Spread the love
 • 27
  Shares

8 ತಿಂಗಳು ಶಿಶುಗಳಿಗೆ ಶಿಶು ಆಹಾರ ಚಾರ್ಟ್| 8 months baby food chart in Kannada 

8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಶಿಶು ಆಹಾರ ಚಾರ್ಟ್ | ಶಿಶು ಆಹಾರ ಪಟ್ಟಿ | 8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಶಿಶು ಆಹಾರ ಪಾಕವಿಧಾನಗಳು | 8 ತಿಂಗಳ ಮಗುವಿಗೆ ನಾನು ಯಾವ ಆಹಾರವನ್ನು ನೀಡಬೇಕು  | 

8 MONTHS INDIAN BABY FOOD CHART with Recipe Videos

8 ತಿಂಗಳ ಹೊತ್ತಿಗೆ, ಸಾಧಾರಣವಾಗಿ ಮಗು ತೆವಳುವುದನ್ನು ಕಲಿತಿರುತ್ತಾರೆ ಮತ್ತು ಎದ್ದು ನಿಲ್ಲಲು ಪ್ರಯತ್ನ ಮಾಡುತ್ತಾರೆ. ಸಣ್ಣ ಆಹಾರದ ತುಂಡುಗಳು ಅಥವಾ ವಸ್ತುಗಳನ್ನು ಎತ್ತಿಕೊಂಳ್ಳುವುದು ಗ್ರಹಿಕೆಯನ್ನು ಸಹ ಮಾಡುವುದನ್ನು ಕಲಿತಿರುತ್ತಾರೆ. ಪಾಕವಿಧಾನದ ವೀಡಿಯೊಗಳೊಂದಿಗೆ 8 ತಿಂಗಳು ಮೇಲ್ಪಟ್ಟ ಭಾರತೀಯ ಶಿಶು ಆಹಾರ ಪಟ್ಟಿಯನ್ನು ನೋಡಿ.

ಮಗುವಿಗೆ ತಾನಾಗಿಯೇ ಬೆರಳು/ಕೈಗಳನ್ನು ಬಳಸಿ ಆಹಾರವನ್ನು ತಾವೇ ಎತ್ತಿಕೊಂಡು ತಿನ್ನಲು ಪ್ರೋತ್ಸಾಹಿಸಲು ಕೈಗೆ ನೀಡುವ ಆಹಾರಗಳನ್ನು ಪರಿಚಯಿಸಬಹುದು. ಸ್ವಲ್ಪ ನಾಲಿಗೆಯ ರುಚಿಯನ್ನು ಅಭಿವೃದ್ಧಿಪಡಿಸಲು ಕೆಲವು ಪರಿಮಳ ಮತ್ತು ರುಚಿ ನೀಡಲು ಸಣ್ಣ ಪ್ರಮಾಣದಲ್ಲಿ  ಮಸಾಲೆಗಳನ್ನು ಸಹ ಪರಿಚಯಿಸಬಹುದು.

ಮಗುವಿಗೆ ತಿನ್ನಲು  ಒತ್ತಾಯಿಸಬೇಡಿ ಮತ್ತು ಮಕ್ಕಳು ನಿಧಾನವಾಗಿ ಆಹಾರ ಪದ್ಧತಿಯನ್ನು ಬೆಳೆಸಿಕೊಳ್ಳಲಿ. ವಿಭಿನ್ನ ಆಹಾರಗಳನ್ನು ಪರಿಚಯಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು.

ಕೈಗೆ ನೀಡುವ ಆಹಾರ ಎಂದರೇನು?

ಚಮಚಗಳು, ಫೋರ್ಕ್‌ಗಳು, ಚಾಕು ಇತ್ಯಾದಿಗಳಿಗೆ ಬದಲಾಗಿ ಬೆರಳುಗಳನ್ನು/ಕೈಯನ್ನು  ಬಳಸಿ ತಿನ್ನಬಹುದಾದ ಆಹಾರಗ್ಗಳಿಗೆ ಕೈಗೆ ನೀಡುವ ಆಹಾರವೆನ್ನುತ್ತಾರೆ. ಕೈಯಿಂದ ಮುಟ್ಟಿ ಅದರ ವಿನ್ಯಾಸ ಹಾಗೂ ರುಚಿಯನ್ನು ಪರಿಚಯಿಸಲು ಹೊಸ ಆಹಾರ ಕ್ರಮಕ್ಕೆ ಹೊಂದಿಕೊಳ್ಳಲ್ಲು ಆಹಾರವನ್ನು 8 ತಿಂಗಳೊಳಗೆ ಪರಿಚಯಿಸುವುದು ಬಹಳ ಮುಖ್ಯ, ಏಕೆಂದರೆ ಶಿಶುಗಳು ಆ ಹೊತ್ತಿಗೆ ಚಲನಾ ಕೌಶಲ್ಯವನ್ನು ಬೆಳೆಸಿಕೊಳ್ಳುತ್ತಾರೆ.

8 ತಿಂಗಳು ಮೇಲ್ಪಟ್ಟ ಮಗುವಿಗೆ ನೀಡಬೇಕಾದ ಆಹಾರದ ಪ್ರಮಾಣ:

ಪ್ರಮಾಣವು ಮಗುವಿನ ಇಷ್ಟ ಮತ್ತು ಮಗುವಿನ ಹಸಿವಿನ ಮೇಲೆ ಅವಲಂಬಿತವಾಗಿರುತ್ತದೆ. ಸರಾಸರಿ ಅಂದಾಜು 1/2 ಕಪ್. ಮಗುವಿಗೆ ಆಹಾರವನ್ನು ಬಲವಂತವಾಗಿ ತಿನ್ನಿಸಬೇಡಿ ಮತ್ತು ತಿನ್ನಲು ಒತ್ತಾಯಿಸಬೇಡಿ. ಎದೆಹಾಲು ಮತ್ತು / ಅಥವಾ ಫಾರ್ಮುಲಾ ಹಾಲಿನೊಂದಿಗೆ ನೀವು 8 ತಿಂಗಳ ಮಗುವಿಗೆ 2 ಊಟ ಮತ್ತು ಲಘು ಆಹಾರವನ್ನು ನೀಡಬಹುದು. ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ನೀವು ಊಟ ಮತ್ತು ಲಘು ಆಹಾರವನ್ನು  ನೀಡುವ  ಸಮಯವನ್ನು ನಿರ್ಧರಿಸಬಹುದು.

ಗಮನದಲ್ಲಿಡಬೇಕಾದ ಪ್ರಮುಖ ವಿಷಯಗಳು:

 • ಗಾಢ ಸ್ಥಿರತೆಯಿರುವ ಆಹಾರವನ್ನು ಪರಿಚಯಿಸಬೇಕು.
 • ವಿಭಿನ್ನ ರುಚಿ, ಪರಿಮಳ ಮತ್ತು ವಿನ್ಯಾಸದ ಆಹಾರವನ್ನು ಪರಿಚಯಿಸಿ.
 • ಯಾವಾಗಲೂ ತಾಜಾ ತಯಾರಿಸಿದ ಆಹಾರವನ್ನು ನೀಡಬೇಕು.
 • ಮಗುವಿಗೆ ಬಲವಂತವಾಗಿ ಆಹಾರವನ್ನು ನೀಡಬೇಡಿ. ತಿನ್ನಲು ಒತ್ತಾಯಮಾಡಬೇಡಿ.
 • ಕ್ರಮೇಣ ಆಹಾರದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬೇಕು.
 • ಮಗು ಕುಳಿತಾಗ ಯಾವಾಗಲೂ ಮಗುವಿಗೆ ಆಹಾರವನ್ನು ತಿನ್ನಿಸಬೇಕು. ಮಗು ಮಲಗಿರುವಾಗ ಆಹಾರವನ್ನು  ನೀಡಬೇಡಿ. 
 • ಮಗುವಿಗೆ ಆಹಾರ ತಯಾರಿಸಲು ಮತ್ತು ತಿನ್ನಿಸಲು ಬಳಸುವ ಬಟ್ಟಲುಗಳು, ಚಮಚಗಳು, ಪಾತ್ರೆಗಳನ್ನು ಬಿಸಿ ನೀರಿನಲ್ಲಿ ಶುಚಿ ಗೊಳಿಸಿ  ಕ್ರಿಮಿನಾಶಗೊಳಿಸಬೇಕು.
 • ಮಗುವಿಗೆ 1 ವರ್ಷದ ತನಕ ಉಪ್ಪು, ಸಕ್ಕರೆ ಅಥವಾ ಜೇನುತುಪ್ಪ ಬಳಸಬೇಡಿ.
 • ಮಗುವಿನ ಬೇಡಿಕೆಯ ಮೇಲೆ ಯಾವಾಗಲೂ ಎದೆ ಹಾಲು / ಸೂತ್ರದ ಹಾಲನ್ನು ನೀಡಿ.
 • ತರಕಾರಿಗಳನ್ನು ಒತ್ತಡದಲ್ಲಿ ಕುಕ್ಕರ್ ನಲ್ಲಿ ಬೇಯಿಸುವ ಬದಲು ಹಬೆಯಲ್ಲಿ ಬೇಯಿಸುವುದು ಆರೋಗ್ಯಕರವಾಗಿರುತ್ತದೆ.

8 ತಿಂಗಳು ಮೇಲ್ಪಟ್ಟ ಮಗುವಿಗೆ ಯಾವ ಯಾವ ಆಹಾರವನ್ನು ನೀಡಬಹುದು?

ಎದೆ ಹಾಲು – ಘನ ಆಹಾರ ಪರಿಚಯಿಸುತ್ತಾ ಎದೆ ಹಾಲು ಅಥವಾ ಸೂತ್ರ ಹಾಲು ಮುಂದುವರಿಸಬೇಕು.

ಹಣ್ಣುಗಳು -ಸೇಬು , ಬಾಳೆಹಣ್ಣು, ಮಾವಿನ ಹಣ್ಣು , ಸಪೋಟಾ / ಚಿಕು, ಪೇರಳೆ, ಪ್ಲಮ್, ಕುಂಬಳಕಾಯಿ, ಖರ್ಜೂರ, ಅಂಜೂರದ ಹಣ್ಣು, ದ್ರಾಕ್ಷಿ ನೀಡಬಹುದು.

ತರಕಾರಿಗಳು – ಆಲೂಗಡ್ಡೆ, ಕ್ಯಾರೆಟ್, ಗೆಣಸು , ಹಸಿರು ಬಟಾಣಿ, ಹೂಕೋಸು, ಬೀನ್ಸ್, ಸೊಪ್ಪು ತರಕಾರಿಗಳಂತಹ ಬೇಯಿಸಿದ ಮತ್ತು ಹಿಸುಕಿದ ತರಕಾರಿಗಳನ್ನು ನೀಡಬಹುದು.

ಸಿರಿಧಾನ್ಯಗಳು ಮತ್ತು ಧಾನ್ಯಗಳು – ಅಕ್ಕಿ, ಬಾರ್ಲಿ, ರಾಗಿ, ಸೂಜಿ / ರವೆ, ಗೋಧಿ ನುಚ್ಚು  / ದಲಿಯಾ, ಬಟಾಣಿ, ಹೆಸರು ಕಾಳು / ಮೂಂಗ್, ಉದ್ದಿನ ಬೇಳೆ ಮತ್ತು ಓಟ್ಸ್ ನೀಡಬಹುದು.

ಸಂಯೋಜನೆಗಳು – ಆಹಾರದ ವಿಭಿನ್ನ ಸಂಯೋಜನೆಗಳು ಅಥವಾ ಮಿಶ್ರಣಗಳನ್ನು ಪ್ರಯೋಗಿಸಬಹುದು.. ಹಣ್ಣು ಮತ್ತು ತರಕಾರಿಗಳು ಮತ್ತು ಬೇಳೆಕಾಳುಗಳು ಇತ್ಯಾದಿ.

ಡೈರಿ ಉತ್ಪನ್ನಗಳು – ತುಪ್ಪ, ಬೆಣ್ಣೆ, ಮೊಸರು ತೋಫು, ಪನೀರ್

ಮಸಾಲೆಗಳು -ಅರಿಶಿನ, ಬೆಳ್ಳುಳ್ಳಿ, ಶುಂಠಿ, ಇಂಗು , ಜೀರಿಗೆ, ಮೆಣಸು, ಕೊತ್ತಂಬರಿ ಬೀಜ, ಸೋಂಪು , ಓಂ ಕಾಳು, ಮೆಂತ್ಯ, ಸಾಸಿವೆ, ದಾಲ್ಚಿನ್ನಿ, ಜಾಯಿಕಾಯಿ, ಏಲಕ್ಕಿ (ಎಲ್ಲವನ್ನೂ ಸ್ವಲ್ಪ ಪ್ರಮಾಣದಲ್ಲಿ ಸೇರಿಸಬಹುದು- ಒಂದು ಚಿಟಕೆ)

Video:8 ತಿಂಗಳು ಶಿಶುಗಳಿಗೆ ಶಿಶು ಆಹಾರ ಚಾರ್ಟ್| 8 months baby food chart in Kannada 

Kannada Subscribe Button TOTS AND MOMS

8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ – ಭಾರತೀಯ ಆಹಾರ ಪಟ್ಟಿ ವಿಧಾನದ ಮಾದರಿ

8 ತಿಂಗಳು ಮೇಲ್ಪಟ್ಟ ಮಾಕ್ಕಳಿಗೆ  ಪಾಕವಿಧಾನಗಳೊಂದಿಗೆ ವೀಡಿಯೋ ವೀಕ್ಷಿಸಿ (ದಯವಿಟ್ಟು ಪಾಕವಿಧಾನಗಳನ್ನು ಪಡೆಯಲು ಹೈಪರ್ಲಿಂಕ್‌ಗಳನ್ನು ನೋಡಿ) ವಾರದ ಶಿಶು ಆಹಾರ ಪಟ್ಟಿ ಮಾದರಿ ವಿಧಾನ  ಕೆಳಗೆ ನೀಡಲಾಗಿದೆ.

8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಶಿಶು ಆಹಾರ ಪಟ್ಟಿ – ಮೊದಲನೇ ವಾರ

DaysBreakfastLunchDinner
MondayOats PorridgeFoxtail Millet Veg Fried RicePumpkin Puree
TuesdayInstant Moong Rice KhichdiOats Pancake SpicyVegetable Dal Soup
WednesdaySathu Mavu Aloo CutletsDates & Raisins Poha KheerCarrot Coins Finger Foods
ThursdayKerala Banana Powder PorridgeSpinach Oats Dosa & PancakeInstant Poha Fruit Porridge
FridayStewed AppleDaliya Khichdi With MoongdalPotato Soup
SaturdaySprouted Health Mix - Sathu MavuRagi RottiCarrot Tomato Soup
SundaySweet Potato PureeInstant Makhana PorridgeVegetable Dal Soup

8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಶಿಶು ಆಹಾರ ಪಟ್ಟಿ – ಎರಡನೇ ವಾರ

DaysBreakfastLunchDinner
MondayWheat DaliyaSugarless Sabudana KheerSpinach Soup
TuesdaySprouted Ragi MilkOats Mooli ParathaApple Rice Baby Food
WednesdayBajra Rice KhichadiInstant Ragi Dosa - SweetPumpkin Soup
ThursdayOats PorridgeLittle Millet Seviya UpmaVegetable Mash
FridaySathu Mavu - Multigrain PorridgeMakhana Sooji KheerRice & Dal Kanji
SaturdayRagi Oatmeal PorridgeFoxtail Millet DosaCarrot & Dal Mash
SundayPumpkin Kheer
Barley Moong KhichdiCauliflower & Corn Thin Soup

8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಶಿಶು ಆಹಾರ ಪಟ್ಟಿ – ಮೂರನೇ ವಾರ

DaysBreakfastLunchDinner
MondayMashed BananaSprouted Health Mix - Sathu MavuPotato Soup
TuesdayRice CerealOats PorridgeCarrot Tomato Soup
WednesdaySprouted Health Mix - Sathu MavuMakhana Sooji KheerCarrot Soup
ThursdayKerala Banana Powder PorridgeRice Flour Upma
Pear Puree
FridayBarley Moong KhichdiMashed PotatoBeetroot Soup
SaturdaySathu Mavu - Multigrain PorridgeMashed BananaApple Puree
SundaySprouted Ragi PorridgeCarrot Coins Finger FoodsRice Ganji/Kanji

8 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಶಿಶು ಆಹಾರ ಪಟ್ಟಿ – ನಾಲ್ಕನೇ ವಾರ

DaysBreakfastLunchDinner
MondayBarley Apple PorridgeSpinach Paneer RicePumpkin Puree
TuesdayRagi Kheer / Halwa
Rice CerealSpinach Puree / Soup
WednesdayKerala Banana Powder PorridgeApple & Little Millet Rice / Kheer Baked Veggies
ThursdaySooji Halwa/ KheerEgg Recipes For BabiesPapaya Puree
FridaySprouted Health Mix - Sathu MavuRagi Apple PancakeBeetroot Puree / Soup
SaturdayInstant Poha Fruit PorridgeAloo Paratha
Kerala Banana Halwa
SundayBarley PorridgeSabudana Veg KhichdiVegetable Soup

8 MONTHS INDIAN BABY FOOD CHART with Recipe Videos

ಸೂಚನೆಗಳು :

 • 8 ತಿಂಗಳು ಮೇಲ್ಪಟ್ಟ ಮಗುವಿಗೆ ನೀಡಬಹುದಾದ ಆಹಾರಗಳ ಆಯ್ಕೆಗಳು:
 • ಆಹಾರ ಪಟ್ಟಿಯನ್ನು ವಿನ್ಯಾಸಗೊಳಿಸುವಾಗ ಮಗುವಿನ ಬೆಳವಣಿಗೆಗೆ ಪೂರಕವಾಗಿರು ಮತ್ತು ಪೋಷಕಾಂಶಗಳ ಅಗತ್ಯವನ್ನು ಮನಸ್ಸಿನಲ್ಲಿಟ್ಟುಕೊಂದು ತಯಾರಿಸಲಾಗಿದೆ.
 • 6 ತಿಂಗಳು ಶಿಶು ಆಹಾರ ಪಟ್ಟಿ ಮತ್ತು 7 ತಿಂಗಳ ಶಿಶು ಆಹಾರ ಪಾಕವಿಧಾನಗಳನ್ನು ಸಹ ತಯಾರಿಸಿ ನೀಡಬಹುದು.
 • ನಿಮ್ಮ ಆಯ್ಕೆ ಮತ್ತು ಮಗುವಿನ ಇಷ್ಟದಂತೆ ನೀವು ಯಾವುದೇ ಆಹಾರವನ್ನು ಪರಿಚಯಿಸಬಹುದು ಅಥವಾ ಪುನರಾವರ್ತಿಸಬಹುದು.
 • 3 ದಿನಗಳ ನಿಯಮವು ಅನುಸರಿಸುವ ಅಗತ್ಯ ಇರುವುದಿಲ್ಲ ಮತ್ತು ಆದ್ದರಿಂದ 6 ತಿಂಗಳು ಮೇಲ್ಪಟ್ಟ ಮಗುವಿಗೆ ಪ್ರತಿದಿನ ಹೊಸ ಆಹಾರವನ್ನು ಪರಿಚಯಿಸಬಹುದು.
 • ಮುಂದೆ ಯಾವುದೇ ಅಲರ್ಜಿಯ ಸಮಸ್ಯೆಗಳನ್ನು ತಪ್ಪಿಸಲು ಒಂದು ವರ್ಷದ ಒಳಗೆ ವಿವಿಧ ರೀತಿಯ ರುಚಿಯ ಆಹಾರಗಳನ್ನು ಮಗುವಿಗೆ ಪರಿಚಯಿಸುವುದು ಒಳ್ಳೆಯದು.
 • ನಮ್ಮಂತೆಯೇ ಬಹು ಮುಖ್ಯವಾಗಿ ಶಿಶುಗಳಿಗೆ ಪ್ರತಿದಿನ ವಿಭಿನ್ನ ರುಚಿ ಮತ್ತು ವಿನ್ಯಾಸ ಬೇಕಾಗುತ್ತದೆ, ಮತ್ತೆ ಮತ್ತೆ ಅದೇ ರೀತಿಯ ಆಹಾರ ನೀಡಬೇಡಿ ಮತ್ತು ಆಹಾರವನ್ನು ದ್ವೇಷಿಸುವಂತೆ ಮಾಡಬೇಡಿ.
 • ನೀವು ಸಾವಯವ ಪ್ರಮಾಣೀಕೃತವಾದ ಶಿಶು ಆಹಾರವನ್ನು ಖರೀದಿಸಬಹುದು

ನಮ್ಮ ಅಂಗಡಿಯಿಂದ ಮನೆಯಲ್ಲಿ ತಯಾರಿಸಿದ ತಾಜಾ ಶಿಶು ಆಹಾರ ದೊರೆಯುತ್ತದೆ.

TOTS AND MOMS FOODS –ಸಂರಕ್ಷಕಗಳು, ರಾಸಾಯನಿಕ ಸೇರ್ಪಡೆಗಳು, ಸಕ್ಕರೆ ಅಥವಾ ಹಾಲಿನ  ಘನವಸ್ತುಗಳನ್ನು ಬಳಸದೆ ಶುಧ್ಧವಾಗಿ ಮತ್ತು ಶುಚಿಯಾಗಿ ತಯಾರಿಸಿದ ವ್ಯಾಪಕ ಮತ್ತು ಉತ್ತಮ ಶ್ರೇಣಿಯ ಧಾನ್ಯಗಳು, ಆರೋಗ್ಯ ಮಿಶ್ರಣಗಳು ಮತ್ತು ತ್ವರಿತ ಶಿಶು  ಆಹಾರಗಳು ಲಭ್ಯವಿದೆ.

Buy Organic Baby Foods Online - Preservative, Additive, Sugar and Milk Solids Free

ಶಿಶುವಿನ ಆಹಾರ ತಯಾರಿಸಲು ಬೇಕಾದ ಉತ್ಪನ್ನಗಳು ಕೆಳಕಂಡಂತಿವೆ .

(Click on images to buy them)

 

Click image to download FREE E-Book

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love
 • 27
  Shares