Spread the love

ಬೇಸಿಗೆಯಲ್ಲಿ ಶಿಶುಗಳು ಮತ್ತು ಮಕ್ಕಳ ಆರೈಕೆ | Summer Care for Babies in Kannada

ಪೋಷಕರಿಗೆ ಹವಾಮಾನ ಬದಲಾವಣೆಯಾದಾಗ ಅನೇಕ ತೊಂದರೆಯನ್ನು ಅನುಭವಿಸಬೇಕಾಗುವುದು. ವಾತಾವರಣ ಬದಲಾವಣೆಯಿಂದ ಪ್ರಕೃತಿಯಲ್ಲಿ ಹೆಚ್ಚಾಗಿ ವಿವಿಧ ರೀತಿಯ ಸಾಂಕ್ರಾಮಿಕ ಕಾಯಿಲೆಗಳು ಬರುವುದು. ಶಿಶುಗಳು ಮತ್ತು ಮಕ್ಕಳು ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವುದರಿಂದ ಹವಾಮಾನ-ಸಂಬಂಧಿತ ಸೋಂಕುಗಳು ಬೇಗ ಬರುವ ಸಾಧ್ಯತೆ ಹೆಚ್ಚು.ನಾವು ಈಗ ಬೇಸಿಗೆ ಕಾಲದಲ್ಲಿದ್ದೇವೆ ಮಕ್ಕಳಿಗೆ ವಿಶೇಷ ಕಾಳಜಿಯನ್ನು ವಹಿಸಲು ಎಲ್ಲಾ ಪೋಷಕರಲ್ಲಿ ವಿನಂತಿ.

10 Summer Care Tips for babies and kids

ಶಿಶುಗಳು ಮತ್ತು ಮಕ್ಕಳಿಗಾಗಿ ಬೇಸಿಗೆಯಲ್ಲಿ ವಿಶೇಷ ಆರೈಕೆ ಮತ್ತು ಕಾಳಜಿ ಅತ್ಯಗತ್ಯ, ನಿರ್ಲಕ್ಷಿಸಿದರೆ ಬೇಗ ಅನಾರೋಗ್ಯಕ್ಕೆ ಒಳಗಾಗಬಹುದು ಮತ್ತು ಚರ್ಮದ ಕಾಯಿಲೆಗಳು ಅಥವಾ ಯಾವುದೇ ರೀತಿಯ ಸೋಂಕುಗಳಿಂದ ಬಳಲಬಹುದು. ಎಲ್ಲಾ ತಾಯಂದಿರು ತಮ್ಮ ಮಕ್ಕಳಿಗೆ ತಿಳಿದಿರುವ ಉತ್ತಮವಾದ ಕಾಳಜಿ ವಹಿಸುತ್ತಾರೆ ಎಂದು ತಿಳಿದಿದೆ, ನೀವು ಹೊಂದಿರುವ ಹೆಚ್ಚುವರಿ ಪ್ರೀತಿ ಮತ್ತು ಕಾಳಜಿಯನ್ನು ನಾವು ಪುನರಾವರ್ತಿಸುತ್ತಿದ್ದೇವೆ!

ಬೇಸಿಗೆಯಲ್ಲಿ ಶಿಶುಗಳು ಮತ್ತು ಮಕ್ಕಳ ಆರೈಕೆ

(ಈ ಲೇಖನದ ಕೊನೆಯಲ್ಲಿರುವ ವೀಡಿಯೊ ನೋಡಲು ಮರೆಯದಿರಿ)

10 Summer Care Tips for babies and kids


1. ಸರಿಯಾದ ರೀತಿಯ ಬಟ್ಟೆಗಳನ್ನು/ ಉಡುಪುಗಳ ಆಯ್ಕೆ 

10 Summer Care Tips for babies and kids

ಮಕ್ಕಳಿಗೆ ಬೇಸಿಗೆಗೆ 100% ಹತ್ತಿ ಬಟ್ಟೆಗಳ ಆಯ್ಕೆ ಮಾಡುವುದು ಒಳ್ಳೆಯದು. ಲೇಬಲ್ ಗಳನ್ನು ಸರಿಯಾಗಿ ನೋಡಿ ಮತ್ತು ಹತ್ತಿ ಬಟ್ಟೆ ಜೊತೆ ಮಿಶ್ರ ರೀತಿಯ ಬಟ್ಟೆಗಳನ್ನು ಆಯ್ಕೆಮಾಡಬೇಡಿ. ಕೇವಲ ಹತ್ತಿ ಮಾತ್ರ ದೇಹದ ಉಷ್ಣವನ್ನು ಮತ್ತು ಬೆವರನ್ನು  ಹೀರಿಕೊಳ್ಳುವುದು. ದೇಹ ತಂಪಾಗಿರಿಸಲು ಹತ್ತಿಬಟ್ಟೆ ಗುಣಮಟ್ಟವನ್ನು ಹೊಂದಿದೆ. ಶಿಶುಗಳಿಗೆ ಹತ್ತಿ (ಕ್ಯಾಪ್) ಟೋಪಿ ಅಥವಾ ಕುಲಾವಿ ಉಪಯೋಗಿಸಬೇಕು. ಮಕ್ಕಳಿಗೆ ಸಡಿಲವಾದ ಉಡುಪು ಹಾಕಬೇಕು,ಬಿಗಿಯಾದ ಉಡುಪುಗಳನ್ನು ತಪ್ಪಿಸಿ. ಮಗುವನ್ನು ವ್ರಾಪ್ ಮಾಡಲು ಹಗುರವಾದ ಮಸ್ಲಿನ್ ಅಥವಾ ತೆಳುವಾದ ಬಿಳಿ ಹತ್ತಿಯ ಬಟ್ಟೆ ಮಾತ್ರ ಬಳಸಿ. ಬಿಸಾಡುವ ಡೈಪರ್ ಬದಲು ಮೆತ್ತಗಿರುವ ಹತ್ತಿ ಬಟ್ಟೆಗಳನ್ನು ಉಪಯೋಗಿಸಿ ಮತ್ತು ನಿಯಮಿತವಾಗಿ ಬದಲಿಸುವುದು ಮತ್ತು ನೋಡಿಕೊಳ್ಳುವುದು ಮರೆಯಬಾರದು.


2. ಜಲಸಂಚಯನ (hydration ಅಥವಾ ಸಾಕಷ್ಟು ನೀರು/ ದ್ರವ ರೂಪದ ಆಹಾರ ಸೇವನೆ ಮಾಡುವುದು)

10 Summer Care Tips for babies and kids

ನಮ್ಮ ದೇಹವ ಬದುಕುಳಿಯಲು ನೀರಿನ ಮೇಲೆ ಅವಲಂಬಿತವಾಗಿರುತ್ತದೆ. ಜೀವಕೋಶಗಳನ್ನು ಸರಿಪಡಿಸಲು ಮತ್ತು ಸರಿಯಾಗಿ ಕೆಲಸ ಮಾಡಲು ನೀರು ಬಹಳ ಮುಖ್ಯ. ಬೇಸಿಗೆ ಕಾಲದಲ್ಲಿ ದೇಹಕ್ಕೆ ಹೆಚ್ಚಿನ ನೀರಿನ ಅಗತ್ಯವಿರುತ್ತದೆ. ಶಿಶುಗಳು ತಾಯಿಯ ಹಾಲು ಜಲಸಂಚಯನಕ್ಕೆ ಸೂಕ್ತ. ಮಕ್ಕಳಿಗೆ ಜಾಸ್ತಿ ನೀರು ಕುಡಿಯುವುದಕ್ಕೆ ಪ್ರೋತ್ಸಾಹಿಸಬೇಕು. ತಾಜಾ ಹಣ್ಣಿನ ರಸಗಳು (ಕಡಿಮೆ ಸಕ್ಕರೆ  ಅಥವಾ ಸ್ವಲ್ಪ ಸಕ್ಕರೆಯೊಂದಿಗೆ ನೀಡಬಹುದು), ತೆಂಗಿನ ಎಳನೀರು, ಮಜ್ಜಿಗೆ ,ಲಸ್ಸಿ , ಪೋಪಸಿಕಲ್  – ಐಸ್ ಕ್ರೀಮ್ ಅಥವಾ ಕುಲ್ಫಿ, ತಾಜಾ ತರಕಾರಿ ಸಲಾಡ್ ಗಳು ದೇಹಕ್ಕೆ ಬೇಕಾಗುವ ನೀರಿನ ಮಟ್ಟವನ್ನು ಕಾಪಾಡಲು ಸಹಾಯ ಮಾಡುತ್ತವೆ. ಮತ್ತು ಮನೆಯಲ್ಲಿಯೇ ಶುದ್ಧವಾಗಿ ತಯಾರಿಸಿ ಕೊಡುವುದು ಆರೋಗ್ಯಕ್ಕೆ ಅತ್ಯುತ್ತಮವಾದದ್ದು.


3.ಸೂರ್ಯನ ತಾಪವನ್ನು ತಡೆಯಲು ಸನ್ ಸ್ಕ್ರೀನ ಲೋಷನ್ 

10 Summer Care Tips for babies and kids

ಸೂರ್ಯನ ಕಿರಣಗಳು ವಿಟಮಿನ್- D ನೀಡುವುದಲ್ಲದೆ, ಹಾನಿಕಾರಕ ವಿಕಿರಣಗಳನ್ನು ಬಿಡುಗಡೆಮಾಡುತ್ತದೆ, ಇದರಿಂದ ಅಲರ್ಜಿಯಾಗುವುದು ಹಾಗು ಚರ್ಮವನ್ನು ಸುಡುತ್ತದೆ. ದೊಡ್ದವರಿಗಿಂತ ಮಕ್ಕಳ ಚರ್ಮ ಹೆಚ್ಚು ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ಕಠಿಣ ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಎಚ್ಚರಿಕೆಯನ್ನು ವಹಿಸಬೇಕು. ಶಿಶುಗಳು ಮತ್ತು ಮಕ್ಕಳಿಗಾಗಿ ವಿಶೇಷವಾಗಿ ತಯಾರಿಸಲಾದ ಅನೇಕ ದ್ರವ ರೂಪದ ಔಷದ / ಲೋಷನ್ ಲಭ್ಯವಿದೆ. ಬೆಳಗಿನ ಹಾಗು ಸಂಜೆಯ ಸೌಮ್ಯವಾದ ಶಾಖವನ್ನು  ಚರ್ಮ ತಡೆದುಕೊಳ್ಳುವುದು, ಸೂರ್ಯನ ಕಿರಣಗಳ ನೇರ ಸಂಪರ್ಕವನ್ನು ತಪ್ಪಿಸಲು ಯಾವಾಗಲೂ ಆದಷ್ಟು ದೇಹ ಪೂರ್ತಿ ಮುಚ್ಚುವ ಹತ್ತಿಯ ಬಟ್ಟೆಗಳನ್ನು ಧರಿಸುವುದು ಸೂಕ್ತ.


4. ಕ್ರಿಮಿ / ಕೀಟಗಳ ನಿವಾರಣೆ ಮಾಡಬೇಕು 

10 Summer Care Tips for babies and kids

ಬೇಸಿಗೆಯಲ್ಲಿ ಸೊಳ್ಳೆಗಳು ಮತ್ತು ಇತರ ಹಾರುವ ಕೀಟಗಳ ತಳಿ ಉತ್ಪನ್ನ ಆಗುವ ಸಮಯ. ಹಾಗಾಗಿ ಮಕ್ಕಳೊಂದಿಗೆ ಹೊರಗಡೆ ನಡೆದಾಡಲು ಹೋಗುವಾಗ  ಅಥವಾ ಆ ತರಹದ ಪ್ರದೇಶಗಳಿಗೆ ಆಡಲು ಹೋದಾಗ ಮಕ್ಕಳ ತೆರೆದ ಚರ್ಮಕ್ಕೆ ಕೀಟ ನಿರೋಧಕಗಳನ್ನು ಹಚ್ಚುವುದನ್ನು ಮರೆಯಬಾರದು. ಅನಗತ್ಯ ಕೀಟ ಕಡಿತದಿಂದ ರಕ್ಷಿಸುತ್ತದೆ ಮತ್ತು ಸೋಂಕು ಅಥವಾ ಅನಾರೋಗ್ಯವನ್ನು  ತಡೆಗಟ್ಟುತ್ತದೆ. ಮಾರುಕಟ್ಟೆಯಲ್ಲಿ ವಿಶೇಷವಾಗಿ ಮಕ್ಕಳಿಗೆ ಸೊಳ್ಳೆ ಮತ್ತು ಕೀಟಗಳಿಂದ ರಕ್ಷಿಸಲು ಹಲವು ಉತ್ಪನ್ನಗಳು ಲಭ್ಯವಿದೆ.


5. ಹೊರಾಂಗಣ ಚಟುವಟಿಕೆಗಳಿಗೆ ವೇಳೆಯನ್ನು ನಿಯೋಜಿಸಬೇಕು 

10 Summer Care Tips for babies and kids

ಬೇಸಿಗೆಯಲ್ಲಿ ಸೂರ್ಯನ ಉಷ್ಣತೆ ಬೆಳಗ್ಗೆ 11.00 ರಿಂದ ಮಧ್ಯಾಹ್ನ 4.00 ತನಕ ಅತ್ಯಂತ ಜಾಸ್ತಿ ಇರುತ್ತದೆ. ಸೂರ್ಯನ ಬೆಳಕು / ಶಾಖ ಹಾಗು ಬಿಸಿಲಿನ ಹೊಡೆತ ಸಹಿಸಿಕೊಳ್ಳುವುದು ಕಷ್ಟಕರ. ಬಿಸಿಲಿನ ಸಮಯವನ್ನು ಬಿಟ್ಟು, ನಂತರ ಅಥವಾ ಮೊದಲು ಪ್ರವಾಸದ ಯೋಜನೆ ಮತ್ತು ಇತರ ಕೆಲಸಗಳನ್ನು  ಮಾಡಿಕೊಳ್ಳಿ. ತಿಳಿ ಬಣ್ಣದ ಛತ್ರಿಯನ್ನು ಬಳಸಬೇಕು, ಆಗಾಗ್ಗೆ ನೆರಲಳಿರುವ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಬೇಕು.


6. ಸ್ನಾನ ಮಾಡುವಾಗ ವಹಿಸಬೇಕಾದ ಕಾಳಜಿ 

10 Summer Care Tips for babies and kids

ಬೇಸಿಗೆಯಲ್ಲಿ ಸ್ನಾನ ಮಾಡುವುದರಿಂದ ದೇಹ ತಣ್ಣಗಾಗಲು ಸಹಾಯವಾಗುತ್ತದೆ. ಎಲ್ಲಾ ಶಿಶುಗಳು ಮತ್ತು ಮಕ್ಕಳು ಹೆಚ್ಚಾಗಿ ಸ್ನಾನದ ಸಮಯವನ್ನು ಆನಂದಿಸುತ್ತಾರೆ ಮತ್ತು ನೀರಿನಿಂದ ಆಡಲು ಬಯಸುತ್ತಾರೆ. ತಾಪಮಾನ ಅಥವಾ ಶಾಖ ಜಾಸ್ತಿ ಇರುವಾಗ ಎರಡು ಬಾರಿ ಸ್ನಾನ ಮಾಡುವುದರಿಂದ ಯಾವುದೇ ಹಾನಿ ಇಲ್ಲ.


7. ಜಂಕ್ ಆಹಾರವನ್ನು ತಪ್ಪಿಸಿಬೇಕು

10 Summer Care Tips for babies and kids

ನಮ್ಮ ದಿನನಿತ್ಯದ ಜೀವನಶೈಲಿಯಲ್ಲಿ  ಜಂಕ್ ಆಹಾರ ಒಂದು ಭಾಗವಾಗಿದೆ. ಇಂತಹ ಆಹಾರದಲ್ಲಿ ಯಾವುದೇ ಪೌಷ್ಠಿಕಾಂಶವಿರುವುದಿಲ್ಲ. ಬೇಸಿಗೆಯಲ್ಲಿ ಜಂಕ್ ಆಹಾರದಿಂದ ಅಜೀರ್ಣ ಮುಂತಾದ ಸಮಸ್ಯೆ ಎದುರಿಸಬೇಕಾಗುತ್ತೆದೆ. ಮಕ್ಕಳ ಆಹಾರದ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸಬೇಕು ಮತ್ತು ಎಚ್ಚರಿಕೆಯಿಂದ ಇರಬೇಕು. ಆಹಾರದಲ್ಲಿರುವ ಸಂರಕ್ಷಕ ಕಡಿಮೆಯಾಗುವುದರಿಂದ ಹಾಳಾಗುವುದು ಮತ್ತು ಅವುಗಳ ಮೂಲಕ ಸೋಂಕು ಹರಡುವ ಸಾಧ್ಯತೆಗಳಿರುತ್ತದೆ. ಮನೆಯಲ್ಲೇ ತಯಾರಿಸಿದ ತಾಜಾ ಆಹಾರ ಸೇವಿಸುವುದು ಉತ್ತಮ.ಬೇಯಿಸದೆ ಇರುವ ರಸ್ತೆಯಲ್ಲಿ ಸಿಗುವ ಆಹಾರ ದಯವಿಟ್ಟು ತಿನ್ನಬೇಡಿ.             


8. ದೇಹದ ತಾಪಮಾನವನ್ನು ನಿಯಂತ್ರಿಸಬೇಕು 

10 Summer Care Tips for babies and kids

ಬೇಸಿಗೆ ಕಾಲದಲ್ಲಿ ಹವಾ ನಿಯಂತ್ರಿತ ಯಂತ್ರ (ಏರ್ ಕಂಡಿಷನರ್ಗಳು) ನೀಡುವ ತಂಪಾದ ಗಾಳಿ ಎಲ್ಲರು ಸೆಖೆಯ ಉಪಶಮನಕ್ಕೆ ಬಯಸುತ್ತಾರೆ, ಆದರೆ ಹವಾ ನಿಯಂತ್ರಿತ ಯಂತ್ರದಿಂದ  ಹೊರ ಪರಿಸರಕ್ಕೆ ಹೋದಾಗ ತಾಪಮಾನ ಬದಲಾವಣೆಯಿಂದಾಗಿ ಸಾಮಾನ್ಯ ದೇಹ ತಾಪಮಾನದಲ್ಲಿ ಅಸಮತೋಲನದಿಂದ ಸಮಸ್ಯೆಯಾಗಬಹುದು. ಆದ್ದರಿಂದ, ಎಸಿ ಕೋಣೆಯಿಂದ ಹೊರ ಬರುವ ಹಾಗು ಹೋಗುವ ಮೊದಲು 15 ನಿಮಿಷಗಳ ಕಾಲ ಮುಂಚೆ ಆರಿಸಿ. ಹೀಗೆ ಮಾಡುವುದರಿಂದ ಉತ್ತಮ ರೀತಿಯಲ್ಲಿ ಉಷ್ಣತೆಯ ವ್ಯತ್ಯಾಸಗಳನ್ನು ಸರಿಹೊಂದಿಸಲು ದೇಹಕ್ಕೆ ಸಹಾಯ ಮಾಡುತ್ತದೆ.


9. ಕಣ್ಣುಗಳ ಆರೈಕೆ 

10 Summer Care Tips for babies and kids

ಬೇಸಿಗೆಯಲ್ಲಿ ಕಣ್ಣು ಮತ್ತು ಚರ್ಮವು ಹೆಚ್ಚು ಬಿಸಿಲಿಗೆ ಒಡ್ಡಲ್ಪಡುತ್ತದೆ ಮತ್ತು ಪೀಡಿತ ಭಾಗಗಳಾಗಿವೆ. ಹೆಚ್ಚುವರಿ ಶಾಖ, ಉಷ್ಣತೆ  ಇನ್ನೂ ಕೆಟ್ಟ ಪರಿಣಾಮ ಬೀರುತ್ತದೆ. ವಿಶಾಲವಾದ ಅಂಚಿನ ಟೋಪಿಯನ್ನು ಧರಿಸುವುದರಿಂದ ಕಣ್ಣುಗಳಿಗೆ ನೆರಳು ನೀಡುವುದು. ಮುಖ್ಯವಾಗಿ UV ನೇರಳಾತೀತ ಕಿರಣಗಳಿಂದ ಸಂರಕ್ಷಣೆ ಇರುವ ಕನ್ನಡಕಗಳು ಬಳಸುವುದರಿಂದ  ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡವುದು.


10. ವಿಶ್ರಾಂತಿಯ ಅಗತ್ಯವಿರುವುದು 

10 Summer Care Tips for babies and kids

ಬೇಸಿಗೆಯಲ್ಲಿ ಬಿಸಿಲಿನ ತಾಪ ಮಕ್ಕಳ ದೇಹದ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಉಷ್ಣಾಂಶದ ಕಾರಣ, ದೇಹವು ಸುಲಭವಾಗಿ ದಣಿಯುವುದು ಮತ್ತು ರೋಗ ನಿರೋಧಕ ಶಕ್ತಿ ಸುಧಾರಿಸಲು ಹೆಚ್ಚು ವಿಶ್ರಾಂತಿ ಅಗತ್ಯವಿರುತ್ತದೆ.  ಬಿಸಿಲಿನ ಸಮಯವನ್ನು ಬಿಟ್ಟು ಹೆಚ್ಚು ಸಕ್ರಿಯವಾಗಿರಲು ಶಿಶುಗಳು ಮತ್ತು ಮಕ್ಕಳು ಸ್ವಲ್ಪ ಹೆಚ್ಚು ನಿದ್ದೆ ಮಾಡಲು ಬಿಡಬೇಕು. ವಿಶ್ರಾಂತಿಗೆ  ಊಟದ ನಂತರ ಮಧ್ಯಾಹ್ನ ಚಿಕ್ಕನಿದ್ರೆ ಮಾಡಿ ದಣಿವನ್ನು ಕಡಿಮೆ ಮಾಡಲು ಉತ್ತಮ ಸಮಯವಾಗುವುದು.

ಬೇಸಿಗೆಯಲ್ಲಿ ಶಿಶುಗಳಲ್ಲಿ ತುರಿಕೆ, ಚರ್ಮದ ಸೋಂಕು, ಜ್ವರ, ಶಾಖದ ದದ್ದುಗಳು ವಾಂತಿ ಮಾಡುವಂತಹ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಸಲಹೆ ಇಲ್ಲದೆ ವೈದ್ಯಕೀಯ ಚಿಕಿತ್ಸೆ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಾಗುವಂತೆ ಔಷಧಿಗಳನ್ನು ಖರೀದಿಸಿ ನೀಡಬೇಡಿ. ವೈದ್ಯರ ಸಲಹೆ ಇಲ್ಲದೆ ನೀಡುವುದು ಅಪಾಯಕಾರಿ. ದಯವಿಟ್ಟು  ಶಿಶುವೈದ್ಯರನ್ನು/ ಮಕ್ಕಳ ತಜ್ಞರನ್ನು ಭೇಟಿ ಮಾಡಿ ಅವರ ಸಲಹೆ ಸೂಚನೆಗಳನ್ನು ಅನುಸರಿಸಿ!


ಬೇಸಿಗೆಯಲ್ಲಿ ಶಿಶುಗಳು ಮತ್ತು ಮಕ್ಕಳ ಆರೈಕೆ | Summer Care for Babies in Kannada

ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ನಮ್ಮನ್ನು Facebook Page  & YouTube Channel ನಲ್ಲಿ ಭೇಟಿ ಮಾಡಿ.


Spread the love