಗಳು ಬಳಕೆಯಾಗುವುದು ಮತ್ತು ಶಿಶುಗಳ ಬೆಳವಣಿಗೆ ಅಭಿವೃದ್ಧಿಪಡಿಸುತ್ತದೆ.

5. ಶಿಶುಗಳ ಫ್ಲ್ಯಾಶ್ಕಾರ್ಡ್ಸ್ / ಕ್ಷಣಕಾರ್ಡು: Baby Flashcards

10 Activities for Babies healthy development kannada hindi


ಒಂದು ಅಂದಾಜಿನ ಪ್ರಕಾರ, ಮಗುವಿನ ಮೆದುಳಿನಲ್ಲಿ ಪ್ರತಿ ಸೆಕೆಂಡಿಗೆ 2,50,000 ನರಕೋಶದ ಸಂಪರ್ಕಗಳು ಸಂಭವಿಸುತ್ತವೆ. ಈ ಎಲ್ಲಾ ಅನುಭವಗಳು ಶಿಶುಗಳ ಮಿದುಳುಗಳನ್ನು ನಿರ್ಮಿಸುತ್ತವೆ. ಫ್ಲ್ಯಾಶ್ ಕಾರ್ಡುಗಳು ಮಗುವಿಗೆ  ಆಕರ್ಷಕವೆನಿಸುತ್ತವೆ. ದಿನನಿತ್ಯದ ಮೋಜಿನ ಆಟದಲ್ಲಿ ಕಲಿಕೆಯ ಭಾಗವನ್ನು ಅಳವಡಿಸಬೇಕು.

ಸೂಚನೆ ನಿಮ್ಮ ಮಗು ಸಂತೋಷದಿಂದ, ಶಾಂತವಾದ ಮನಸ್ಸಿನಲ್ಲಿದ್ದಾಗ ನೀವು ಪಾಠಗಳನ್ನು ನೀಡಬೇಕು.

ಮಗು ತನ್ನ ನಿದ್ರೆ ಪೂರ್ಣಗೊಳಿಸಿದೆ ಮತ್ತು ಆಹಾರ ಸರಿಯಾಗಿ ಸ್ವೀಕರಿಸಿಲ್ಲದಿದ್ದರೆ ಮಕ್ಕಳು ಚಟುವಟಿಕೆಗೆ ಸಹಕರಿಸುವುದಿಲ್ಲ .

ಮಗುವಿಗೆ ಬಲವಂತ ಮಾಡಬೇಡಿ, ಅವರಿಗೆ ಇಷ್ಟವಿಲ್ಲದಿದ್ದರೆ. ಇದನ್ನು ಮತ್ತೊಮ್ಮೆ ಪ್ರಯತ್ನಿಸಿ.

6. ಚೆಂಡು ಹಿಡಿಯುವುದು :Play Catch

10 Activities for Babies healthy development kannada hindi

ಸರಳವಾಗಿ ಚೆಂಡನ್ನು ತಳ್ಳುವುದು, ಮತ್ತು ಹಿಡಿದುಕೊಳ್ಳುವುದು. ನಿಮ್ಮ ಮಗುವಿನ ಮೋಟಾರು ಬೆಳವಣಿಗೆಯನ್ನು (Fine Motor Skills) ಹೆಚ್ಚಿಸುತ್ತದೆ ಏಕೆಂದರೆ ಅದು ಸಮನ್ವಯವನ್ನು ಉತ್ತೇಜಿಸುತ್ತದೆ ಮತ್ತು ಮೇಲಿನ-ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ. ಮತ್ತೆ ಈ ಆಟ ಶಿಶುಗಳ ಸರಳ ಚಟುವಟಿಕೆಗಳಲ್ಲಿ ಒಂದಾಗಿದೆ.

 • ಬೇಕಾಗಿರುವ ವಸ್ತುಗಳು – ಚೆಂಡುಗಳು. ವಿವಿಧ ಗಾತ್ರಗಳು, ಬಣ್ಣಗಳು ಮತ್ತು ವಿಭಿನ್ನ ವಿನ್ಯಾಸಗಳ ಚಂಡು.
 • ಹೇಗೆ ಆಡುವುದು? ನಿಮ್ಮ ಮಗುವಿಗೆ ಚೆಂಡನ್ನು ಎಸೆಯಿರಿ. ಅವನಿಗೆ ಅದನ್ನು ತಿರುಗಿಸಲು ಅಥವಾ ಎಸೆಯಲು ಪ್ರೋತ್ಸಾಹಿಸಿ, ಅವರಿಗೆ ಅಗತ್ಯವಿದ್ದರೆ  ಸಹಾಯ ಮಾಡಿ.
 • ಗಮನಿಸಿ – ಈ ವಯಸ್ಸಿನಲ್ಲಿ, ನಿಮ್ಮ ಮಗುವಿನ ಗುರಿ ನಿಖರವಾಗಿರುವುದಿಲ್ಲ. ಮಗು ಇನ್ನೂ ಕೈ ಮತ್ತು ಬೆರಳು ಚಲನೆಗಳನ್ನು  ಕಲಿಯುತ್ತಿರುತ್ತದೆ. ಆದ್ದರಿಂದ ಮೊದಲು ಚೆಂಡನ್ನು ಬರೀ ತಳ್ಳುತ್ತಾರೆ.

7. ಆವಿಷ್ಕಾರದ ಬುಟ್ಟಿ: Discovery Basket

10 Activities for Babies healthy development kannada hindi

ಆವಿಷ್ಕಾರದ ಬುಟ್ಟಿ ಎಂದರೆ ಸರಳವಾಗಿ, ಮಗುವಿಗೆ ಅನ್ವೇಷಿಸಲು ಸಾಮಾನ್ಯ ಅಪಾಯಕಾರಿಯಲ್ಲದ ವಸ್ತುಗಳನ್ನು ತುಂಬಿಸಿರುವ ಒಂದು ಬುಟ್ಟಿ. ಅದರ ಹಿಂದಿನ ಸಿದ್ಧಾಂತವು ಮಕ್ಕಳು ಸ್ವಾಭಾವಿಕವಾಗಿ ತಮ್ಮ ಸ್ವಂತ ತಿಳುವಳಿಕೆಯನ್ನು ಮತ್ತು ಜ್ಞಾನವನ್ನು ಬೆಳೆಸಲು ಅನ್ವೇಷಿಸಲು ಮತ್ತು ತನಿಖೆ ಮಾಡಲು ಉಪಯುಕ್ತ. ಇಂದ್ರಿಯಗಳ ಉತ್ತೇಜಿಸುವ ಸುರಕ್ಷಿತ ವಸ್ತುಗಳನ್ನು ಅನ್ವೇಷಿಸುವ ಮೂಲಕ, ಮಕ್ಕಳು ವಿನ್ಯಾಸ, ಸುವಾಸನೆ, ಧ್ವನಿ, ನೋಟ ಮತ್ತು ಪರಿಮಳವನ್ನು ಕುರಿತು ಮಾಹಿತಿಯನ್ನು ಸಂಗ್ರಹಿಸುತ್ತಾರೆ.

ಆವಿಷ್ಕಾರದ ಬುಟ್ಟಿ ಮಾಡುವುದು ಹೇಗೆ – ನೀವು ಕಾರ್ಡ್ಬೋರ್ಡ್ ಬಾಕ್ಸ್, ಪ್ಲಾಸ್ಟಿಕ್ ಟಬ್ ಅಥವಾ ನಿಮ್ಮ ಮನೆಯಲ್ಲಿರುವ ಯಾವುದೇ ದೊಡ್ಡ ಬುಟ್ಟಿ ಬಳಸಬಹುದು.

ನೀವು ಸೇರಿಸಬಹುದಾದ ವಸ್ತುಗಳು – ಮರದ ಚಮಚ, ಲಟ್ಟನಿಗೆ, ಸಲಾಡ್ ಸ್ಪೂನ್ ಗಳು, ಸ್ಪಾಟ್ಯೂಲಾ, ಆಲೂಗಡ್ಡೆ ಮಾಷರ್, ಸಣ್ಣ ಬಾಟಲಿಗಳು, ಗ್ಲಾಸ್, ಮೃದು ಆಟಿಕೆಗಳು ಅಥವಾ ಯಾವುದೀ ಶಿಶು ಆಟಿಕೆಗಳನ್ನು ಹಾಕಬಹುದು.

8. ಕನ್ನಡಿ ಆಟ : Mirror Play

10 Activities for Babies healthy development kannada hindi

ಮಕ್ಕಳಿಗೆ ಕನ್ನಡಿಯನ್ನು ತೋರಿಸಬಾರದು ಎನ್ನುವುದು ಒಂದು ದೊಡ್ಡ ಮೂಢನಂಬಿಕೆ. ಕನ್ನಡಿ ನೋಡುತ್ತಿರುವುದು ಮಗುವಿಗೆ ಒಂದು ಅದ್ಭುತವಾದ ಚಟುವಟಿಕೆಯಾಗಿದೆ. ಕನ್ನಡಿ ಆಟ ನಿಮ್ಮ ಮಗುವಿನ ಅರಿವು (cognitive) ಮತ್ತು ದೈಹಿಕ ಬೆಳವಣಿಗೆಗೆ ಸಹಾಯ ಮಾಡಬಹುದು.

ಹೇಗೆ ಆಟ ಆಡುವುದು:

1. ನಿಮ್ಮ ಮಗುವನ್ನು ಕನ್ನಡಿಯ ಮುಂದೆ ನಿಲ್ಲಿಸಿ ಪ್ರತಿಫಲನವನ್ನು ನೋಡಬಹುದಾಗಿದೆ.

2. ಶಿಶು ಮತ್ತು ಕನ್ನಡಿ ಸುರಕ್ಷಿತ ಅಂತರದಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ.

3. ಕನ್ನಡಿ ಗಟ್ಟಿಮುಟ್ಟಾದ ಮತ್ತು ಘನ ತಳದ್ದಾಗಿರಬೇಕು.

4. ನಿಮ್ಮ ಮೂಗು, ಕೂದಲು, ಕಣ್ಣುಗಳು ಇತ್ಯಾದಿಗಳನ್ನು ಸೂಚಿಸಲು ನಿಮ್ಮ ಮಗುವನ್ನು ಕೇಳಿ. ಈ ವ್ಯಾಯಾಮ ಮಗುವಿಗೆ ತನ್ನದೇಹದ ಭಾಗಗಳ ಹೆಸರುಗಳನ್ನು ಕಲಿಯಲು ಸಹಾಯ ಮಾಡುತ್ತದೆ.

9. ತಿನ್ನಬಹುದಾದ ಬಣ್ಣ ಮತ್ತು ಬೆರಳುಗಳ ಆಟ : Edible Finger Paint Play

10 Activities for Babies healthy development kannada hindi

ಬಣ್ಣಗಳು ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ ಹಾಗು ಸುಂದರವಾಗಿರುತ್ತದೆ. ಪುಟ್ಟ ಮಕ್ಕಳು ತಮ್ಮ ಬೆರಳಿನಿಂದ ಬಣ್ಣದ ಜೊತೆ ಆಟವಾಡಲು ಬಿಡಬೇಕು  ಮತ್ತು ನೀವು ಅವರೊಟ್ಟಿಗೆ ಈ ಆಟದಲ್ಲಿ ಪಾಲ್ಗೊಳ್ಳಿ. ಈ ಚಟುವಟಿಕೆಗೆ ಖಾದ್ಯ ಬಣ್ಣಗಳನ್ನು ಬಳಸುವುದು ಒಳ್ಳೆಯದು, ಮಗು ಆಟವಾಡುವಾಗ ತನ್ನ ಬೆರಳನ್ನು ಬಾಯಿಯಲ್ಲಿ ಹಾಕಿಕೊಳ್ಳಬಹುದು. ಈ ಚಟುವಟಿಕೆ ಕಣ್ಣು ಮತ್ತು ಬೆರಳುಗಳ ಸಂಯೋಜನೆ ಮತ್ತು ಇಂದ್ರಿಯಗಳ ನಿಯಂತ್ರಣ ಹಾಗು ಪರಿಶೋಧನೆ ಮತ್ತು ಹೊಸ ವಿನ್ಯಾಸಗಳನ್ನು ಅನ್ವೇಷಿಸುವ ಮೂಲಕ ಮಕ್ಕಳಿಗೆ ಸಹಾಯವಾಗುತ್ತದೆ.

ವಿವಿಧ ಖಾದ್ಯ ಬಣ್ಣ (edible paint) ಮಾಡುವ ವಿಧಾನ –

1. 1/2 ಕಪ್ ಹಿಟ್ಟು

2. 1 ಕಪ್ ನೀರು

3. ಉಪ್ಪು ಚಿಟಕೆ (ಬೇಕಾದರೆ )

4. ಆಹಾರ ಬಣ್ಣ / ಕ್ಯಾರೆಟ್, ಬೀಟ್ ಅಥವಾ ಪಾಲಕ್  ರಸ

ಮಾಡುವ ವಿಧಾನ :

1. ಪಾತ್ರೆಗೆ ಹಿಟ್ಟು ಮತ್ತು ನೀರನ್ನು ಹಾಕಿ.

2. ನಯವಾದ, ದಪ್ಪ ಪೇಸ್ಟ್ ಮಿಶ್ರಣ ವನ್ನು ಒಟ್ಟಿಗೆ ಹಿಟ್ಟಿನ ತರಹ ಬರುವ ತನಕ ಮಧ್ಯಮ ಉರಿಯಲ್ಲಿ ಪದಾರ್ಥಗಳನ್ನು ಬೆರೆಸಿ ಬೇಯಿಸಿ . ಮಿಶ್ರಣವು ಮಾಡುವಾಗ ಗಂಟುಗಂಟಾಗಿರುತ್ತದೆ ನಂತರ ಅದು ಒಟ್ಟಾಗಿ ಬರುತ್ತದೆ.

3. ಹಿಟ್ಟಿನ ಹಾಗೆ ಉಂಡೆಯಾಗಿ ಪಾತ್ರೆ ಅಂಚಿನಿಂದ ಹೊರಬರಲು ಪ್ರಾರಂಭಿಸಿದಾಗ ಗ್ಯಾಸ್ ಆರಿಸಿ.

4. ಉಪ್ಪು ಹಾಕಿ. ಬಣ್ಣವನ್ನು ಹಾಳಾಗದಂತೆ ತಡೆಯಲು ಉಪ್ಪು ಸಹಾಯ ಮಾಡುತ್ತದೆ.

5. ಬೇಕಾಗಿರುವ ಸ್ಥಿರತೆಯನ್ನು ತಲುಪಲು, ನಿಧಾನವಾಗಿ ಮಿಶ್ರಣಕ್ಕೆ ತಂಪಾದ ನೀರನ್ನು ಸೇರಿಸಿ. ಬಣ್ಣಕ್ಕೆ 1/4 ಕಪ್ ನೀರು ಸೇರಿಸಿ.

6. ಬಣ್ಣವನ್ನು ಬಟ್ಟಲುಗಳಾಗಿ ವಿಭಜಿಸಿ.

7. ನಿಮಗೆ ಬೇಕಾದ ಅಥವಾ ಮಗುವಿಗೆ ಇಷ್ಟವಾಗುವ ಬಣ್ಣವನ್ನು ಹಿಟ್ಟು ಮಿಶ್ರಣಕ್ಕೆ ಚೆನ್ನಾಗಿ ಕಲಸಿ.

8. ಹಿಟ್ಟನ್ನು ನಂತರ ಬಳಸಲು ಫ್ರಿಜ್ನಲ್ಲಿ ಡಬ್ಬದಲ್ಲಿ ಸಂಗ್ರಹಿಸಿಡಬಹುದು ಬೇಕಾದಾಗ ಉಪಯೋಗಿಸಬಹುದು.

10. ಡ್ರಮ್ Drum

10 Activities for Babies healthy development kannada hindi

ಮಕ್ಕಳು ಯಾವ ವಸ್ತುಗಾದರು ಅಪ್ಪಳಿಸಿ ಸದ್ದು ಮಾಡುವುದನ್ನು ಪ್ರೀತಿಸುತ್ತಾರೆ. ಡ್ರಮ್ ರಚಿಸಲು ಅವರನ್ನು ಸೇರಿಸಿಕೊಂಡು ಪ್ರೀತಿಯಿಂದ ಮಾಡದರೆ ಮಕ್ಕಳಿಗೆ ಖುಷಿಯಾಗುವುದು. ಮನೆಯ ಸಾಮಾನ್ಯ ವಸ್ತುಗಳನ್ನು ಡ್ರಮ್ ಆಗಿ ಪರಿವರ್ತಿಸಿ ಕೊಡಬಹುದು. ಬಕೆಟ್ ಅನ್ನು ತಲೆಕೆಳಗಾಗಿ ತಿರುಗಿಸಬಹುದು ಅಥವಾ ಅಡುಗೆಮನೆಯಿಂದ ಮಡಿಕೆಗಳು ಅಥವಾ ಪ್ಯಾನ್ಗಳನ್ನು ಬಳಸಬಹುದು – ಪೋರ್ಟಬಲ್ ಡ್ರಮ್ ಸಿದ್ಧವಾಗಿದೆ. ಮಗುವಿಗೆ ಸ್ಪೂನ್ ಗಳನ್ನು ಮಡಿಕೆ ಮತ್ತು ಪ್ಯಾನ್ ಗೆ ಬ್ಯಾಂಗ್ ಮಾಡಲು ನೀಡಿ. ಈ ಚಟುವಟಿಕೆಯಲ್ಲಿ ಮಕ್ಕಳು ಕೈ-ಕಣ್ಣಿನ ಹೊಂದಾಣಿಕೆಯನ್ನು ಮತ್ತು ಸಂಗೀತ ರಚನೆಗಳನ್ನು ಕಲಿಯುತ್ತಾರೆ. 

ನಿಮ್ಮ ಮಗುವಿಗೆ ವಿನೋದಿಂದ ಕಲಿಯಲು ನೀವು ತೊಡಗಿಸಿಕೊಂಡು ಶಿಶುಗಳಿಗೆ ಕೆಲವು ಸರಳವಾಗಿ ಮಾಡಬಹುದಾದ  ಚಟುವಟಿಕೆಗಳನ್ನು ಪ್ರಯತ್ನ ಮಾಡಿ.

ವೀಡಿಯೊ : 6 ರಿಂದ 12 ತಿಂಗಳುಗಳ ಶಿಶುಗಳಿಗೆ 10 ಚಟುವಟಿಕೆಗಳು |10 Activities for Babies in Kannada

ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page  & YouTube Channel ನಲ್ಲಿ ಭೇಟಿ ಮಾಡಿ.


Spread the love
 • 2
  Shares