Spread the love
 • 109
  Shares

6 ತಿಂಗಳ ಶಿಶು ಆಹಾರ ಚಾರ್ಟ್ | 6 Months Indian Baby Food Chart in Kannada

6 ತಿಂಗಳ ಶಿಶು ಆಹಾರ ಚಾರ್ಟ್ | ವೀಡಿಯೊಗಳೊಂದಿಗೆ 6 ತಿಂಗಳ ಶಿಶು ಆಹಾರ ಪಟ್ಟಿ | 6 ತಿಂಗಳ ಮಗುವಿಗೆ ಮನೆಯಲ್ಲಿ ಮಾಡಬಹುದಾದ  ಪಾಕವಿಧಾನಗಳು | ಶಿಶುಗಳಿಗೆ ಘನ ಆಹಾರಗಳನ್ನು ಹೇಗೆ ಮತ್ತು ಯಾವಾಗ ಪರಿಚಯಿಸಬೇಕು.  | ಶಿಶುಗಳಿಗೆ ಗಂಜಿ | ಶಿಶುಗಳಿಗೆ ಪ್ಯೂರಿಗಳು| ಶಿಶುಗಳಿಗೆ ತರಕಾರಿಗಳು | ಶಿಶುಗಳಿಗೆ ಹಣ್ಣುಗಳು | ಶಿಶುಗಳಿಗೆ ಬೇಳೆಕಾಳುಗಳು

ನಿಮ್ಮ ಮಗು ಸ್ವಂತವಾಗಿ ಕುಳಿತುಕೊಳ್ಳಲು ಪ್ರಾರಂಭಿಸುತ್ತಿದೆಯೇ? ಮಗು ನಿಮ್ಮ ತಟ್ಟೆಯಿಂದ ಆಹಾರವನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆಯೇ? ನಿಮ್ಮ ಮಗುವಿಗೆ 6 ತಿಂಗಳು ತುಂಬುತ್ತಿದೆಯೇ? ನಿಮ್ಮ ಮಗುವಿಗೆ ಘನ ಆಹಾರವ ಗಳನ್ನು ಪರಿಚಯಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ , ಮೇಲೆ ತಿಳಿಸಿರುವ ಎಲ್ಲಾ ಚಿಹ್ನೆಗಳನ್ನು ತೋರಿಸುತ್ತಿದ್ದರೆ, ನಿಮ್ಮ ಮಗು ಘನ ಆಹಾರಗಳನ್ನು ಸ್ವೀಕರಿಸಲು ಸಿದ್ಧವಾಗಿದೆ ಎಂದು ತಿಳಿಯಬಹುದು.  ಸ್ತನ್ಯಪಾನ ಅಥವಾ ಫಾರ್ಮುಲಾ ಹಾಲು ಇನ್ನೂ ಆಹಾರದ ಪ್ರಮುಖ ಭಾಗವಾಗಿರಬೇಕು. ಆರಂಭದಲ್ಲಿ ತೆಳುವಾದ ಮತ್ತು ಮೃದುವಾದ ಪೇಸ್ಟ್‌ ನಂತಹ ಸ್ಥಿರತೆಯುಳ್ಳ , ಸಪ್ಪೆ ಆಹಾರವನ್ನು ಸಣ್ಣ ಪ್ರಮಾಣದಲ್ಲಿ ಪರಿಚಯಿಸಿ. ನಿಮಗೆ ಸಹಾಯವಾಗುವ ಶಿಶು ಆಹಾರ ಚಾರ್ಟ್ ಅನ್ನು ಅರ್ಥಮಾಡಿಕೊಳ್ಳಲು ಈ ಲೇಖನ ನಿಮಗೆ  ಹೆಚ್ಚಿನ ಮಾಹಿತಿ ನೀಡುತ್ತದೆ.

6 ತಿಂಗಳ ಶಿಶು ಆಹಾರ ಚಾರ್ಟ್ | 6 Months Indian Baby Food Chart in Kannada

6 MONTHS INDIAN BABY FOOD CHART with Recipe Videos Indian baby

ಸ್ತನ್ಯಪಾನ ಬಿಡಿಸುವುದೆಂದರೇನು?

ಹಾಲುಣಿಸುವಿಕೆಯ ಜೊತೆಗೆ –( ಎದೆ ಹಾಲು ಅಥವಾ ಸೂತ್ರದ ಹಾಲನ್ನು) ಹೊರತುಪಡಿಸಿ ಬೇರೆ ಘನ ಆಹಾರಗಳನ್ನು ಪರಿಚಯಿಸುವ ಪ್ರಕ್ರಿಯೆಯಿಂದ, ತಾಯಿ ಹಾಲುಣಿಸುವಿಕೆಯನ್ನು ಕ್ರಮೇಣ ಸಂಪೂರಣವಾಗಿ ನಿಲ್ಲಿಸುವುದು. ಪ್ಯೂರಿ / ಗಂಜಿ ಅಥವಾ ಗಂಜಿ ರೂಪದಲ್ಲಿ ಹಣ್ಣುಗಳು ಅಥವಾ ತರಕಾರಿಗಳು  ರಸ / ತಿರುಳು ಅಥವಾ ಧಾನ್ಯಗಳಾಗಿರಬಹುದು. ಸರಳವಾಗಿ ಹೇಳುವುದಾದರೆ  ಎದೆಹಾಲು ಅಥವಾ ಸೂತ್ರ ಹಾಲಿನಿಂದ ಇತರ ಘನ ಆಹಾರಗಳನ್ನು ಪರಿಚಯಿಸುವ ಪ್ರಕ್ರಿಯೆ. ನಿಮ್ಮ ಮಗುವಿಗೆ ಚಮಚದಿಂದ ತಿನ್ನಲು, ನುಂಗಲು ಮತ್ತು ಅಂತಿಮವಾಗಿ ಅಗಿಯಲು ಕಲಿಸುವ ಪ್ರಕ್ರಿಯೆ.

ಮಗು ಈ ಬದಲಾವಣೆಗೆ ಸಿದ್ಧವಾಗಿದೆಯೇ  :

ಸಾಧಾರಣವಾದ ಮಾರ್ಗದರ್ಶಣದ ಪ್ರಕಾರ  ಹಾಲುಣಿಸುವ ಅವಧಿಯು ಹುಟ್ಟಿನಿಂದ 6 ತಿಂಗಳವರೆಗೆ ಪ್ರಾರಂಭವಾಗುತ್ತದೆ. ಆದರೆ ಪ್ರತಿ ಮಗು ವಿಭಿನ್ನವಾಗಿರುವುದರಿಂದ ಬಲವಂತ ಅಥವಾ ಆತುರಪಡಬೇಡಿ. ನೀವು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳು ಕೆಳಗಡೆ ನೀಡಲಾಗಿದೆ.-

 • ಸರಿಯಾಗಿ ಕುಳಿತುಕೊಳ್ಳಿ ಮತ್ತು ಮಗುವಿನ  ತಲೆಯನ್ನು ಸ್ಥಿರವಾಗಿ ಹಿಡಿದುಕೊಳ್ಳಿ. 
 • ಇತರ ಆಹಾರಗಳಲ್ಲಿ ಆಸಕ್ತಿ ತೋರುತ್ತಿರುವುದು  ಅಥವಾ ಅದನ್ನು ನಿಮ್ಮ ತಟ್ಟೆಯಿಂದ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ 
 • ಮಗು ವಸ್ತುಗಳನ್ನು ತೆಗೆದುಕೊಂಡು  ಬಾಯಿಗೆ ಹಾಕಿಕೊಳ್ಳುತ್ತಿದ್ದರೆ 
 • ನೀವು ತಿನ್ನಿಸಿದಾಗ  ಸ್ವಲ್ಪ ಆಹಾರವನ್ನು ನುಂಗುವುದು.

ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯಗಳು :

 • ಒಂದು ಬಾರಿ ಒಂದೇ ಒಂದು ಆಹಾರವನ್ನು ಮಾತ್ರ ಪರಿಚಯಿಸಿ. 
 • ಯಾವಾಗಲೂ ತಾಜಾ ತಯಾರಿಸಿದ ಆಹಾರವನ್ನು ನೀಡಿಬೇಕು. 
 • ಮಗುವಿಗೆ ಬಲವಂತವಾಗಿ ಆಹಾರವನ್ನು ತಿನ್ನಿಸ ಬೇಡಿ,
 • ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಮತ್ತು ಕ್ರಮೇಣ ಜಾಸ್ತಿ ಮಾಡಿಕೊಳ್ಳಿ. 
 • ಮಗುವನ್ನು  ಕೂಡಿಸಿ ಆಹಾರವನ್ನು ತಿನ್ನಿಸಿ. ಮಗು  ಮಲಗಿರುವಾಗ ಆಹಾರವನ್ನು ನೀಡಬೇಡಿ. 
 • ಮಗುವಿಗೆ ತಿನ್ನಿಸಲು ಬಳಸುವ ಬಟ್ಟಲುಗಳು, ಚಮಚಗಳು, ಪಾತ್ರೆಗಳನ್ನು ಬಿಸಿ ನೀರಿನಲ್ಲಿ ತೊಳೆದು  ಕ್ರಿಮಿನಾಶಗೊಳಿಸಿ
 • 1 ವರ್ಷದವರೆಗೆ ಮಗುವಿಗೆ ಉಪ್ಪು, ಸಕ್ಕರೆ ಅಥವಾ ಜೇನುತುಪ್ಪ ಬಳಸಬೇಡಿ.
 • ಯಾವಾಗಲೂ ಮಗುವಿನ ಬೇಡಿಕೆಯ ಮೇಲೆ ಎದೆ ಹಾಲು ಅಥವಾ ಫಾರ್ಮುಲಾ ಹಾಲನ್ನು ಕುಡಿಸಬೇಕು. 
 • ಬಹುಮುಖ್ಯವಾಗಿ, ಘನ ಆಹಾರಗಳನ್ನು  ಪ್ರಾರಂಭಿಸುವ ಮೊದಲು ನಿಮ್ಮ ಮಕ್ಕಳ ವೈದ್ಯರೊಂದರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. 

6 ತಿಂಗಳು ಮೇಲ್ಪಟ್ಟ ಮಗುವಿಗೆ ಯಾವ ಯಾವ ಆಹಾರವನ್ನು ನೀಡಬಹುದು?

 • ಎದೆ ಹಾಲು – ಎದೆ ಹಾಲು ಅಥವಾ ಸೂತ್ರ ಹಾಲು ಮುಂದುವರಿಸಬೇಕು. 
 • ಹಣ್ಣುಗಳು -ಸೇಬು , ಪೆಯರ್ , ಆವಕಾಡೊ (ಬೆಣ್ಣಿ ಹಣ್ಣು) , ಕರಬೂಜ , ಬಾಳೆಹಣ್ಣು
 • ತರಕಾರಿಗಳು – ಕ್ಯಾರೆಟ್, ಆಲೂಗಡ್ಡೆ, ಕುಂಬಳಕಾಯಿ, ಗೆಣಸು, ಸೋರೆಕಾಯಿ, ಬೀಟ್ರೂಟ್. ಪಾಲಕ ಮತ್ತು ಸಬ್ಬಸಿಗೆ ಸೊಪ್ಪು ಇತರ ಆಹಾರಗಳೊಂದಿಗೆ ಸಂಯೋಜನೆ ಮಾಡಿ ತಿನ್ನಿಸಬಹುದು.
 • ಧಾನ್ಯಗಳು ಮತ್ತು ಸಿರಿಧಾನ್ಯಗಳು – ಅಕ್ಕಿ, ಓಟ್ಸ್, ರಾಗಿ, ರವೆ/ ರವಾ, ಸಾಗೋ / ಸಬ್ಬಕ್ಕಿ, ನವಣೆ / ಮಖಾನಾ
 • ಮಸೂರ ಬೇಳೆ – ಮಸೂರು ಬೇಳೆ, ತೊಗರಿಬೇಳೆ, ಹೆಸರುಬೇಳೆ
 • ಡೈರಿ ಉತ್ಪನ್ನಗಳು – ತುಪ್ಪ, ಬೆಣ್ಣೆ, ಮೊಸರು
 • ಮಸಾಲೆಗಳು – ದಾಲ್ಚಿನ್ನಿ, ಜೀರಿಗೆ, ಲವಂಗ, ಅರಿಶಿನ, ಶುಂಠಿ

6 ತಿಂಗಳು ಮೇಲ್ಪಟ್ಟ ಮಗುವಿಗೆ ನೀಡಬೇಕಾದ ಆಹಾರದ ಪ್ರಮಾಣ:

  5-10 ಮಿಲಿ ಅಥವಾ ಒಂದು ಟೀಚಮಚದಷ್ಟು ಘನ ಆಹಾರಗಳನ್ನು ಪರಿಚಯಿಸಿ. ಮಗು ತಿನ್ನಲು ಆಸಕ್ತಿಯನ್ನು ಗಮನಿಸಿ ಕ್ರಮೇಣ ಪ್ರಮಾಣವನ್ನು ಹೆಚ್ಚಿಸಿ. ಮಗುವಿಗೆ  ಬಲವಂತವಾಗಿ ಆಹಾರವನ್ನು ತಿನ್ನಿಸಬೇಡಿ.  ಆಹಾರ ತಿನ್ನಿಸುವಾಗ  ಉಸಿರುಗಟ್ಟಿಸದಂತೆ ಅಥವಾ ಹೊಟ್ಟೆ ನೋವು ಬಾರದೆ ಇರುವ ಹಾಗೆ  ಜಾಗರೂಕತೆ ವಹಿಸಿ.

6 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಭಾರತೀಯ ಆಹಾರ ಚಾರ್ಟ್/ ಪಟ್ಟಿಯ ಮಾದರಿ

6 ತಿಂಗಳು ಮೇಲ್ಪಟ್ಟ ಶಿಶುಗಳಿಗೆ ಕೆಳಗೆ ಉಲ್ಲೇಖಿಸಬಹುದಾದ ಎಲ್ಲ ಪಾಕವಿಧಾನಗಳನ್ನು ನೀಡಲಾಗಿದೆ (ದಯವಿಟ್ಟು ಪಾಕವಿಧಾನಗಳನ್ನು ಪಡೆಯಲು ಹೈಪರ್ಲಿಂಕ್‌ಗಳನ್ನುಕ್ಲಿಕ್ ಮಾಡಿ) ಕೆಳಗೆ ಶಿಶು ಆಹಾರ ಚಾರ್ಟ್ ನ ಮಾದರಿ ನೋಡಿ. BM / FM ಎದೆಹಾಲು ಅಥವಾ ಫಾರ್ಮುಲಾ ಹಾಲನ್ನು ಸೂಚಿಸುತ್ತದೆ

Video: 6 ತಿಂಗಳ ಶಿಶು ಆಹಾರ ಚಾರ್ಟ್ | 6 Months Indian Baby Food Chart in Kannada

Kannada Subscribe Button TOTS AND MOMS

6 ತಿಂಗಳು ಮೇಲ್ಪಟ್ಟ ಭಾರತೀಯ ಶಿಶುಗಳಿಗೆ ಆಹಾರದ ಚಾರ್ಟ್/ ವಿಧಾನ: ಮೊದಲನೇ ವಾರ ಚಾರ್ಟ್ 

DaysLunchRest of the Day
MondayStewed AppleBM/FM
TuesdayPumpkin PureeBM/FM
WednesdaySprouted Ragi Milk Porridge / Ragi Paal KoozhBM/FM
ThursdayPear PureeBM/FM
FridayPumpkin PureeBM/FM
SaturdayKerala Banana Powder PorridgeBM/FM
SundayPumpkin PureeBM/FM

6 ತಿಂಗಳು ಮೇಲ್ಪಟ್ಟ ಭಾರತೀಯ ಶಿಶುಗಳಿಗೆ ಆಹಾರದ ಚಾರ್ಟ್/ ವಿಧಾನ:ಎರಡನೇ ವಾರ ಚಾರ್ಟ್

DaysLunchRest of the Day
MondayCarrot PureeBM/FM
TuesdayKerala Banana Powder PorridgeBM/FM
WednesdayPotato PureeBM/FM
ThursdayRice PorridgeBM/FM
FridayBeetroot PureeBM/FM
SaturdaySprouted Ragi Milk Porridge / Ragi Paal KoozhBM/FM
SundayBeetroot PureeBM/FM

6 ತಿಂಗಳು ಮೇಲ್ಪಟ್ಟ ಭಾರತೀಯ ಶಿಶುಗಳಿಗೆ ಆಹಾರದ ಚಾರ್ಟ್/ ವಿಧಾನ:ಮೂರನೇ ವಾರ ಚಾರ್ಟ್

DaysLunchRest of the Day
MondayRice PorridgeBM/FM
TuesdayInstant Poha Fruit PorridgeBM/FM
WednesdayBarley PorridgeBM/FM
ThursdaySpinach PureeBM/FM
FridaySprouted Ragi Milk PorridgeBM/FM
SaturdayBarley PorridgeBM/FM
SundayKerala Banana PowderBM/FM

6 ತಿಂಗಳು ಮೇಲ್ಪಟ್ಟ ಭಾರತೀಯ ಶಿಶುಗಳಿಗೆ ಆಹಾರದ ಚಾರ್ಟ್/ ವಿಧಾನ: ನಾಲ್ಕನೇ ವಾರ

DaysLunchRest of the Day
MondaySprouted Ragi Powder PorridgeBM/FM
TuesdayOats PorridgeBM/FM
WednesdayApple Rice Baby FoodBM/FM
ThursdaySpinach PureeBM/FM
FridayBarley Apple PorridgeBM/FM
SaturdayInstant Khichdi MixBM/FM
SundayBanana Sooji HalwaBM/FM

6 ತಿಂಗಳ ಶಿಶು ಆಹಾರ ಚಾರ್ಟ್ | 6 Months Indian Baby Food Chart in Kannada

6 MONTHS INDIAN BABY FOOD CHART with Recipe Videos

ಸೂಚನೆ:

 • 6 ತಿಂಗಳು ಮೇಲ್ಪಟ್ಟ ಮಗುವಿಗೆ ನೀಡಬಹುದಾದ ಆಹಾರಗಳ ಆಯ್ಕೆಗಳನ್ನು ನೀಡಲಾಗಿದೆ.
 • ನಿಮ್ಮ ಆಯ್ಕೆ ಮತ್ತು ಮಗುವಿನ ಇಚ್ಛೆಯಂತೆ ನೀವು ನಿಮ್ಮ ಆಯ್ಕೆಯ ಆಹಾರವನ್ನು ಪರಿಚಯಿಸಬಹುದು ಅಥವಾ ಪುನರಾವರ್ತಿಸಬಹುದು.
 • ಶಿಶುಗಳ ಬೆಳವಣಿಗೆಯಾದಂತೆ 3 ದಿನಗಳ ನಿಯಮವನ್ನು ಪಾಲಿಸಬೇಕಿಲ್ಲ.  ಪ್ರತಿದಿನ ಹೊಸ ಆಹಾರವನ್ನು ತಯಾರಿಸಿ ನೀಡಬಹುದು.
 • ಒಂದು ವರ್ಷ ತುಂಬುವ  ಮೊದಲೆ  ವಿವಿಧ ರೀತಿಯ ರುಚಿ ಮತ್ತು ಆಹಾರಗಳನ್ನು ಮಗುವಿಗೆ ಪರಿಚಯಿಸುವುದು ಒಳ್ಳೆಯದು.ಇದರಿಂದ ಅಲೆರ್ಜೀಗಳನ್ನು ತಪ್ಪಿಸಬಹುದು.
 • ನಮ್ಮಂತೆಯೇ ಮಕ್ಕಳಿಗೆ ವಿವಿಧ ರುಚಿ ಮತ್ತು ವಿಭಿನ್ನತೆ ಬೇಕಾಗುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿದಿನ ವಿಭಿನ್ನ ರುಚಿ ಮತ್ತು ವಿನ್ಯಾಸ ಬೇಕು, ಅವುಗಲನ್ನೇ ದಿನಾ ತಿಂದು  (ಬೇಜಾರು) ಬೋರ್ ಮಾಡಬೇಡಿ ಮತ್ತು ಆಹಾರವನ್ನು ಇಷ್ಟಪಡದೆ ಇರುವಂತೆ  ಮಾಡಬೇಡಿ.

ನೀವು ಸಾವಯವ ಪ್ರಮಾಣೀಕೃತ ಶಿಶು ಆಹಾರವನ್ನು ಸಹ ಖರೀದಿಸಬಹುದು.ನಮ್ಮ ಅಂಗಡಿಯಿಂದ ಮನೆಯಲ್ಲಿ ತಯಾರಿಸಿದ ತಾಜಾ ಶಿಶು ಆಹಾರ ಲಭ್ಯವಿದೆ.TOTS AND MOMS FOODS ಯಾವುದೇ ಸಂರಕ್ಷಕಗಳು, ಸೇರ್ಪಡೆಗಳು, ಸಕ್ಕರೆ ಅಥವಾ ಹಾಲಿನ ಘನವಸ್ತುಗಳನ್ನು ಬಳಸದೆ ಮಾಡಿರುವ ತಾಜಾ ಶಿಶು  ಆಹಾರಗಳು.

 

Buy Organic Baby Foods Online - Preservative, Additive, Sugar and Milk Solids Free

ಅನೇಕ ಬಗೆಯ ವ್ಯಾಪಕ ಶ್ರೇಣಿಯಲ್ಲಿ ಸಿರಿಧಾನ್ಯಗಳು, ಆರೋಗ್ಯಕರವಾದ ಮಿಶ್ರಣಗಳು ಮತ್ತು ತ್ವರಿತವಾಗಿ ತಯಾರಿಸಬಹುದಾದ ಶಿಶು ಆಹಾರಗಳು ಲಭ್ಯವಿದೆ.

ಕೆಲವು ಉತ್ಪನ್ನಗಳು ಶಿಶುಗಳ ಆಹಾರ ತಯಾರಿಸಲು ಸಹಕಾರಿ. ಅವುಗಳ ಪಟ್ಟಿ ಇಂತಿವೆ.

(Click on images to buy them)

Click image to download FREE E-Book

ಲೇಖನವನ್ನು ಓದಿದಕ್ಕೆ ಧನ್ಯವಾದಗಳು .  ಹೆಚ್ಚಿನ ಮಾಹಿತಿಗೆ Urban Kannadati FB, Urban Kannadati InstagramUrban Kannadati Family Group, Pinterest ಮತ್ತು WhatsApp ನಲ್ಲಿ ಪಡೆಯಬಹುದು. ನಮ್ಮ YouTube Channel ನ್ನು subscribe ಮಾಡಲು ಮರೆಯಬೇಡಿ. ನಿಮ್ಮ ಅನುಭವವನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹಂಚಿಕೊಳ್ಳುವುದನ್ನು ಮರೆಯಬೇಡಿ.


Spread the love
 • 109
  Shares