ಸೇಬು, ಬೀಟ್ರೂಟ್ & ಕ್ಯಾರಟ್ ಪ್ಯೂರಿ | Apple Beetroot Carrot Puree recipe in Kannada
Read this article in
ಸೇಬು, ಬೀಟ್ರೂಟ್ & ಕ್ಯಾರಟ್ ಪ್ಯೂರಿ | Apple Beetroot Carrot Puree recipe in Kannada
ಸೇಬು ಬೀಟ್ರೂಟ್ & ಕ್ಯಾರೆಟ್ ಪ್ಯೂರಿ ಮಕ್ಕಳಿಗೆ ಮತ್ತು ಶಿಶುಗಳಿಗೆ ಒಳ್ಳೆಯ ಪೌಷ್ಟಿಕ ಹಾಗು ರುಚಿಕರವಾದ ನೈಸರ್ಗಿಕ ಪ್ಯೂರಿ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಸ್ವಾಭಾವಿಕವಾದ ಪರಿಮಳವನ್ನು ಮತ್ತು ರುಚಿ ಹೊಂದಿರುತ್ತದೆ. ಎರಡು ತರಕಾರಿಗಳು ಮತ್ತು ಒಂದು ಹಣ್ಣಿನ ಸಂಯೋಜನೆಯಿಂದ ಸಮತೋಲಿತ ಹಾಗು ಸಮೃದ್ಧ ಪೌಷ್ಟಿಕಾಂಶ ನೀಡುತ್ತದೆ. ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್, ಮ್ಯಾಂಗನೀಸ್, ಮೆಗ್ನೀಸಿಯಮ್, ಸತು, ತಾಮ್ರ ಇತ್ಯಾದಿ ಪೋಷಕ ತತ್ವ ಹೊಂದಿರುತ್ತದೆ.
ಶಿಶುಗಳಿಗೆ ಪ್ರತ್ಯೇಕ ಹಣ್ಣು ಮತ್ತು ತರಕಾರಿಗಳ ರಸ ಪರಿಚಯಿಸಿದಾಗ ಅವುಗಳ ಸಂಯೋಜನೆಗಳನ್ನೂ ಪರಿಚಯಿಸಬಹುದು. ಪ್ಯೂರಿ ನಂತರ ಹಿಸುಕಿದ/ಮಸೆದ ಆಹಾರ ಪರಿಚಯಿಸಲು ಬಯಸಿದರೆ. ಈ ಪಾಕವಿಧಾನದಲ್ಲಿ ಬಳಸಿರುವ ತರಕಾರಿ ಹಣ್ಣುಗಳನ್ನು ಮಸೆದು ಮಗುವಿಗೆ ಕೊಡಬಹುದು. ಸೇಬು ಬೀಟ್ರೂಟ್ & ಕ್ಯಾರೆಟ್ ಪ್ಯೂರಿ ಅಥವಾ ಎಬಿಸಿ ಪ್ಯೂರಿ 6 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಘನವಸ್ತುಗಳನ್ನು ಪರಿಚಯಿಸಿದ ನಂತರ ನೀಡಬಹುದು.
ಹೆಚ್ಚಿನ ಮಾಹಿತಿಗೆ ನಮ್ಮ ಇತರ ಉಪಯುಕ್ತ ಲೇಖನಗಳನ್ನು ಓದಿ :
- 6 ತಿಂಗಳು ಮಕ್ಕಳ ಆಹಾರ ಚಾರ್ಟ್ – 6 months Baby Food Chart
- ಶಿಶುಗಳಿಗೆ ಘನ ಆಹಾರ ಯಾವಾಗ ಪರಿಚಯಿಸಬೇಕು – Introducing Solids to Baby
- ಶಿಶುಗಳಿಗೆ 4 ಪ್ಯೂರಿ ಪಾಕವಿಧಾನಗಳು – 4 Purees for Babies
- ಮಕ್ಕಳಿಗೆ 4 ರಾಗಿ ಸರಿ ಪಾಕವಿಧಾನಗಳು – 4 Ragi Porridges for Babies
- ಪ್ಯೂರಿ ಪಾಕವಿಧಾನಗಳ ಸಂಗ್ರಹ – Puree Recipe Collection
- ಸರಿ ಪಾಕವಿಧಾನಗಳ ಸಂಗ್ರಹ – Porridges Recipe Collection
Video: ಸೇಬು, ಬೀಟ್ರೂಟ್ & ಕ್ಯಾರಟ್ ಪ್ಯೂರಿ | Apple Beetroot Carrot Puree recipe in Kannada
ಸೇಬು, ಬೀಟ್ರೂಟ್ & ಕ್ಯಾರಟ್ ಪ್ಯೂರಿ | Apple Beetroot Carrot Puree recipe in Kannada
ಸೇಬು, ಬೀಟ್ರೂಟ್ & ಕ್ಯಾರಟ್ ಪ್ಯೂರಿ | Apple Beetroot Carrot Puree recipe in Kannada
ಲೇಖಕಿ :ಕವಿತ ಪ್ರಶಾಂತ್
ಪಾಕವಿಧಾನ: ಶಿಶು ಆಹಾರ
ತಿನಿಸು:Baby Food

ಸಾಮಗ್ರಿಗಳು
- ಸೇಬು - 1/2 ಕಪ್ ಹೆಚ್ಚಿರುವ
- ಬೀಟ್ರೂಟ್ - 1/2 ಕಪ್
- ಕ್ಯಾರಟ್ - 1/2 ಕಪ್
ವಿಧಾನ
- ಸೇಬಿನ ಮತ್ತು ಬೀಟ್ರೂಟ್ ಸಿಪ್ಪೆ ತೆಗೆದು ಕೆಳಗೆ ತೋರಿಸಿರುವ ತರಹ ತೆಳ್ಳಗೆ ಹೆಚ್ಚಿಕೊಳ್ಳಿ ನಂತರ ಪ್ಯಾನ್/ ಪಾತ್ರೆಗೆ ಹಾಕಿ.
- ತದನಂತರ ಹೆಚ್ಚಿರುವ ಕ್ಯಾರಟ್ ಮತ್ತು ನೀರು ಹಾಕಿ. ತುಂಬಾ ನೀರನ್ನು ಬೇಯಿಸಲು ಹಾಕಬೇಡಿ, ಪ್ಯೂರಿ ಗಾಢವಾಗಿರಬೇಕು.
- ಪಾತ್ರೆಯಲ್ಲಿ ಬೇಯಿಸುವುದಾದರೆ ಮುಚ್ಚಳ ಮುಚ್ಚಿ 10-15 ನಿಮಿಷ ಬೇಯಿಸಿ, ಕುಕ್ಕರ್ ನಲ್ಲಿ ಒಂದು ಸೀಟಿ ಬರುವ ತನಕ ಬೇಯಿಸಬಹುದು. ಫೋರ್ಕ್ ನಿಂದ ತರಕಾರಿ ಬೆಂದಿರುವುದನ್ನು ಖಚಿತಪಡಿಸಿಕೊಳ್ಳಿ.
- ಬೆಂದ ಎಲ್ಲಾ ತರಕಾರಿ ಮತ್ತು ಹಣ್ಣನ್ನು ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ರುಬ್ಬಿ ಕೊಳ್ಳಿ. ಬಟ್ಟಲಿಗೆ ಹಾಕಿ.
- ಸೇಬು ಬೀಟ್ರೂಟ್ & ಕ್ಯಾರೆಟ್ ಪ್ಯೂರಿ ತಯಾರಾಗಿದೆ.
ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು Instagram ನಲ್ಲಿ ಭೇಟಿ ಮಾಡಿ
ಸೇಬು, ಬೀಟ್ರೂಟ್ & ಕ್ಯಾರಟ್ ಪ್ಯೂರಿ | Apple Beetroot Carrot Puree recipe in Kannada
ಸಾಮಗ್ರಿಗಳು :
- ಸೇಬು – 1/2 ಕಪ್ ಹೆಚ್ಚಿರುವ
- ಬೀಟ್ರೂಟ್ – 1/2 ಕಪ್
- ಕ್ಯಾರಟ್ – 1/2 ಕಪ್
ಎ ಬಿ ಸಿ ಪ್ಯೂರಿ ಮಾಡುವ ವಿಧಾನ :
1. ಸೇಬಿನ ಮತ್ತು ಬೀಟ್ರೂಟ್ ಸಿಪ್ಪೆ ತೆಗೆದು ಕೆಳಗೆ ತೋರಿಸಿರುವ ತರಹ ತೆಳ್ಳಗೆ ಹೆಚ್ಚಿಕೊಳ್ಳಿ ನಂತರ ಪ್ಯಾನ್/ ಪಾತ್ರೆಗೆ ಹಾಕಿ.
2. ತದನಂತರ ಹೆಚ್ಚಿರುವ ಕ್ಯಾರಟ್ ಮತ್ತು ನೀರು ಹಾಕಿ. ತುಂಬಾ ನೀರನ್ನು ಬೇಯಿಸಲು ಹಾಕಬೇಡಿ, ಪ್ಯೂರಿ ಗಾಢವಾಗಿರಬೇಕು.
3. ಪಾತ್ರೆಯಲ್ಲಿ ಬೇಯಿಸುವುದಾದರೆ ಮುಚ್ಚಳ ಮುಚ್ಚಿ 10-15 ನಿಮಿಷ ಬೇಯಿಸಿ, ಕುಕ್ಕರ್ ನಲ್ಲಿ ಒಂದು ಸೀಟಿ ಬರುವ ತನಕ ಬೇಯಿಸಬಹುದು. ಫೋರ್ಕ್ ನಿಂದ ತರಕಾರಿ ಬೆಂದಿರುವುದನ್ನು ಖಚಿತಪಡಿಸಿಕೊಳ್ಳಿ.
4. ಬೆಂದ ಎಲ್ಲಾ ತರಕಾರಿ ಮತ್ತು ಹಣ್ಣನ್ನು ಬ್ಲೆಂಡರ್ ಜಾರ್ ಗೆ ಹಾಕಿ ನಯವಾಗಿ ರುಬ್ಬಿ ಕೊಳ್ಳಿ. ಬಟ್ಟಲಿಗೆ ಹಾಕಿ.
5. ಸೇಬು ಬೀಟ್ರೂಟ್ & ಕ್ಯಾರೆಟ್ ಪ್ಯೂರಿ ತಯಾರಾಗಿದೆ.
ಸೇಬು, ಬೀಟ್ರೂಟ್ & ಕ್ಯಾರಟ್ ಪ್ಯೂರಿ | Apple Beetroot Carrot Puree recipe in Kannada
ಸೂಚನೆ :
- ಶಿಶುಗಳಿಗೆ ಘನವಸ್ತುಗಳನ್ನು ಪರಿಚಯಿಸಿದ ನಂತರ ಪ್ಯೂರಿ ಪರಿಚಯಿಸುವುದು ಒಳ್ಳೆಯದು.
- ಯಾವುದೇ ಮಸಾಲೆ ಸೇರಿಸುವ ಅಗತ್ಯವಿಲ್ಲ ಒಳ್ಳೆಯ ಪರಿಮಳ ಮತ್ತು ರುಚಿ ನೀಡಲು ಒಂದು ಚಿಟಕೆ ಏಲಕ್ಕಿ ಅಥವಾ ಚಕ್ಕೆ ಪುಡಿಯನ್ನು ಹಾಕ ಬಹುದು.
- ಹಣ್ಣು ತರಕಾರಿ ಬೇಯಿಸಿದ ನೀರನ್ನು ಎಸೆಯಬೇಡಿ.
- ಯಾವುದೇ ಹೊಸ ಆಹಾರವನ್ನು ಪರಿಚಯಿಸುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳುವುದು ಒಳ್ಳೆಯದು.
ನಮ್ಮ ಈ ಕನ್ನಡದ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Instagram, Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ. ಕೆಳಗೆ comment ಮಾಡಿ ನಿಮ್ಮ ಅನಿಸಿಕೆಗಳನ್ನು ಹೇಳಲು ಮರೆಯದಿರಿ.