Spread the love
  • 1
    Share

ಮಸಾಜ್ ಎಂದ ಕೂಡಲೇ ನಿಮ್ಮ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಹಾಗು ಅನುಮಾನಗಳಿರುವುದು ಸಹಜ. ನಿಮ್ಮ ಪ್ರಶ್ನೆಗಳು  “ನಾನು ನನ್ನ ಮಗುವಿಗೆ  ಮಸಾಜ್ ಮಾಡಬಹುದೇ?”, “ನನ್ನ ಮಗುವಿಗೆ ಮಸಾಜ್ ಮಾಡುವುದು ಸುರಕ್ಷಿತವೇ?”, “ನಾನು ನನ್ನ ಮಗುವಿಗೆ  ಮಸಾಜ್ ಮಾಡುವುದನ್ನು ಪ್ರಾರಂಭಿಸುವುದು ಹೇಗೆ?”, “ನನ್ನ ಮಗುವಿಗೆ  ಮಸಾಜ್ ಮಾಡುವುದಕ್ಕೆ ಯಾವ ತೈಲ ಬಳಸಬೇಕು ?” ಎಂಬುದೆಲ್ಲದರ ಉತ್ತರಕ್ಕೆ ಈ ಲೇಖನ ಓದಿ. ಈ ಲೇಖನದಲ್ಲಿ ನಾನು ಸರಳ ಮತ್ತು ಪ್ರಮುಖವಾದ  5 ಶಿಶುಗಳ ಮಸಾಜ್ ಗೆ ಅನುಕೂಲಕರವಾಗಿರುವ ಸಲಹೆಗಳು ನೀಡಲು ಪ್ರಯತ್ನಿಸಿದ್ದೇನೆ.

5 Amazing Tips for Baby Massage, Benefits, How to, Can I, Best Oil kannada

 

ಶಿಶುಗಳ ಮಸಾಜ್ ನಿಂದ ಯಾವ ಯಾವ ಪ್ರಯೋಜನಗಳಿವೆ ?  ಮಗುವಿಗೆ ಮಸಾಜ್ ಏಕೆ ಮಾಡಬೇಕು ? ಕಾರಣಗಳೇನು? ಶಿಶುಗಳ ಮಸಾಜ್ ಮಾಡುವುದರಿಂದಾಗುವ ಲಾಭಗಳು ಯಾವುವು?

  • ನವಜಾತ ಶಿಶುಗಳ ಚರ್ಮ ಪರಿಸರಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುವುದು : ಮಗುವಿನ ಚರ್ಮದ ತಡೆಗೋಡೆ ಜನನದ ಸಮಯದಲ್ಲಿ ಚೆನ್ನಾಗಿ ವಿಕಸಿತಗೊಂಡಿರುವುದಿಲ್ಲ ಮತ್ತು ಜಲಸಂಚಯನಕ್ಕೆ (water tight) ಕನಿಷ್ಠ 15 ದಿನಗಳನ್ನು ತೆಗೆದುಕೊಳ್ಳುತ್ತದೆ. ಮಸಾಜ್ ನವಜಾತ ಶಿಶುವಿನ ಚರ್ಮವನ್ನು ಬಾಹ್ಯ ಪರಿಸರಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮಗುವಿಗೆ ಪೋಷಣೆ ಮತ್ತು ಸಂರಕ್ಷಣೆ ಮಾಡುತ್ತದೆ.
  • ಮಗುವನ್ನು ಸಾಂತ್ವನಗೊಳಿಸುತ್ತದೆ : ನಿಮ್ಮ ಮಗುವಿಗೆ ಮಸಾಜ್ ನೀಡಿದಾಗ ಕೇಂದ್ರ ನರಮಂಡಲದ ಪ್ರಚೋದನೆ ಕಡಿಮೆಯಾಗುತ್ತದೆ ಮತ್ತು ಕಾರ್ಟಿಸೋಲ್ ಎಂಬ ಒತ್ತಡ ಹಾರ್ಮೋನ್ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.
  • ಮಗುವಿನ ದೈಹಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ : ಮಸಾಜ್ ಮಾಡುವುದರಿಂದ ರಕ್ತದ ಪರಿಚಲನೆಯಾಗುವುದು, ತೂಕ ಹೆಚ್ಚಿಸುವುದು ಮತ್ತು ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
  • ತಾಯಿ ಮತ್ತು ಮಗುವಿನ ನಡುವಿನ ಮಧುರ ಬಾಂಧವ್ಯ ಬೆಸೆಯುತ್ತದೆ : ಗರ್ಭಾಶಯದಲ್ಲಿ ಒಂಬತ್ತು ತಿಂಗಳುಗಳ ಕಾಲ ಕಳೆದ ನಂತರ ಮಗುವಿಗೆ ತಾಯಿಯೊಂದಿಗೆ ಇರುವಾಗ ಸುರಕ್ಷಿತವಾಗಿರುತ್ತದೆ. ತಾಯಿ ಹಾಗು ಮಗುವಿನ ಚರ್ಮದ ಸ್ಪರ್ಶ, ತಾಯಿ ಮಗು ನಡುವೆ ಇರುವ ಬಂಧವನ್ನು ರಚಿಸಲು ಸಹಾಯ ಮಾಡುತ್ತದೆ.

ಶಿಶುಗಳ ಮಸಾಜ್ – 5 ಅದ್ಭುತ ಸಲಹೆಗಳು :

ಮಗುವಿಗೆ  ಪ್ರೀತಿ ಹಾಗು ಅನುರಾಗದಿಂದ ಮಸಾಜ್ ಮಾಡಬೇಕು. ಮಕ್ಕಳಿಗೆ ಮಸಾಜ್ ನೀಡಲು ಸಾಕಷ್ಟು ತಾಳ್ಮೆ ಮತ್ತು ಕಾಳಜಿಯನ್ನು ವಹಿಸಬೇಕು. ಬಲವಾದ ಮೂಳೆಗಳು, ಆರೋಗ್ಯಕರ ಸ್ನಾಯು ಮತ್ತು ದೈಹಿಕ ಬೆಳವಣಿಗೆಗೆ ಮಸಾಜ್ ಪ್ರಮುಖ ಪಾತ್ರ ವಹಿಸುತ್ತದೆ.

ಶಿಶುಗಳಿಗೆ ಮಸಾಜ್ ಮಾಡಲು ಆರಂಭಿಸಿದಾಗ ಬೇಕಾಗುವ ಕೆಲವು ಪ್ರಮುಖ ಸೂಕ್ತವಾದ ಉಪಯುಕ್ತ ಸಲಹೆಗಳು.

1. ಶಿಶುಗಳ ಮಸಾಜ್ ಮಾಡಲು ಅತ್ಯುತ್ತಮ ತೈಲ ಯಾವುದು? ಯಾವ ತೈಲ ಹೇಗೆ ಆಯ್ಕೆಮಾಡಬೇಕು ?

Can I massage my baby, benefits, tips, how to

ಮಗುವಿಗೆ ಮಸಾಜ್ ಕೊಡುವುದಕ್ಕೆ  ಸರಿಯಾದ ಒಳ್ಳೆಯ ಮಸಾಜ್ ತೈಲವನ್ನು ಆರಿಸುವುದು ತುಂಬಾ ಮುಖ್ಯ. ನಿಮ್ಮ ಮಗುವಿನ ಚರ್ಮ ಮತ್ತು ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಮಸಾಜ್ ತೈಲವನ್ನು ಆಯ್ಕೆ ಮಾಡಿಕೊಳ್ಳಿ. ಮಗುವಿನ ಚರ್ಮ ಕೆಲವೊಂದು ತೈಲಗಳನ್ನು  ಸುಲಭವಾಗಿ ಹೀರಿಕೊಳ್ಳುತ್ತದೆ, ಇನ್ನು ಕೆಲವು ತೈಲಗಳು ಹೀರಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ತೆಂಗಿನ ಎಣ್ಣೆ, ಸಾಸಿವೆ ಎಣ್ಣೆ, ಆಲಿವ್ ಎಣ್ಣೆ ಇತ್ಯಾದಿ ತೈಲ ವನ್ನು ಮಾಸಾಜ್ ಗೆ ಉಪಯೋಗಿಸಲಾಗುವುದು.

ಮಕ್ಕಳ ಮಸಾಜ್ ಗೆ ಬಳಸುವ ಜನಪ್ರಿಯ ತೈಲಗಳ ಕೆಲವು ಶಿಫಾರಸುಗಳು ಇಲ್ಲಿವೆ:

Virgin Coconut Oil

Mustard Oil

Olive Oil

Almond Oil

2. ಮನೆಯಲ್ಲಿ ಮಗುವಿಗೆ ಮಸಾಜ್ ಮಾಡುವುದು ಹೇಗೆ?

Can I massage my baby, benefits, tips, how to

ಮಗುವನ್ನು ಮೈ ಒರೆಸುವ ಬಟ್ಟೆಯ ಮೇಲೆ  ಅಥವಾ ನಿಮ್ಮ ತೊಡೆಯ ಮೇಲೆ ಮಲಗಿಸಿಕೊಂಡು ಬೆರಳುಗಳಿಂದ ದೀರ್ಘ ಮತ್ತು ಸೌಮ್ಯವಾಗಿ ಮಸಾಜ್ ಮಾಡಿ. ಮೃದುವಾಗಿ ಮಗುವಿನ ತಲೆ ಮಸಾಜ್ ಮಾಡಿದ ನಂತರ ದೇಹದ ಇತರ ಭಾಗಗಳಿಗೆ ಮಸಾಜ್ ಮಾಡಬೇಕು. ಕೈ ತೋಳು, ಭುಜಗಳಿಗೆ ಮಾಲೀಶು ಮಾಡಿ. ಮಗುವಿನ ಅಂಗಮರ್ದನ (massage) ತೋಳು ತದನಂತರ ಸೊಂಟದಿಂದ ತೊಡೆಯವರೆಗೆ, ತೊಡೆಯಿಂದ ಪಾದದವರಗೆ ಮಸಾಜ್ ಮಾಡಬೇಕು. ಹೊಟ್ಟೆಯ ಮೇಲೆ ವೃತ್ತಾಕಾರದ ಚಲನೆಯಿಂದ ಮಸಾಜ್ ಮಾಡಿ.

3. ಮಗುವಿಗೆ ಮಸಾಜ್ ಮಾಡಲು ಉತ್ತಮ ಸಮಯ ಯಾವುದು?

Can I massage my baby, benefits, tips, how to

ದಿನಾ ಒಂದೇ ಸಮಯವನ್ನು ಅನುಸರಿಸಿ. ನಿಮ್ಮ ಮಗುವಿಗೆ  ಆಹಾರ ಕೊಟ್ಟ ನಂತರ ಎರಡು ಆಹಾರಗಳ ಸಮಯದ ಮಧ್ಯದ ಸಮಯವನ್ನು ಆಯ್ದುಕೊಳ್ಳಲು ಪ್ರಯತ್ನಿಸಿ. ಇದರಿಂದ ಮಗುವಿಗೆ ಹೊಟ್ಟೆ ತುಂಬಾ ತುಂಬಿರುವುದಿಲ್ಲ  ಅಥವಾ ತುಂಬಾ ಹಸಿವಿರುವುದಿಲ್ಲ. ಶಿಶುಗಳು ನಿತ್ಯ ಕ್ರಮವನ್ನು ಪ್ರೀತಿಸುತ್ತಾರೆ, ಹಾಗಾಗಿ ನೀವು ಒಂದೇ ಸಮಯದಲ್ಲಿ ಮಸಾಜ್ ಮಾಡಿದರೆ ಮಗು ಹೆಚ್ಚು ಸುರಕ್ಷತೆ ಮತ್ತು ಸಂತೋಷವನ್ನು ಅನುಭವಿಸುತ್ತದೆ.

4. ಮಗುವಿಗೆ  ಮಸಾಜ್ ಮಾಡಲು ಸ್ಥಳವನ್ನು ಹೇಗೆ ಆಯ್ಕೆ ಮಾಡುವುದು?

Can I massage my baby, benefits, tips, how to

ಮಗುವಿಗೆ  ಮಸಾಜ್ ಮಾಡುವಾಗ ಅತ್ಯದ್ಭುತವಾದ ಹಾಗು ಆರಾಮದಾಯಕವಾದ ಸ್ಥಳವನ್ನು ಆಯ್ಕೆ ಮಾಡುವುದು ಅತ್ಯಗತ್ಯ. ನಿಮ್ಮ ಮುಖ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಮಗುವನ್ನು ಮಲಗಿಸಿಕೊಳ್ಳಿ. ಮಸಾಜ್ ಮಾಡುವ ಸ್ಥಳವು ಬೆಚ್ಚಗಿರಬೇಕು ಮತ್ತು ಬೆಳಕು ತುಂಬಾ ಪ್ರಕಾಶಮಾನವಾಗಿಬಾರದೆಂದು ಖಚಿತಪಡಿಸಿಕೊಳ್ಳಿ. ಮಕ್ಕಳು ಶಾಂತವಾಗಿರುವಾಗ ವಿಶ್ರಾಂತಿ ಪಡೆದಾಗ ಮಸಾಜ್ ಮಾಡಬೇಕು ತಾಯಿಗೂ ಆರಾಮದಾಯಕವಾಗಿರುವ ಸಮಯ ಆಯ್ಕೆ ಮಾಡುವುದು ಒಳ್ಳೆಯದು.

5. ಮಸಾಜ್ ಮಾಡುವುದರಿಂದ ಕಿರಿ ಕಿರಿ ಮಾಡುವ ಮಕ್ಕಳನ್ನು ಶಾಂತಗೊಳಿಸಬಹುದೆ ?

Can I massage my baby, benefits, tips, how to

ಮಸಾಜ್ ಮಾಡುವುದರಿಂದ ಮಕ್ಕಳನ್ನು ಸಾಂತ್ವನಗೊಳಿಸಬಹುದು ಮತ್ತು ಮಕ್ಕಳ ಅಳು ಕಡಿಮೆ ಮಾಡಬಹುದು. ಮಸಾಜ್ ಮಾಡುವುದರಿಂದ  ತಾಯಿ ಹಾಗು ಶಿಶುಗಳಲ್ಲಿ  ಆಕ್ಸಿಟೋಸಿನ್ ಹಾರ್ಮೋನ (oxytocin harmone) ಉತ್ಪತ್ತಿ  ಹೆಚ್ಚಿತ್ತದೆ,  ಆಕ್ಸಿಟೋಸಿನ್ ಹಾರ್ಮೋನ ಮಗು ಶಾಂತವಾಗಿರಲು ಮತ್ತು ವಿಶ್ರಾಂತಿ ನೀಡುವಂತೆ ಮಾಡುತ್ತದೆ.

ಮಸಾಜ್ ಬಗ್ಗೆ ಇರುವ ತಪ್ಪು ಕಲ್ಪನೆಗಳು :

ಶಿಶುಗಳ ಮಸಾಜ್ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ, ಪೋಷಕರು ವಿವಿಧ ಮೂಲಗಳಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಕೆಲವೊಮ್ಮೆ ಇದು ವಿಶ್ವಾಸಾರ್ಹ ಮೂಲಗಳಿಂದ ಬರುತ್ತದೆ ಆದರೆ ಬಹಳ ಬಾರಿ ಇದು ತುಂಬಾ ತಪ್ಪಾಗಿರಬಹುದು. ಸತ್ಯವೇನೆಂದು ತಿಳಿಯುವುದು ಬಹಳ ಮುಖ್ಯ.

ಮಿಥ್ಯ 1: ತೈಲ ಮಸಾಜ್ ಶಿಶುಗಳಿಗೆ ಮುಖ್ಯವಲ್ಲ

ಸತ್ಯಾಂಶ :  ಇದು ನಿಜವಲ್ಲ ಮಗುವಿಗೆ ತೈಲ ಮಸಾಜ್ ಬಹಳ ಮುಖ್ಯ, ಮಸಾಜ್ ನಿಂದ ದೇಹವನ್ನು ಸಡಿಲಗೊಳಿಸುತ್ತದೆ ಹಾಗು ರಕ್ತ ಪರಿಚಲನೆ ಸುಧಾರಿಸುತ್ತದೆ.  ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ ಮತ್ತು ಕೀಲುಗಳ ಚಲನೆಯನ್ನು ಸುಧಾರಿಸುತ್ತದೆ.

ಮಿಥ್ಯ 2: ಮಗುವಿನ  ಎಲುಬುಗಳನ್ನು ನೇರವಾಗಿಸಲು ಮಸಾಜ್ ಮಾಡಬೇಕು.

ಸತ್ಯಾಂಶ : ಅಂಗಮರ್ದನ/ಮಸಾಜ್ ಮಾಡುವುದು ಎಲುಬುಗಳನ್ನು ನೇರವಾಗಿಸುವುದಕ್ಕಲ್ಲ. ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಸ್ನಾಯುಗಳನ್ನು ನಿರ್ಮಿಸುತ್ತದೆ.

ಮಿಥ್ಯ 3: ಮಾಲಿಶ್ ಮಾಡುವವರ ಕೈಯಲ್ಲಿ ಮಸಾಜ್ ಮಾಡಿಸುವುದು ಪರಿಣಾಮಕಾರಿ

ಸತ್ಯಾಂಶ : ಮಾಲಿಶ್ ಮಾಡುವವರು ಮಸಾಜ್ ಮಾಡುವ ಅನುಭವವನ್ನು ಹೊಂದಿರುತ್ತಾರೆ ಎಂಬುದು ನಿಜ, ಆದರೆ ಅನನುಭವಿಗಳ ಮಸಾಜ್ ಒತ್ತಡದಿಂದ ಶಿಶುಗಳಿಗೆ ಹಾನಿಯಾಗಬಹುದು ಮತ್ತು ಗಾಯಗೊಳಿಸಬಹುದು.

ಶಿಶುಗಳ ಮಸಾಜ್ – 5 ಅದ್ಭುತ ಸಲಹೆಗಳು: ಈ ವೀಡಿಯೊ ನೋಡಿ

ನಮ್ಮ ಲೇಖನ/ರೆಸಿಪಿ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page ಮತ್ತು YouTube Channel ನಲ್ಲಿ ಭೇಟಿ ಮಾಡಿ.


Spread the love
  • 1
    Share