Spread the love
  • 8
    Shares

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಅಭಿವೃದ್ಧಿಪಡಿಸುವ 10 ಸಲಹೆಗಳು

ಬಾಲ್ಯದಿಂದಲೇ ಮಕ್ಕಳಿಗೆ ಅನೇಕ ಪದ್ಧತಿಗಳನ್ನು ರೂಢಿಸುವುದು ಒಳ್ಳೆಯದು. ಮಕ್ಕಳ ಆರಂಭಿಕ ವರ್ಷಗಳಲ್ಲಿ ರಾತ್ರಿ ಬೇಗ ನಿದ್ರೆ ಮಾಡುವುದು, ಓದುವುದು ಆರೋಗ್ಯಕರವಾದ ಅಭ್ಯಾಸ. ಮೂಲಭೂತ ಕೌಶಲಗಳನ್ನು ಅಭಿವೃದ್ಧಿಗೊಳಿಸಲು ಉತ್ತಮವಾದ ಚಟುವಟಿಕೆ. ಓದುವ ಅಭ್ಯಾಸ ಮೆದುಳಿನ ಬೆಳವಣಿಗೆಗೆ, ಅಭ್ಯಾಸಕ್ಕೆ ಮತ್ತು  ಭಾಷಾ ಕೌಶಲಗಳನ್ನು ಸುಧಾರಣೆ ಮಾಡಲು ಒಳ್ಳೆಯದು.  ಯಾವುದೇ ವಯಸ್ಸಿನ ಮಕ್ಕಳಿಗೆ ಓದುವುದನ್ನು ಪ್ರೋತ್ಸಾಹಿಸುವುದು ಅವರ ಭವಿಷ್ಯಕ್ಕೆ ಉತ್ತಮ. ಓದುವ ಅಭ್ಯಾಸದಿಂದ ಪ್ರಪಂಚ ಮತ್ತು ಸಮಾಜದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದಕ್ಕೆ ಸಹಾಯವಾಗುತ್ತಕದೆ.

ಪೋಷಕರಿಗೆ ಓದುವ ವಿಷಯಕ್ಕೆ ಸಂಬಂಧಿಸದಂತೆ ಹಲವಾರು ಪ್ರಶ್ನೆಗಳು ಮತ್ತು ಅನುಮಾನಗಳಿರುತ್ತವೆ. ಕೆಲವು ಕೆಳಗೆ ನೀಡಲಾಗಿದೆ –

ಮಗುವಿಗೆ ಓದುವುದನ್ನು ಯಾವಾಗ ಪ್ರಾರಂಭಿಸಬೇಕು?

ಮಗುವಿಗೆ ಓದುವ ಅಭ್ಯಾಸವನ್ನು ಪ್ರಾರಂಭಿಸುವುದು ಹೇಗೆ?

ಯಾವ ಪುಸ್ತಕಗಳನ್ನು ಯಾವ ವಯಸ್ಸಿನಲ್ಲಿ ಪರಿಚಯಿಸಬೇಕು?  ಸರಿಯಾದ ವಿಧಾನ ಯಾವುದು?

ಓದುವ ಅಭ್ಯಾಸ ಪ್ರಾರಂಭಿಸಲು ಯಾವ ಪುಸ್ತಕಗಳ ಆಯ್ಕೆಮಾಡಬೇಕು ?

ಉತ್ತಮವಾದ ಓದುವ ಅಭ್ಯಾಸವನ್ನು ಬೆಳೆಸಲು ನಾವು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದೆಂದು ಪೋಷಕರಲ್ಲಿ ಅನೇಕ ಪ್ರಶ್ನೆಗಳಿರುತ್ತದೆ. ಪ್ರತಿ ಮಗುವಿನ ಆಯ್ಕೆ ವಿಭಿನ್ನವಾಗಿರುತ್ತದೆ, ಸರಿಯಾದ ರೀತಿಯ ಓದುವ ಅಭ್ಯಾಸವನ್ನು ರೂಢಿಸುವುದರಿಂದ ಧನಾತ್ಮಕ ಬದಲಾವಣೆ ಬರುವುದಕ್ಕೆ ಉಪಯೋಗವಾಗುತ್ತದೆ.

10 Ways to Develop Reading Habbits in Babies & Kids child hindi kannada

ಮಕ್ಕಳಲ್ಲಿ ಓದುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದಕ್ಕೆ ಕೆಲವು ಸೂಚನೆಗಳನ್ನು  ನಾವು ನೀಡಿದ್ದೇವೆ-

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಅಭಿವೃದ್ಧಿಪಡಿಸುವ 10 ಸಲಹೆಗಳು

1. ದಿನಾ ಓದುವುದು

10 Ways to Develop Reading Habbits in Babies & Kids child hindi kannada

ಮಕ್ಕಳಿಗೆ ಓದುವ ಅಭ್ಯಾಸವನ್ನು ನಿಯಮಿತವಾಗಿ ರೂಪಿಸಬೇಕು. ಹೇಗೆ ಊಟ ಮಾಡುವುದು, ರಾತ್ರಿ ಮಲಗುವುದು, ಬೆಳಗ್ಗೆ ಏಳುವುದು ಅಭ್ಯಾಸ ಮಾಡಿಸುತ್ತೆವೋ ಹಾಗೆ ನಾವು ಅವರಿಗೆ ಓದುವ ಅಭ್ಯಾಸವನ್ನು ಕೂಡ ರೂಪಿಸಲು ಸಹಾಯ ಮಾಡಬೇಕು. ನಿಮ್ಮ ಸೌಕರ್ಯದ ಸಮಯಕ್ಕೆ ಅನುಗುಣವಾಗಿ ರಾತ್ರಿ ನಿದ್ರೆಯ ಮೊದಲು ಓದಬಹುದು ಅಥವಾ ಬೇರೆ ಅನುಕೂಲಕರವಾದ ಸಮಯವನ್ನು ಆಯ್ಕೆ ಮಾಡಬಹುದು.


2. ಓದುವುದಕ್ಕೆ ಸೂಕ್ತ ಸ್ಥಳದ ಆಯ್ಕೆಮಾಡಿ

10 Ways to Develop Reading Habbits in Babies & Kids child hindi kannada

ಓದುವ ಜಾಗವು ಮಂಚದ ಹತ್ತಿರ, ನೇರ ಬೆಳಕು ಬರುವ ಸ್ಥಳ ಅಥವಾ ಅಧ್ಯಯನದ ಕೋಣೆಯಲ್ಲಿ ಓದ ಬಹುದು. ಉತ್ತಮ ಬೆಳಕಿನಲ್ಲಿ ಓದಿದರೆ ಕಣ್ಣುಗಳಿಗೆ ಹೆಚ್ಚು ಒತ್ತಡವಾಗುವುದಿಲ್ಲ.


3. ವಿಭಿನ್ನ ಪ್ರಕಾರದ ವೈವಿಧ್ಯ ಪುಸ್ತಕಗಳ ಪರಿಚಯ

10 Ways to Develop Reading Habbits in Babies & Kids child hindi kannada

ಅನೇಕ ಪ್ರಕಾರದ ಎಲ್ಲಾ ರೀತಿಯ ಪುಸ್ತಕಗಳು ಮಾರುಕಟ್ಟೆಯಲ್ಲಿ ಮತ್ತು ಆನ್ಲೈನ್ ​​ಸ್ಟೋರ್ ಗಳಲ್ಲಿ ಲಭ್ಯವಿದೆ. ಮಕ್ಕಳ ವಯಸ್ಸು ಮತ್ತು  ಬುದ್ಧಿವಂತಿಕೆಗೆ ಅನುಗುಣವಾಗಿ ಪುಸ್ತಕಗಳ ಆಯ್ಕೆ ಮಾಡಬೇಕು. ಪುಸ್ತಕಗಳ ಬಗ್ಗೆ ಅನ್ವೇಷಿಸಲು ಮತ್ತು ಪರಿಚಯಿಸುವ ಅಗತ್ಯವಿದೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಪುಸ್ತಕವನ್ನು ಆಯ್ಕೆ ಮಾಡಬೇಕು. ಮಕ್ಕಳಿಗೆ ಯೋಗ್ಯವಾಗಿ ಇಲ್ಲದ ಅಥವಾ ಪುಸ್ತಕದ ಪ್ರಕಾರ ಸರಿ ಇಲ್ಲದಿದ್ದರೆ ಓದುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

ಶಿಶುಗಳಿಗೆ – ಶಿಶುಗಳಿಗೆ ಬಣ್ಣ ಬಣ್ಣದ ಚಿತ್ರ ಇರುವ ಪುಸ್ತಕಗಳು ಅಥವಾ ಪಾಪ್ ಅಪ್ ಪುಸ್ತಕಗಳು ಸೂಕ್ತ. ಮಕ್ಕಳ ಪುಸ್ತಕಗಳು ಹೆಚ್ಚು ಪ್ರಕಾಶಮಾನವಾಗಿರುವುದು, ಮಕ್ಕಳಿಗೆ ಚಿತ್ರಗಳು ಮತ್ತು ಬಣ್ಣಗಳು ಆಕರ್ಷಿಕವಾಗಿರುತ್ತದೆ ಹಾಗು ಓದುವ ಅಭ್ಯಾಸವನ್ನು ಬೆಳೆಸಲು ಅನುಕೂಲಕರ.

1 ರಿಂದ 3 ವರ್ಷಗಳ ಶಿಶುಗಳಿಗೆ  – ಅಂಬೆಗಾಲಿಡುವ ಮಕ್ಕಳಿಗೆ ಚಿಕ್ಕ ಅಕ್ಷರಗಳನ್ನು ಹೊಂದಿರುವ ಚಿತ್ರಗಳ ಪುಸ್ತಕಗಳನ್ನು ಪರಿಚಯಿಸಬಹುದು. ಪದಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸರಿಯಾದ ಅಕ್ಷರಗಳ ಶಬ್ದಗಳ phonic ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

3 ರಿಂದ 5 ವರ್ಷಗಳ ಪೂರ್ವ ಶಾಲಾ ಮಕ್ಕಳಿಗೆ – ಕಥೆಗಳು, ವಿವರಣೆಗಳು ಮತ್ತು ಸಂವಾದಾತ್ಮಕ ಪುಸ್ತಕಗಳು ಪರಿಚಯಿಸುವುದಕ್ಕೆ ಸೂಕ್ತ ವಯಸ್ಸು. ಓದುವ ಅಭ್ಯಾಸ ಇನ್ನಷ್ಟು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುವುದು. ಓದುವುದು ಮೋಜಿನ ಅನುಭವ ನೀಡುವುದು.

5 ರಿಂದ 10 ವರ್ಷದ ಮಕ್ಕಳಿಗೆ – ಈ ವಯಸ್ಸಿನ ಮಕ್ಕಳು ವಿವಿಧ ಬಗೆಯ ಪುಸ್ತಕಗಳನ್ನು ಓದಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಕಾಮಿಕ್, ಕಥೆ ಪುಸ್ತಕ –ನೈಜ  / ಕಾಲ್ಪನಿಕ ಪುಸ್ತಕಗಳನ್ನು ಸುಲಭವಾಗಿ ಪರಿಚಯಿಸಬಹುದು. ಪುಸ್ತಕವನ್ನು ಮಕ್ಕಳಿಗೆ ಕೊಡುವ ಮೊದಲು ದಯವಿಟ್ಟು ಎಚ್ಚರಿಕೆಯಿಂದ ಲೇಖಕರ ಆಯ್ಕೆ ಮಾಡಿ.


4. ಮಕ್ಕಳು ಪುಸ್ತಕ ಓದುವುದನ್ನು ಆನಂದಿಸಿಲು ಕಲಿಯಬೇಕು

10 Ways to Develop Reading Habbits in Babies & Kids child hindi kannada

ಪುಸ್ತಕ  ಓದುವುದು ಮತ್ತು ಕಥೆಗಳನ್ನು ಹೇಳುವುದು ಒಂದು ಕಲೆ. ಕಲಾತ್ಮಕವಾಗಿ ಓದಿದರೆ ಮಕ್ಕಳು ಓದುವುದನ್ನು ಆನಂದಿಸುತ್ತಾರೆ. ಮಕ್ಕಳಿಗೆ ಕೆಲವು ಕಥೆಗಳನ್ನು ಓದಲು ಪ್ರಯತ್ನಿಸಿ. ಅಕ್ಷರಗಳ ಶಬ್ದ ಪ್ರಕಾರದ ಅನುಗುಣವಾಗಿ ಧ್ವನಿಯನ್ನು ಬದಲಿಸುವ ಮೂಲಕ ಆಹ್ಲಾದಿಸುವಂತೆ ಮಾಡಬೇಕು. ಇನ್ನಷ್ಟು ಸಂಪರ್ಕ ಸಾಧಿಸಲು ಕಥೆಗಳಿಗೆ ವಿನೋದವನ್ನು ನೀಡುವಂತೆ ಹೇಳಬೇಕು.


5. ಮಕ್ಕಳಿಗೆ ನೀವೇ ಮಾದರಿಯಾಗಬೇಕು :

10 Ways to Develop Reading Habbits in Babies & Kids child hindi kannada

ಪೋಷಕರಿಗೆ ಪುಸ್ತಕಗಳನ್ನು ಓದುವ ಅಭ್ಯಾಸ ವಿಲ್ಲದಿದ್ದರೆ ಮಗುವಿಗೆ  ಓದುವ ಅಭ್ಯಾಸವನ್ನು ಕಳಿಸುವುದು ಸುಲಭವಲ್ಲ. ಪೋಷಕರಾಗಿ ಅವರ ಮುಂದೆ ಓದುವುದು ನಮ್ಮ ಕರ್ತವ್ಯ, ಆದ್ದರಿಂದ ನಾವು ಮಕ್ಕಳಿಗೆ ಮಾದರಿಯಂತೆ ಕಲಿಯುವುದಕ್ಕೆ ಹಾಗು ಓದುವ ಅಭ್ಯಾಸವನ್ನು ಪ್ರೋತ್ಸಾಹಿಸಲು ನಾವು ಓದಬೇಕು. ಮಕ್ಕಳು ಗಮನಿಸುತ್ತಾ , ನೋಡುತ್ತಾ ಕಲಿಯುತ್ತಾರೆ ಹಾಗೆ ಕುಟುಂಬದಲ್ಲಿ ಉತ್ತಮವಾದ ಓದುವ ಅಭ್ಯಾಸವನ್ನು ಮೆಚ್ಚಲಾಗುವುದು.


6. ಪುಸ್ತಕಗಳ ಬಗ್ಗೆ ಚರ್ಚೆ ಮಾಡುವುದು

10 Ways to Develop Reading Habbits in Babies & Kids child hindi kannada

ಮಕ್ಕಳಿಗೆ ಕಥೆಗಳಲ್ಲಿ ಬರುವ ಪಾತ್ರಗಳು ಓದುವ ಇತರ ಮಾಹಿತಿಯನ್ನು ವಿವರಿಸುವುದನ್ನು ಇಷ್ಟಪಡುತ್ತಾರೆ. ಓದುವ ಅಭ್ಯಾಸವನ್ನು ಜೀವಂತವಾಗಿರುವಂತೆ ಮಾಡಲು ಪುಸ್ತಕಗಳ ಕುರಿತು ನಿಯಮಿತ ಚರ್ಚೆ ಸಹಾಯ ಮಾಡುತ್ತದೆ. ಕುಟುಂಬದಲ್ಲಿ  ಓದುವ ಅಭ್ಯಾಸವು ಚರ್ಚೆಗಳಿಗೆ ಹೆಚ್ಚು ಅವಕಾಶಗಳನ್ನ ಉತ್ತೇಜಿಸುತ್ತದೆ.


7. ಮಕ್ಕಳನ್ನು ಗ್ರಂಥಾಲಯಕ್ಕೆ ಕರೆದುಕೊಂಡು ಹೋಗಿ

10 Ways to Develop Reading Habbits in Babies & Kids child hindi kannada

ಪುಸ್ತಕಗಳ ಕುಟುಂಬವನ್ನು ಪರಿಚಯಿಸಲು ಗ್ರಂಥಾಲಯ ಸೂಕ್ತ ಸ್ಥಳ. ಗ್ರಂಥಾಲಯದಲ್ಲಿ ಒಳ್ಳೆಯ ಪುಸ್ತಕಗಳನ್ನು ನೋಡಬಹುದು ಮತ್ತು ಮಕ್ಕಳು ತಮ್ಮ ಅಭಿರುಚಿ ಮತ್ತು ಆಸಕ್ತಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ  ವಿಭಿನ್ನ ಪ್ರಕಾರದ ಪುಸ್ತಕಗಳನ್ನು ಇನ್ನಷ್ಟು ಅನ್ವೇಷಿಸಲು ಗ್ರಂಥಾಲಯ ಸಹಾಯ ಮಾಡುತ್ತದೆ. ಮಕ್ಕಳು ಗ್ರಂಥಾಲಯದಲ್ಲಿ ಓದುವ ಅನೇಕ ಜನರನ್ನು ನೋಡಿ ಅವರಿಗೆ ಓದುವ ಆಸಕ್ತಿ ಹೆಚ್ಚಾಗುತ್ತದೆ.


8. ಮಕ್ಕಳಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ

10 Ways to Develop Reading Habbits in Babies & Kids child hindi kannada

ಮಕ್ಕಳ ಹುಟ್ಟುಹಬ್ಬಕ್ಕೆ ಅಥವಾ ವಿಶೇಷ ಸಂಧರ್ಬಕ್ಕೆ ಆಶ್ಚರ್ಯಕರವಾದ ಉಡುಗೊರೆಗಳನ್ನು ಪಡೆಯಲು ಇಷ್ಟಪಡುತ್ತಾರೆ. ಪುಸ್ತಕವನ್ನು ಉಡುಗೊರೆಯಾಗಿ ನೀಡಲು ಪ್ರಯತ್ನಿಸಿ. ಮಕ್ಕಳ ಸ್ನೇಹಿತರಿಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಮೌಲ್ಯವನ್ನು ತಿಳಿಸಿಕೊಡಲು ಸಹಾಯವಾಗುವುದು. ಪ್ರತಿ ಬಾರಿ ಅವರು ಉಡುಗೊರೆಯಾಗಿ ಪಡೆಯುವ ಪುಸ್ತಕವನ್ನು ಸಂತೋಷದ ಕ್ಷಣವಾಗಿ ಮಾಡಿ.


9. ಪುಸ್ತಕಗಳನ್ನು ಮಕ್ಕಳಿಗೆ ಸಿಗುವ ಹಾಗೆ ಇಡಿ

10 Ways to Develop Reading Habbits in Babies & Kids child hindi kannada

ಮಕ್ಕಳು ತಮಗೆ ಇಷ್ಟವಾಗುವ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಲಿ. ಪುಸ್ತಕದ ಕಪಾಟನ್ನು ಮಕ್ಕಳಿಗೆ ಸಿಗುವ ರೀತಿ      ಯಾವ ಪುಸ್ತಕವನ್ನು ಹೆಚ್ಚು ಆಕರ್ಷಿಸುತ್ತದೆ ಎಂಬುದನ್ನು ತಿಳಿಯಲು ಸಹಾಯವಾಗುವುದು. ಆಯ್ಕೆ ಮಾಡುವ ಸ್ವಾತಂತ್ರ್ಯ ಮಕ್ಕಳಿಗೆ ಇರುತ್ತದೆ. ನೀವು ಸಣ್ಣ ಗ್ರಂಥಾಲಯವನ್ನು ಸಹ ಮಾಡಬಹುದು ಅಥವಾ ಪುಸ್ತಕದ ಕಪಾಟಿನಲ್ಲಿ ಪುಸ್ತಕಗಳನ್ನು ಹೆಚ್ಚು ಗೋಚರಿಸುವ ಹಾಗೆ ಮತ್ತು ತಲುಪಲು ಸಾಧ್ಯವಾಗುವ ರೀತಿಯಲ್ಲಿ ಏರ್ಪಾಡು ಮಾಡುವುದು ಉತ್ತಮ ಓದುವ ಅಭ್ಯಾಸಕ್ಕೆ ಒಳ್ಳೆಯದು


10. ಮಕ್ಕಳು ಕಥೆ ಹೇಳುವುದನ್ನು ಪ್ರೋತ್ಸಾಹಿಸ ಬೇಕು

10 Ways to Develop Reading Habbits in Babies & Kids child hindi kannada

ಕಥೆ ಹೇಳುವಿಕೆಯು ಓದುವ ಮೌಖಿಕ ರೂಪವಾಗಿದೆ.  ಕಥೆ ಹೇಳುವುದು ಒಂದು ಕಲೆ ಮತ್ತು ಮಕ್ಕಳು ಅವರ ಕಾಲ್ಪನಿಕ ಪ್ರಪಂಚವನ್ನು ಕಥೆಯ ರೂಪದಲ್ಲಿ ಹಂಚಿಕೊಳ್ಳಲು ಸುಲಭವಾಗುತ್ತದೆ. ಸೃಜನಾತ್ಮಕತೆಯ ಕಡೆಗೆ ಮಕ್ಕಳನ್ನು ಆಕರ್ಷಿಸುವುದು ಓದುವ ಹಾಗು ವಿವರಿಸುವ ಅಭ್ಯಾಸ. ಪೋಷಕರಾಗಿ, ನಾವು ಯಾವಾಗಲೂ ಕಥೆ ಹೇಳುವ ಹವ್ಯಾಸವನ್ನು ಪ್ರೋತ್ಸಾಹಿಸಬೇಕು ಮತ್ತು ತಮ್ಮದೇ ಆದ ಸ್ವಂತ ಕಥೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕು !

ಮಕ್ಕಳಲ್ಲಿ ಓದುವ ಹವ್ಯಾಸವನ್ನು ಅಭಿವೃದ್ಧಿಪಡಿಸುವ 10 ಸಲಹೆಗಳು

ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page  & YouTube Channel ನಲ್ಲಿ ಭೇಟಿ ಮಾಡಿ.


Spread the love
  • 8
    Shares